TUMAKURU:SHAKTHIPEETA FOUNDATION
ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್, ಇನ್ನೂ ಯಾವುದೇ ಹೆಸರು/ ನಾಮಕರಣ ಮಾಡದ ಭ್ರೂಣಾವಸ್ಥೆಯಲ್ಲಿರುವ ಒಂದು ಪರಿಕಲ್ಪನೆ. ವಿಶ್ವದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳಲ್ಲಿ ಮಾನವೀಯತೆ ವಿಶ್ವ ವಿದ್ಯಾನಿಲಯಗಳ ಪಟ್ಟಿ ಗಮನಿಸಿದಾಗ ಕೆಳಕಂಡ 8 ವಿಶ್ವ ವಿದ್ಯಾನಿಲಯಗಳು ಬೆಳಕು ಚೆಲ್ಲುತ್ತವೆ.
- Harvard University -USA
- University Of Oxford -UK
- Stanford University -USA
- University Of Cambridge-UK
- University Of Melbourne-Australia
- University Of Tokyo –Japan
- National University Of Singapore- Singapore
- University OF British Columbia- Canada
- ? ? ?
ಭಾರತ ದೇಶ, ಈ ಪಟ್ಟಿಯಲ್ಲಿ ಬರಬೇಕು ಎಂಬ ಕನಸು ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಸೇರಿದಂತೆ ಹಲವರ ಕನಸಾಗಿದೆ. 2000 ನೇ ಸಾಲಿನಲ್ಲಿ, ತುಮಕೂರಿಗೊಂದು ಯೂನಿವರ್ಸಿಟಿ ಬೇಕು ಎಂದು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹೇಳಿದಾಗ, ಆಗಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ, ಆಗಿನ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ಪತ್ರ ಬರೆಸಿದಾಗ, ನಕ್ಕವರೇ ಜಾಸ್ತಿ. ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯದ ಕನಸಿಗೆ ಅಣಕವಾಡದೇ ಇರುತ್ತಾರೆಯೇ?
ನಂತರ ಇನ್ನೋವೇಷನ್ ಯೂನಿವರ್ಸಿಟಿ ಸ್ಥಾಪಿಸಲು ಪ್ರಯತ್ನಿಸಿದಾಗ ಕೊನೆಗಾಣಿಸಲು ಸಾದ್ಯಾವಾಗಲಿಲ್ಲ. ಈಗ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್ ಸ್ಥಾಪನೆ ಬಗ್ಗೆ ಅಧ್ಯಯನ ಆರಂಭಿಸಿದಾಗ ಕಣ್ಣಿಗೆ ಬೀಳುವ, ಕಿವಿಗೆ ಕೇಳುವ ವಿಚಾರಗಳು ಹಲವಾರು.
- ELETRONIC CITY
- HIGH TECH CITY
- KWIN CITY – KNOWLEDGE, WELBEING AND INNOVATION CITY
- SILICON CITY
ಮೊದಲ ಎರಡು ಬೆಂಗಳೂರು ನಗರದಲ್ಲಿ ಈಗಾಗಲೇ ತಲೆ ಎತ್ತಿವೆ. ಮೂರನೆಯದು ದಾಬಸ್ ಪೇಟೆ ಬಳಿ ಜನ್ಮ ತಾಳಲಿದೆ. ನಾಲ್ಕನೆಯದನ್ನು ತುಮಕೂರಿನಲ್ಲಿ ಸ್ಥಾಪಿಸಲು ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯೆಲ್ ರವರು, ಶ್ರೀ ಎಂ.ಬಿ.ಪಾಟೀಲ್‍ರವರ ಗಮನ ಸೆಳೆದಾಗ ಅವರು ಕ್ವೀನ್ ಸಿಟಿ ಪರಿಕಲ್ಪನೆ ಬಗ್ಗೆ ಮಾತನಾಡಿದ್ದಾರೆ ಎಂಬ ಸುದ್ಧಿ ಹಬ್ಬಿದೆ.
ಕ್ವೀನ್ ಸಿಟಿ ಮತ್ತು ಸಿಲಿಕಾನ್ ಸಿಟಿ ಪರಿಕಲ್ಪನೆ ಬಗ್ಗೆ ಆಳವಾದ ಜ್ಞಾನದ ಅವಶ್ಯಕತೆಯಿದೆ. ಯೋಜನೆಯ ಬೆನ್ನು ಹತ್ತಿದಾಗ ಒಂದು ಹೊಸಲೋಕವೇ ಕಣ್ಣಿಗೆ ಕಾಣಲಿದೆ. ಇದೊಂದು ವಿಶ್ವದರ್ಜೆಯ ಕನಸು. ಈ ಪರಿಕಲ್ಪನೆ ಎಲ್ಲಿಂದ ಜನ್ಮ ತಾಳಿತು, ಕನಸುದಾರರು ಯಾರು ಎಂಬ, ಮೂಲ ಮಾಹಿತಿ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ರಾಜ್ಯದ 31 ಜಿಲ್ಲೆಗಳಲ್ಲೂ ಈ ಮಟ್ಟದಲ್ಲಿ ಸಾದ್ಯಾವಾಗದಿದ್ದರೂ, ಒಂದೊಂದು ಪರಿಕಲ್ಪನೆ ಅಡಿಯಲ್ಲಿ ವಿಶಿಷ್ಠವಾದ ಯೋಜನೆ ತಲೆ ಎತ್ತಲೇ ಬೇಕು. ಅದರಲ್ಲಿ ಎರಡು ಮಾತಿಲ್ಲ.ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಬೇಕೆ ಬೇಕು.
ಮಂಗಳೂರಿನ ಪಿಲಿಕುಳ ಯೋಜನೆ ಜೊತೆಗೆ, ತುಮಕೂರು ಜಿಲ್ಲೆಯ ಶಿರಾದ ಕರ್ನಾಟಕ ಹೆರಿಟೇಜ್ ಹಬ್ ಪರಿಕಲ್ಪನೆ, ಕಲಾಗ್ರಾಮ, ಪತಂಗಗಳ ಲೋಕ, ಬಿಹಾರ ಮ್ಯೂಸಿಯಂ ಮಾಡೆಲ್, ಚಿತ್ರದುರ್ಗ ಜಿಲ್ಲೆಯಲ್ಲಿ ರಾಕ್ ಮ್ಯೂಸಿಯಂ, ವಾಟರ್ ಮ್ಯೂಸಿಯಂ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್, ಚಿಕ್ಕಬಳ್ಳಾಪುರದಲ್ಲಿ ಹೆಚ್. ನರಸಿಂಹಯ್ಯನವರ ಹೆಸರಿನ ಹೊಸ ಪ್ರಸ್ತಾವನೆ. ಹೀಗೆ ಹಲವಾರು ಯೋಜನೆಗಳು ಚರ್ಚೆಯ ಹಂತದಲ್ಲಿ ಇವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೂಲಭೂತ ಸೌಕರ್ಯ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳು ನಡೆಸಿರುವ ಪ್ರಯತ್ನದÀ ವರದಿಗಳು, ಒಂದೇ ಕಡೆ ಸಿಗದೆ ಇರುವುದು ಒಂದು ಸಮಸ್ಯೆ ಆಗಿದೆ.
ಈ ಬಗ್ಗೆ ಜ್ಞಾನ ಇರುವವರು ಹಂಚಿಕೊಳ್ಳಲು ಬಹಿರಂಗ ಮನವಿ ಮಾಡಲಾಗಿದೆ.