31st October 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತುಮಕೂರು ರೀಸರ್ಚ್ ಫೌಂಡೇಷನ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸಹಭಾಗಿತ್ವದಲ್ಲಿ,   ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸೆಲ್’ ಆರಂಭಿಸಲು ಸಮಾಲೋಚನೆ ನಡೆಸಲಾಯಿತು.

     ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ದೇಶದ ಪ್ರತಿಯೊಂದು ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸೆಲ್’ ನೇತೃತ್ವದಲ್ಲಿ ರಚಿಸಿರುವ ಪಿಬಿಆರ್ ಕಾರ್ಯಚಟುವಟಿಕೆಗಳ ಅವಲೋಕನ ಮಾಡಲು ಮಹತ್ವದ ಚರ್ಚೆ ನಡೆಸಲಾಯಿತು.

 ಬಿಎಂಸಿ ನಿಯಮ ಪ್ರಕಾರ ಪ್ರತಿಯೊಂದು ಗ್ರಾಮದ/ಬಡಾವಣೆಯಲ್ಲಿರುವ ನಾಲೇಡ್ಜ್ ಬಲ್ ಪರ್ಸನ್,   ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರ’ ಪಟ್ಟಿ ಮಾಡಬೇಕಿದೆ. ಪಿಬಿಆರ್ ನಲ್ಲಿ  ನೀರು, ಮಣ್ಣು, ಗಿಡ, ಔಷಧಿ ಇತ್ಯಾದಿ ಮಾಹಿತಿ ಸಂಗ್ರಹಿಸಿದ್ದಾರೆ.

  ಈ ಮಾಹಿತಿಗಳ ಅಧ್ಯಯನದ ಜೊತೆಗೆ, ರಾಜ್ಯ ಮಟ್ಟದ ನಾಲೇಡ್ಜ್‍ಬಲ್ ಪರ್ಸನ್,   ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರ’ಸಮಾವೇಶ ನಡೆಸಿ, ಅವರ ಸಲಹೆ ಮೇರೆಗೆ ತುಮಕೂರು ವಿಶ್ವ ವಿದ್ಯಾನಿಲಯದ ಬಿದರೆ ಕಟ್ಟೆ ನೂತನ ಕ್ಯಾಂಪಸ್‍ನಲ್ಲಿ ಎಲ್ಲಾ ಜಾತಿಯ ಔಷಧಿಗಿಡಗಳ ವಿವಿಧ ವನ ನಿರ್ಮಾಣ ಮಾಡಲು ಒಂದು ವಿಶಿಷ್ಠ ಪ್ರಸ್ತಾವನೆ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ.

  ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್‍ಗೆ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕ ವಿವಿಧ ಸಂಶೋಧನೆಗಳ ಪ್ರಸ್ತಾವನೆ ಸಲ್ಲಿಸಲು ಸುಧೀರ್ಘ ಸಮಾಲೋಚನೆ ನಡೆಸಲಾಯಿತು.

ದಿನಾಂಕ:22.10.2024 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5.30 ಗಂಟೆವರೆಗೂ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ಬೆಳಿಗ್ಗೆ 11 ಗಂಟೆಗೆ ಸಮಾಲೋಚನೆ ಸಭೆ, ತುಮಕೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಶ್ರೀ ದ್ವಾರಕನಾಥ್ ರವರು ಮತ್ತು ಅವರ ಸಹೋದ್ಯೋಗಿಗಳಾದ ಶ್ರೀ ಪುಟ್ಟರಾಜುರವರು, ಶ್ರೀಮತಿ ಸಮ್ರೀನ್ ರವರು, ಶ್ರೀಮತಿ ರಷ್ಮಿರವರು, ಶ್ರೀಮತಿ ಶಾಂಭವಿರವರು ಇನ್ನಿತರರು ಹಾಜರಿದ್ದರು.

