18th October 2024
Share

TUMAKURU:SHAKTHIPEETA FOUNDATION

ದಿನಾಂಕ:17.10.2024 ರಂದು ಬರೆದ ಪತ್ರದ ಸಾರಾಂಶ.

ಗೆ

ಶ್ರೀ ಎಂ.ವೆಂಕಟೇಶ್ವರಲುರವರು.

ಮಾನ್ಯ ಕುಲಪತಿಗಳು ಹಾಗೂ

ಅಧ್ಯಕ್ಷರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ.

ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

ಮಾನ್ಯರೇ

ವಿಷಯ:-  ವಾಲ್ಮೀಕಿ ರಾಮಾಯಣ ಬರೆದರು – ತುಮಕೂರು ಜಿಲ್ಲಾ ವಿದ್ಯಾರ್ಥಿಗಳು ? ಬರೆಯಲಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ತುಮಕೂರು ರೀಸರ್ಚ್ ಫೌಂಡೇಷನ್ @ 2047 ‘ ಸ್ಥಾಪಿಸಿ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ ರಚಿಸಿ ಕಾÀರ್ಯೋನ್ಮುಖವಾಗಿರುವುದು ಹರ್ಷ ತಂದಿದೆ.

ನನಗೂ ಅದರಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿರುವುದು, ನನ್ನ ಕನಸಿನ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಅಧ್ಯಯನ ವರದಿಯ ಅನುಷ್ಠಾನಕ್ಕಾಗಿ ‘ತುಮಕೂರು ಜಿಲ್ಲೆ ಪೈಲಟ್ ಯೋಜನೆ’ಯಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ವಿಶ್ವ ವಿದ್ಯಾನಿಲಯದ ತೀರ್ಮಾನ ಸ್ವಾಗತಾರ್ಹ.

  ಕಾಕತಾಳೀಯ ಇಂದೇ ವಾಲ್ಮೀಕಿ ದಿನಾಚರಣೆ, ವಾಲ್ಮೀಕಿ ರಾಮಾಯಣ ಬರೆದರು – ತುಮಕೂರು ಜಿಲ್ಲಾ ವಿದ್ಯಾರ್ಥಿಗಳು ಭವಿಷ್ಯದ ತುಮಕೂರು  ಜಾತಕ ಬರೆಯಲಿದ್ದಾರೆ’  ಈ ಪತ್ರದ ಜೊತೆ ಲಗತ್ತಿಸಿರುವ 23 ಅಧ್ಯಯನ ಪೀಠ/ಮ್ಯೂಸಿಯಂ ಸ್ಥಾಪಿಸಲು ಸರ್ಕಾರಿ ಜಮೀನು ಕಾಯ್ದಿರಿಸಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಮತ್ತು ಶೀಪಾರಸ್ಸು ಮಾಡಲು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ತಾವೂ ಸಹ ಪತ್ರ ಬರೆಯಲು ಈ ಮೂಲಕ ಕೋರಿದೆ.

                                                   (ಕುಂದರನಹಳ್ಳಿ ರಮೇಶ್)

                                                          ಗೌರವ ಅಧ್ಯಕ್ಷ.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ, ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು