28th January 2025
Share

TUMAKURU:SHAKTHIPEETA FOUNDATION

 ತುಮಕೂರು ವಿಶ್ವ ವಿದ್ಯಾನಿಲಯ ತಿಪಟೂರು ಎ.ಪಿ.ಎಂ.ಸಿ ಆವರಣದಲ್ಲಿ  ಕೋಕನಟ್ ರೀಸರ್ಚ್ ಸೆಂಟರ್ ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಗೆ ತೆಂಗು ಆಯ್ಕೆ ಆಗಿದೆ.

ತುಮಕೂರು ಜಿಲ್ಲೆಯಲ್ಲಿ ಕೋಕನಟ್ ಸ್ಪೆಷಲ್ ಎಕನಾಮಿಕ್ ಝೋನ್’ ಆರಂಬಿಸಬೇಕು ಎಂಬ ಬಗ್ಗೆ ಬಹಳ ವರ್ಷಗಳಿಂದ ಚಿಂತನೆ ನಡೆದಿದೆ. ತಿಪಟೂರು, ಶಿರಾ, ಕುಣಿಗಲ್‍ನಲ್ಲಿ ‘ಕೋಕನಟ್ ಪಾರ್ಕ್’ ಸ್ಥಾಪಿಸಲು ರಾಜ್ಯ ಸರ್ಕಾರದ ಆಯವ್ಯಯದಲ್ಲಿ, ಬಹಳ ವರ್ಷಗಳಿಂದ ಹಿಂದೆ ಘೋಷಣೆ ಮಾಡಿದ್ದರೂ ಇದೂವರೆಗೂ ಸಾಧ್ಯಾವಾಗಿಲ್ಲ. ಶಿರಾದಲ್ಲಂತೂ ಜಮೀನು ಸಹ ಮಂಜೂರಾಗಿತ್ತು.

ದಿನಾಂಕ:21.10.2024 ರಂದು ತುಮಕೂರು ವಿಶ್ವ ವಿದ್ಯಾನಿಲಯ ಬಿದರೆಕಟ್ಟೆ ಜ್ಞಾನಸಿರಿ ಕ್ಯಾಂಪಸ್ ನಲ್ಲಿ ಕೋಕನಟ್ ರೀಸರ್ಚ್ ಸೆಂಟರ್ ಪರಿಕಲ್ಪನಾ ವರದಿಯನ್ನು, ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು ನೀಡಿದರು, ಜೊತೆಯಲ್ಲಿ ಡಾ.ಶರತ್ಚಂದ್ರರವರು, ಡಾ.ಸುರೇಶ್‍ರವರು ಇದ್ದರು.

ಒಂದು ಜಿಲ್ಲೆ ಒಂದು ಉತ್ಪನ್ನ ನೋಡೆಲ್ ಅಧಿಕಾರಿ, ಕೃಷಿ ಇಲಾಖೆ ಜಂಟಿನಿರ್ದೇಶಕರಾದ ಶ್ರೀ ರಮೇಶ್ ರವರು, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಶಾರದಮ್ಮನವರೊಂದಿಗೆ ಡಿಜಿಟಲ್ ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲಾಧಿಕಾರಿ ಹಾಗೂ ಒಂದು ಜಿಲ್ಲೆ ಒಂದು ಉತ್ಪನ್ನ ಸಮಿತಿಯ ಅಧ್ಯಕ್ಷರು ಆಗಿರುವ ಶ್ರೀಮತಿ ಶುಭಕಲ್ಯಾಣ್ ರವರು, ಜಿಲ್ಲೆಯಲ್ಲಿ ತೆಂಗು ಪಾರ್ಕ್ ಸ್ಥಾಪಿಸಲು ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದ್ದಾರೆ.

ಹಿಂದಿನ ಹಲವಾರು ಜಿಲ್ಲಾಧಿಕಾರಿಗಳ ಅವಧಿಯಲ್ಲಿ ನಡೆಸಿದ ಸಭೆ ನಡವಳಿಕೆಗಳು, ಪತ್ರವ್ಯವಹಾರಗಳ ಕಡತಗಳು ಯಾವ ಇಲಾಖೆ ಬಳಿ ಇದೆಯೋ ಪತ್ತೆ ಹಚ್ಚ ಬೇಕಿದೆ.  ತೆಂಗು ಬಗ್ಗೆ ಜ್ಞಾನವಿರುವ ಎಲ್ಲಾ ಆಸಕ್ತರು ತಮ್ಮ ಸೂಕ್ತ ಸಲಹೆ ನೀಡಲು ಮನವಿ ಮಾಡಲಾಗಿದೆ.