1st November 2024
Share

TUMAKURU:SHAKTHIPEETA FOUNDATION

ಕ್ರಮಾಂಕ:ತುವಿ/ಟಿಪ್ಪಣೆ/ಕೊಕನಟ್/9/2024               ದಿನಾಂಕ:22.10.2024                            

ಗೆ.

ಶ್ರೀ ಎಂ.ವೆಂಕಟೇಶ್ವರಲುರವರು.

ಮಾನ್ಯ ಕುಲಪತಿಗಳು ಹಾಗೂ

ಅಧ್ಯಕ್ಷರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ.

ಅಧ್ಯಕ್ಷರು ತುಮಕೂರು ರೀಸರ್ಚ್ ಫೌಂಡೇಷನ್ @ 2047

ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

ಮಾನ್ಯರೇ

ವಿಷಯ:- ಕೋಕನಟ್ ರೀಸರ್ಚ್ ಸೆಂಟರ್  ಸ್ಥಾಪಿಸಲು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್‍ಗೆ ಅನುದಾನ ಮಂಜೂರಾತಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ 

ತಾವು ದಿನಾಂಕ:21.10.2024 ರಂದು ಮುಕ್ತವಾಗಿ ನೀಡಿದ ಕೋಕನಟ್ ರೀಸರ್ಚ್ ಸೆಂಟರ್  ವರದಿಯನ್ನು ಪರಿಶೀಲಿಸಲಾಗಿದೆ.  ಕೋಕನಟ್ ರೀಸರ್ಚ್ ಸೆಂಟರ್  ಸ್ಥಾಪಿಸಲು, ವಿಶ್ವ ವಿದ್ಯಾನಿಲಯ ಕೈಗೊಂಡಿರುವ ನಿರ್ಧಾರ ಬಹಳ ಉತ್ತಮವಾಗಿದೆ. ತೆಂಗು ಬೆಳೆಗಾರರ ಮತ್ತು ತೆಂಗು ಉತ್ಪನ್ನಗಳ ಉದ್ದಿಮೆದಾರರಿಗೆ ಹಾಗೂ ನಿರುದ್ಯೋಗಿಗಗಳಿಗೆ ವರದಾನವಾಗಲಿದೆ.

 ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಮಧ್ಯಂತರ ಕರಡು ವರದಿ ಸಲಹೆಯಂತೆ, ಪ್ರಸ್ತಾವನೆ ಸಲ್ಲಿಸುವ ಮುನ್ನ ಕೈಗೊಳ್ಳಬೇಕಾದ ಕೆಳಕಂಡ ಅಂಶಗಳ ಬಗ್ಗೆ,  ನಿಯಾಮುನುಸಾರ ಕೈಗೊಳ್ಳಬೇಕಾಗಿರುವ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಅನುಮೋದನೆ ನೀಡಿ, ಅಗತ್ಯ ಕ್ರಮಕೈಗೊಳ್ಳಲು ಮುಖ್ಯಸ್ಥರಿಗೆ ಮಾರ್ಗದರ್ಶನ ನೀಡಲು ಈ ಮೂಲಕ ಕೋರಿದೆ.

ಪ್ರಮುಖ ಅಂಶಗಳ ಮೊದಲನೇ ಪಟ್ಟಿ

1.1947 ರಿಂದ ಇದೂವರೆಗೂ ತುಮಕೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದೇಶದ ಮತ್ತು ಪ್ರಪಂಚ ವ್ಯಾಪ್ತಿಯ ತೆಂಗು ಬೆಳೆಗಾರರ ತಳಿ, ಮರಗಳ ಸಂಖ್ಯೆ, ಗ್ರಾಮವಾರು/ಬಡಾವಣೆವಾರು ವಿಸ್ತೀರ್ಣದ ಮಾಹಿತಿ ಸಂಗ್ರಹಿಸುವುದು.

2.1947 ರಿಂದ ಇದೂವರೆಗೂ ತುಮಕೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದೇಶದ ಮತ್ತು ಪ್ರಪಂಚ ವ್ಯಾಪ್ತಿಯ ತೆಂಗು ಉತ್ಪನ್ನಗಳ ಉದ್ದಿಮೆದದಾರರ ಗ್ರಾಮವಾರು/ಬಡಾವಣೆವಾರು ಮಾಹಿತಿ ಸಂಗ್ರಹಿಸುವುದು.

3.1947 ರಿಂದ ಇದೂವರೆಗೂ ತುಮಕೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದೇಶದ ಮತ್ತು ಪ್ರಪಂಚ ವ್ಯಾಪ್ತಿಯ ತೆಂಗು ಬೆಳೆಗಾರರ ಮತ್ತು ಉತ್ಪನ್ನಗಳ ಈಗಾಗಲೇ ಸಂಶೋಧನೆ ಮಾಡಿರುª ವ್ಯಕ್ತಿ, ಸಂಸ್ಥೆ, ಸರ್ಕಾರಗಳ ಗ್ರಾಮವಾರು/ಬಡಾವಣೆವಾರು ಮಾಹಿತಿ ಸಂಗ್ರಹಿಸುವುದು.

4.1947 ರಿಂದ ಇದೂವರೆಗೂ ತುಮಕೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದೇಶದ ಮತ್ತು ಪ್ರಪಂಚ ವ್ಯಾಪ್ತಿಯ ತೆಂಗು ಬೆಳೆಗಾರರ ಮತ್ತು ಉತ್ಪನ್ನಗಳಿಗೆ ಇರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ವಿಶ್ವ ಸಂಸ್ಥೆ ವ್ಯಾಪ್ತಿಯ ಇಲಾಖೆಗಳ, ನಿಗಮ, ಕಾರ್ಪೋರೇಷನ್, ಬೋರ್ಡ್‍ಗಳು ರೂಪಿಸಿರುವ ಯೋಜನೆಗಳು, ರದ್ದುಪಡಿಸುವ ಯೋಜನೆಗಳ ವಿಶ್ಲೇಷಣಾ ವರದಿಗಳ, ಸರ್ಕಾರಿ ವರದಿಗಳು ಮತ್ತು ಪರಿಣಿತರು/ತಜ್ಞರುಗಳು ನೀಡಿರುವ ವರದಿಗಳ  ಮಾಹಿತಿ ಸಂಗ್ರಹಿಸುವುದು.

5.ತೆಂಗು ಉತ್ಪನ್ನಗಳ ಯಂತ್ರೋಪಕರಗಳ ಸರಬರಾಜುದಾರರ ಮಾಹಿತಿ ಸಂಗ್ರಹಿಸುವುದು.

6.ತೆಂಗು ಉತ್ಪನ್ನಗಳ ಪಟ್ಟಿ ಮಾಡುವುದು.

7.ತೆಂಗು ಉತ್ಪನ್ನಗಳಿಗೆ ಬೇಡಿಕೆ ಇರುವÀ ಪ್ರಪಂಚದ ದೇಶಗಳ ಮತ್ತು ರಪ್ತುದಾರರ ಮಾಹಿತಿ ಸಂಗ್ರಹಿಸುವುದು.

8.ಭಾರತ ದೇಶಾದ್ಯಂತ ತೆಂಗು ಬೆಳೆಯನ್ನು ಒಂದು ಉತ್ಪನ್ನ ಒಂದು ಜಿಲ್ಲೆಗೆ ಆಯ್ಕೆ ಮಾಡಿರುವ ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳ ಮತ್ತು ಯೋಜನೆ ಅನುಷ್ಠಾನದ ಪ್ರಗತಿ ಮಾಹಿತಿ ಸಂಗ್ರಹಿಸುವುದು.

9.ಕೇಂದ್ರ ಸರ್ಕಾರದಲ್ಲಿ ತೆಂಗು ಬೆಳೆಗಾರರ ಮತ್ತು ಉತ್ಪನ್ನಗಳ ನನೆಗುದಿಗೆ ಬಿದ್ದಿರುವ ಪ್ರಸ್ತಾವನೆಗಳ ಮಾಹಿತಿ ಸಂಗ್ರಹಿಸುವುದು.

10.ತೆಂಗು ಬೆಳೆಗಾರರ ಮತ್ತು ಉದ್ದಿಮೆದಾರರ ನಿಖರವಾದ ಡಾಟಾ ಮತ್ತು ಜಿ.ಐ.ಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡುವುದು.

11.ತೆಂಗು ಬೆಳೆಗಾರರ ಮತ್ತು ಉದ್ದಿಮೆದಾರರ ಸ್ಟಾರ್ಟ್ ಅಫ್ ಕಂಪನಿಗಳ ನಿಖರವಾದ ಡಾಟಾ ಮತ್ತು ಜಿ.ಐ.ಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡುವುದು.

12.ತೆಂಗು ಬೆಳೆಗಾರರ, ಸಂಶೋಧಕರ ಮತ್ತು ಉದ್ದಿಮೆದಾರರ ನಾಲೇಡ್ಜಬಲ್ ಪರ್ಸನ್‍ಗಳ  ನಿಖರವಾದ ಡಾಟಾ ಮತ್ತು ಜಿ.ಐ.ಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡುವುದು.

13.ತೆಂಗು ಬೆಳೆಗಾರರ, ಸಂಶೋಧಕರ ಮತ್ತು ಉದ್ದಿಮೆದಾರರ ಸಾಧಕ-ಬಾಧಕಗಳ, ಅನುಭವಗಳ, ವಿವಿಧ ರೋಗಗಳ, ಕೈಗಾರಿಕಾ ಸಿಕ್ ಯುನಿಟ್‍ಗಳ  ನಿಖರವಾದ ಡಾಟಾ ಮತ್ತು ಜಿ.ಐ.ಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡುವುದು.

14.ತೆಂಗು ಬೆಳೆಗಾರರ, ಸಂಶೋಧಕರ ಮತ್ತು ಉದ್ದಿಮೆದಾರರ ಪ್ರಶಸ್ತಿ ಪುರಸ್ಕøತರ  ನಿಖರವಾದ ಡಾಟಾ ಮತ್ತು ಜಿ.ಐ.ಎಸ್ ಲೇಯರ್ ಮಾಹಿತಿ ಸಂಗ್ರಹ ಮಾಡುವುದು.

15.1947 ರಿಂದ ಇದೂವರೆಗೂ ತುಮಕೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದೇಶದ ಮತ್ತು ಪ್ರಪಂಚ ವ್ಯಾಪ್ತಿಯಲ್ಲಿ ಇರುವ  ತೆಂಗು ಬೆಳೆಗಾರರ ಮತ್ತು ಉತ್ಪನ್ನಗಳ ಮ್ಯೂಸಿಯಂ, ಪಾರ್ಕ್, ಸ್ಪೆಷಲ್ ಎಕನಾಮಿಕ್ ಝೋನ್ ಮಾಹಿತಿ ಸಂಗ್ರಹ ಮಾಡುವುದು.

16.ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಆಸಕ್ತ ಎಲ್ಲಾ ವರ್ಗದವರನ್ನು ಒಳಗೊಂಡ ಒಂದು ಸಲಹಾ ಸಮಿತಿ ರಚಿಸುವುದು ಅಗತ್ಯವಾಗಿದೆ.

17.ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್, ಪ್ರಾಜೆಕ್ಟ್ ವರ್ಕ್, ಪಿ.ಹೆಚ್.ಡಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಆಕ್ಟಿವಿಟಿ ಪಾಯಿಂಟ್ಸ್ ಗೆ ಈ ವಿಷಯಗಳನ್ನು ನೀಡುವುದು.

18.2047 ರವರೆಗೆ ಉದ್ದೇಶಿತ ಕೋಕನಟ್ ರೀಸರ್ಚ್ ಸಂಸ್ಥೆ ಕೈಗೊಳ್ಳಲಿರುವ ಕಾರ್ಯಚಟುವಟಿಕೆಗಳ ರೂಪುರೇಷೆ ಸಿದ್ಧಪಡಿಸುವುದು.

19.2047 ರವರೆಗೆ ಉದ್ದೇಶಿತ ಕೋಕನಟ್ ರೀಸರ್ಚ್ ಸಂಸ್ಥೆ ಕೈಗೊಳ್ಳಲಿರುವ ಕಾರ್ಯಚಟುವಟಿಕೆಗಳಿಗೆ ಆರಂಭದಲ್ಲಿ ಅಗತ್ಯ ಇರುವ ಅನುದಾನ ಮತ್ತು ನಂತರ ಸ್ವಂತವಾಗಿ ಆರ್ಥಿಕ ನಿರ್ವಹಣೆಯÀ ರೂಪುರೇಷೆ ಸಿದ್ಧಪಡಿಸುವುದು.

20.ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, 75 ವಿಧಾನಪÀರಿಷತ್, 28 ಜನ ಲೋಕಸಭಾ ಮತ್ತು 14 ಜನ ರಾಜ್ಯಸಭಾ ಸದಸ್ಯರ ಸಲಹೆ ಮಾರ್ಗದರ್ಶನಕ್ಕಾಗಿ ಪತ್ರ ಬರೆಯುವುದು.

 ಈ ಮೇಲ್ಕಂಡ ಮಾಹಿತಿ ಸಂಗ್ರಹಿಸಲು ಮತ್ತು ಉದ್ದೇಶಿತ ಕೋಕನಟ್ ರೀಸರ್ಚ್ ಸೆಂಟರ್ ಸ್ಥಾಪಿಸಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ವಿಶ್ವ ಸಂಸ್ಥೆಗಳ ಅನುದಾನಗಳ ಮಂಜೂರಾತಿಗೆ ನಿರಂತರವಾಗಿ ಶ್ರಮಿಸಲಾಗುವುದು ಮತ್ತು ಎಲ್ಲಾ ಅಂಶಗಳ ಸಮಾಲೋಚನೆಗಾಗಿ ತಾವೂ ನಿಗದಿಪಡಿಸಿದ ದಿನ ಭಾಗವಹಿಸಲಾಗುವುದು ಎಂಬ ಅಂಶವನ್ನು ತಮ್ಮ ಅಧ್ಯಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ                                           ತಮ್ಮ ವಿಶ್ವಾಸಿ

                                                          (ಕುಂದರನಹಳ್ಳಿ ರಮೇಶ್)

                                                          ಗೌರವ ಅಧ್ಯಕ್ಷರು,

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಲಹಾ ಸಮಿತಿ ಹಾಗೂ ಮೆಂಟರ್ ತುಮಕೂರು ರೀಸರ್ಚ್ ಫೌಂಡೇಷನ್ @ 2047 ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

 ರವಾನಿಸಲಾಗಿದೆ.

1.ಸದಸ್ಯರುಗಳು ತಮ್ಮ ಸಲಹೆ, ಅಭಿಪ್ರಾಯ ನೀಡಲು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ  ಅಧ್ಯಯನ ಪೀಠದ ಸಲಹಾ ಸಮಿತಿ. ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

2.ಶ್ರೀಮತಿ ಪಲ್ಲವಿಕುಸುಗಲ್ ರವರು, ಮುಖ್ಯಸ್ಥರು,  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ  ಅಧ್ಯಯನ ಪೀಠದ ಸಲಹಾ ಸಮಿತಿ. ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

3.ಶ್ರೀ ಡಾ. ಪರುಶುರಾಮ್ ರವರು, ಮುಖ್ಯಸ್ಥರು, ತುಮಕೂರು ರೀಸರ್ಚ್ ಫೌಂಡೇಷನ್ @ 2047. ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

4.ಶ್ರೀ ಡಾ.ಶರತ್ಚದಂದ್ರರವರು, ಮುಖ್ಯಸ್ಥರು, ಕೋಕನಟ್ ರೀಸರ್ಚ್ ಸೆಂಟರ್, ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.

5.ಮಾದ್ಯಮ ಸ್ನೇಹಿತರು, ತುಮಕೂರು ಜಿಲ್ಲೆ. ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆ ಸಂಗ್ರಹಿಸಲು ವಿಶೇಷ ವರದಿ ಮಾಡಲು ಮನವಿ ಮಾಡಲಾಗಿದೆ. 

6.ಶಕ್ತಿಪೀಠ ಇ-ಪೇಪರ್ ಓದುಗರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆ ನೀಡಲು ಮನವಿ ಮಾಡಲಾಗಿದೆ.