12th March 2026
Share

TUMAKURU:SHAKTHIPEETA FOUNDATION

 ಕ್ರಮಾಂಕ:ತುವಿ/ಟಿ/4/2024                                    ದಿನಾಂಕ:06.10.2024

ಗೆ.

ಶ್ರೀ ಎಂ.ವೆಂಕಟೇಶ್ವರಲುರವರು.

ಮಾನ್ಯ ಕುಲಪತಿಗಳು ಹಾಗೂ

ಅಧ್ಯಕ್ಷರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ.

ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

ಮಾನ್ಯರೇ

ವಿಷಯ:- ಅನಿವಾಸಿ ಭಾರತೀಯ ಸಮಿತಿಯ ಕೆಳಕಂಡವರಿಗೆ ಪತ್ರ ಬರೆಯುವ ಬಗ್ಗೆ.

 ಅನಿವಾಸಿ ಭಾರತೀಯ ಸಮಿತಿ ಅಧಿಕಾರಿಗಳು, ಅನಿವಾಸಿಗಳು ಹಾಗೂ ಅನಿವಾಸಿ ಪೋಷಕರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಲಾಗಿದೆ. ಒಂದು ಉತ್ತಮವಾದ ಮಾರ್ಗದರ್ಶಿ ಸೂತ್ರ ರೂಪಿಸಿ, ಈ ಕೆಳಕಂಡ ಅಂಶಗಳು ಹಾಗೂ ಅನಿವಾಸಿ ಭಾರತೀಯ ಸಮಿತಿಯ, ಸಲಹೆಗಳ ಮೇರೆಗೆ ಒಂದು ರಾಜ್ಯ ಮಟ್ಟದ ‘ಎನ್.ಆರ್.ಭವನ’ವನ್ನು ತುಮಕೂರಿನಲ್ಲಿ ಸ್ಥಾಪಿಸಿ, ನಂತರ 31 ಜಿಲ್ಲೆಗಳಲ್ಲಿ ಸ್ಥಾಪಿಸಲು  ಮಾನಿಟರಿಂಗ್ ಸೆಲ್’ ರೀತಿ ಕಾರ್ಯ ನಿರ್ವಹಿಸಲು ಒಂದು ‘ಅದ್ಯಯನ ವರದಿ’ ಸಿದ್ಧಪಡಿಸಲು ಹಾಗೂ ಒಂದು ದಿನದ ಜಾಗೃತಿ ಸಭೆ’ ನಡೆಸಲು, ಕೆಳಕಂಡ ವಿಳಾಸಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಲು ಈ ಮೂಲಕ ಕೋರಿದೆ.

ಶ್ರೀ ಸಿದ್ಧರಾಮಯ್ಯನವರು.

ಮಾನ್ಯ ಮುಖ್ಯಮಂತ್ರಿಗಳು ಹಾಗೂ

ಅಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ.ಕರ್ನಾಟಕ ಸರ್ಕಾರ.

3 ನೇ ಮಹಡಿ, ವಿಧಾನಸೌಧ, ಬೆಂಗಳೂರು-560001

ಡಾ.ಆರತಿ ಕೃಷ್ಣ

ಮಾನ್ಯ ಉಪಾಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ.ಕರ್ನಾಟಕ ಸರ್ಕಾರ.

2 ನೇ ಮಹಡಿ, ವಿಕಾಸಸೌಧ, ಬೆಂಗಳೂರು-56000

ಶ್ರೀಮತಿ ಲಕ್ಷ್ಮಮ್ಮ.ಪಿ.

ಸದಸ್ಯ ಕಾರ್ಯದರ್ಶಿ, ಅನಿವಾಸಿ ಭಾರತೀಯ ಸಮಿತಿ.ಕರ್ನಾಟಕ ಸರ್ಕಾರ.

3 ನೇ ಮಹಡಿ, 4 ನೇ ಗೇಟ್, ಎಂ.ಎಸ್.ಬಿಲ್ಡಿಂಗ್

ಬೆಂಗಳೂರು-560001

ತುಮಕೂರು ಜಿಲ್ಲಾ ಮಟ್ಟದ ಎನ್.ಆರ್.ಐ/ಎನ್.ಆರ್.ಕೆ ಮತ್ತು ಕೆಳಕಂಡ ವಿಚಾರಗಳ ಅದ್ಯಯನ ವರದಿ ಸಿದ್ಧಪಡಿಸುವ ಜಾಗೃತಿ ಸಭೆ

ಎನ್.ಆರ್.ಕರ್ನಾಟಕ ಫೋರಂ ಮತ್ತು ತುಮಕೂರು ವಿಶ್ವವಿದ್ಯಾನಿಲಯದಲ್ಲಿರುವ

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಸಂಯುಕ್ತಾಶ್ರಯದಲ್ಲಿ

1.ಎನ್.ಆರ್.ಐ/ಎನ್.ಆರ್.ಕೆ ರವರಿಂದ ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು, ತುಮಕೂರು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ, ಮೆಡಿಕಲ್ ಕಾಲೇಜುಗಳು, ಇಂಜಿನಿಯರ್ ಕಾಲೇಜುಗಳಲ್ಲಿ ಕೇಂದ್ರ ಸರ್ಕಾರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮೂಲಕ, ಆಯಾ ಗ್ರಾಮದ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿ, ಅವರವರ ಹುಟ್ಟೂರಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅವರ ಊರಿನ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ @ 2027 ರಚಿಸಿ, ಒಬ್ಬರು ಡಾಟಾ ಮಿತ್ರ ನೇಮಿಸಿಕೊಂಡು, ಆಯಾ ಊರಿನ ಅನಿವಾಸಿ ಭಾರತೀಯ, ಅನಿವಾಸಿ ಕರ್ನಾಟಕ, ಅನಿವಾಸಿ ಗ್ರಾಮವಾರು ಪಟ್ಟಿ ಮಾಡಿ, ಆಯಾ ಊರಿನ ಇನ್ನೋವೇಷನ್,ಸಂಶೋಧನೆ ಮಾಡುವ ಎಲ್ಲಾ ವರ್ಗದವರಿಗೆ ನೇರವಾಗಿ ಡಿಬಿಟಿ ಮೂಲಕ ನೀಡ್ ಬೇಸ್ಡ್ ಆರ್ಥಿಕ ನೆರವು ಮತ್ತು ಅವರವರ ಹುಟ್ಟೂರಿನ ಥೀಮ್ ಪಾರ್ಕ್ @ 2047 ನಿರ್ಮಾಣ ಮಾಡಲು ಆಸಕ್ತರ ಮಾಹಿತಿ ಸಂಗ್ರಹ ಮತ್ತು ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ಮತ್ತು ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕ ಆರ್ಥಿಕ ನೆರವು ದೊರಕಿಸುವುದು.

2.ಎನ್.ಆರ್.ಐ/ಎನ್.ಆರ್.ಕೆ ರವರಿಂದ ಆಯಾ ಊರಿನ ಜಲಸಂಗ್ರಹಾಗಾರಗಳನ್ನು ದತ್ತು ಸ್ವೀಕರಿಸಿ, ಸುತ್ತಲೂ ಮರ-ಗಿಡ ಹಾಕಿ ಬೆಳೆಸಿ, ಗಂಗಾಮಾತಾ ದೇವಾಲಯ ಎಂದು ಪೂಜಿಸುವವರಿಗೆ ನೇರವಾಗಿ ಡಿಬಿಟಿ ಮೂಲಕ ನೀಡ್ ಬೇಸ್ಡ್ ಆರ್ಥಿಕ ನೆರವು ನೀಡುವವರ ಮಾಹಿತಿ ಸಂಗ್ರಹ.

3.ಪ್ರಪಂಚದ 197 ದೇಶಗಳಲ್ಲಿ ನೆಲಸಿರುವ ಆಸಕ್ತ ಎನ್.ಆರ್.ಐ/ಎನ್.ಆರ್.ಕೆ ಅಸೋಶೀಯೇಷನ್‍ಗಳಿಗೆ/ ವ್ಯಕ್ತಿಗತವಾಗಿ ಅಗತ್ಯವಿರುವ ಕರ್ನಾಟಕದ ಉತ್ಪನ್ನಗಳ ರಫ್ತು ವ್ಯವಹಾರ ನಡೆಸುವ ಆಸಕ್ತರ ಪರಿಕಲ್ಪನೆ ಮತ್ತು ಎಲ್ಲಾ ದೇಶಗಳಲ್ಲಿ ಭಾರತ ಮಾಲ್ ಎಂಬ ಹೆಸರಿನ ಮಾರಾಟ ಮಳಿಗೆ ಸ್ಥಾಪಿಸಲು ಆಸಕ್ತಿ ಇರುವವರ ಮಾಹಿತಿ ಸಂಗ್ರಹ.

4.ಕರ್ನಾಟಕಕ್ಕೆ ಹಿಂದಿರುಗಿ ಬಂದು ನೆಲಸಿರುವ ಎನ್.ಆರ್.ಐ/ಎನ್.ಆರ್.ಕೆ ರವರ ಅನುಭವಗಳು.

5.ಹೊಸದಾಗಿ ಪ್ರಪಂಚದ 197 ದೇಶಗಳಿಗೆ ಹೋಗಲು ಇಚ್ಚಿಸುವವರ ಕನಸುಗಳು.

6.ಪ್ರಪಂಚದ 197 ದೇಶಗಳಲ್ಲಿ ನೆಲಸಿರುವ ಆಸಕ್ತ ಎನ್.ಆರ್.ಐ/ಎನ್.ಆರ್.ಕೆ ಮತ್ತು ಅಸೋಶೀಯೇಷನ್‍ಗಳ ಅನುಭವದ ಸಲಹೆಗಳು.

7.ಎನ್.ಆರ್.ಐ/ಎನ್.ಆರ್.ಕೆ ಪೋಷಕರ ಆರೋಗ್ಯದ/ಸಂರಕ್ಷಣೆಯ/ ವೃದ್ದಾಶ್ರಮ/ನೇಚರ್ ಕ್ಯೂರ್ ಸೆಂಟರ್ ಕ್ಯಾಂಪಸ್ ನಿರ್ಮಾಣದ ಅಧ್ಯಯನ ವರದಿ.

8.ಎನ್.ಆರ್.ಐ/ಎನ್.ಆರ್.ಕೆ ಪೋಷಕರ ಸ್ವತ್ತಿನ/ ಹೊಸದಾಗಿ ಹೂಡಿಕೆ ಮಾಡುವವರ ಆಸ್ತಿಗಳ ರಕ್ಷಣೆಯ ಸಮಸ್ಯೆಗಳ ಅಧ್ಯಯನ ವರದಿ.

9.ಎನ್.ಆರ್.ಐ/ಎನ್.ಆರ್.ಕೆ ಭವನ ನಿರ್ಮಾಣಕ್ಕೆ ಸಲಹೆಗಳು.

10.ಎನ್.ಆರ್.ಐ/ಎನ್.ಆರ್.ಕೆ ಪೋಷಕರುಗಳಿಗೆ ವಿಶ್ವದ 108 ಶಕ್ತಿಪೀಠಗಳ ಅಥವಾ ಅವರವರ ಧರ್ಮಗಳ ಯಾತ್ರಾ ಸ್ಥಳಗಳಿಗೆ ಪ್ರವಾಸ ಮಾಡಿಸುವವರ ಮಾಹಿತಿ ಸಂಗ್ರಹ.

11.ಪ್ರವಾಸೋಧ್ಯಮ ಸ್ಥಳಗಳಲ್ಲಿ ವಿಧಾನಸಭಾ ಸದಸ್ಯರಿಗೊಂದು ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

12.ಪ್ರವಾಸೋಧ್ಯಮ ಸ್ಥಳಗಳಲ್ಲಿ ವಿಧಾನಪರಿಷತ್ ಸದಸ್ಯರಿಗೊಂದು ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

13.ಪ್ರವಾಸೋಧ್ಯಮ ಸ್ಥಳಗಳಲ್ಲಿ ಲೋಕÀಸಭಾ ಸದಸ್ಯರಿಗೊಂದು ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

14.ಪ್ರವಾಸೋಧ್ಯಮ ಸ್ಥಳಗಳಲ್ಲಿ ರಾಜ್ಯÀಸಭಾ ಸದಸ್ಯರಿಗೊಂದು ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

15.ಪ್ರವಾಸೋಧ್ಯಮ ಸ್ಥಳಗಳಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

16.ಪ್ರವಾಸೋಧ್ಯಮ ಸ್ಥಳಗಳಲ್ಲಿ ಜಿಲ್ಲಾಧಿಕಾರಿ ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

17.ಪ್ರವಾಸೋಧ್ಯಮ ಸ್ಥಳಗಳಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಅಧ್ಯಯನ ಪೀಠ/ಮ್ಯೂಸಿಯಂ  ಸ್ಥಾಪಿಸಲು ಹೂಡಿಕೆ ಮಾಡಲು ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

18.ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಉದ್ದೇಶಿತ 555 ಅಧ್ಯಯನ ಪೀಠಗಳ ಸ್ಥಾಪನೆಗೆ ಆಸಕ್ತರ ಎನ್.ಆರ್.ಐ/ಎನ್.ಆರ್.ಕೆ  ಮಾಹಿತಿ ಸಂಗ್ರಹ.

ವಂದನೆಗಳೊಂದಿಗೆ                                           ತಮ್ಮ ವಿಶ್ವಾಸಿ

                                                                 (ಕುಂದರನಹಳ್ಳಿ ರಮೇಶ್)