ಮಧ್ಯಾಹ್ನ 12 ಗಂಟೆಗೆ ಆವರಣದಲ್ಲಿ ಗಿಡಹಾಕುವ ಕಾರ್ಯಕ್ರಮ.

ಮಧ್ಯಾಹ್ನ 1- 4.30 ಗಂಟೆವರೆಗೆ ಹಿರಿಯೂರು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಬಯೋಡೈವರ್ಸಿಟಿ ಸ್ಟಡಿ ಆರಂಭಕ್ಕೆ ಅದ್ಯಯನ

  ಹಿರಿಯೂರು ಶಕ್ತಿಪೀಠ ಕ್ಯಾಂಪಸ್ ನಲ್ಲಿ ‘ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು ಮತ್ತು ಹಕೀಮರ’ ರಾಜ್ಯ ಮಟ್ಟದ ಸಮಾವೇಶ ನಡೆಸಿ ಹಲವಾರು ಜಾತೀಯ ಔಷಧಿ ಗಿಡಗಳನ್ನು ಹಾಕಲಾಗಿತ್ತು.

 ಕ್ಯಾಂಪಸ್ ಬಯೋಡೈವರ್ಸಿಟಿ ಕೇಸ್ ಸ್ಟಡಿಯನ್ನು ತುಮಕೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ಜೀವಶಾಸ್ತ್ರ ಮತ್ತು ಪರಿಸರ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಂದ ಮಾಡಿಸಲು ಯೋಚಿಸಲಾಗಿದೆ.

   ದ್ವಾರಕನಾಥ್ ಮತ್ತು ಅವರ ತಂಡದ ಪ್ರಕಾರ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಒಂದು ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ಶಕ್ತಿಪೀಠ ಕ್ಯಾಂಪಸ್ ಮಾಡಿದೆ, ಇದೊಂದು ಪೈಲಟ್ ಯೋಜನೆಯಾಗಲಿದೆ. ಸುಮಾರು 300 ರಿಂದ 500 ಜಾತಿಯ ವಿವಿಧ ಮರಗಳು, ಔಷಧಿಗಿಡಗಳು, ಹೂ, ಹಣ್ಣು, ತೋಟಗಾರಿಕೆ ಗಿಡಗಳು ಇಲ್ಲಿ ಇರಬಹುದು, ಪಕ್ಕಾ ಅಧ್ಯಯನ ಮಾಡಿ, ಈ ವರ್ಷ ಇನ್ನೂ 500 ಜಾತಿಯ ಗಿಡಗಳ ಸಂಗ್ರಹಣೆ ಮಾಡಿ ಹಾಕಿಸುವ ದೃಢ ನಿರ್ಧಾರ ಕೈಗೊಳ್ಳಲಾಯಿತು.

  ಗಿಡಗಳ ಕಲೆಕ್ಷನ್ ಬಹಳ ದೊಡ್ಡ ಸಾಹಸ, ಈಗಾಗಲೇ ಅರಣ್ಯ ಅಧಿಕಾರಿಗಳು, ಕೊರಟಗೆರೆಯ ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾಧ್ಯರವರು, ನಿವೃತ್ತ ಅರಣ್ಣ ಅಧಿಕಾರಿ ಶ್ರೀ ಚಂದ್ರಪ್ಪನವರು, ಶಿರಾದ ಶ್ರೀ ಗೋವಿಂದಪ್ಪವರು, ಸಾಪ್ಟ್ ವೇರ್ ಇಂಜಿನಿಯರ್ ಶ್ರೀ ಎಸ್.ಪಿ.ರಾಜೇಶ್, ಕಾರೇಹಳ್ಳಿ ರ್ಯಾಬಿಟ್ ಶ್ರಿ ಸುನಿಲ್‍ರವರು, ಬೇವಿನ ಮರದ ಶ್ರೀ ಸಿದ್ಧಪ್ಪನವರು, ರಾಜ್ಯದ್ಯಾಂತ ಹಲವಾರು ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರು, ಸಾಯಿಬಾಬಾ ಶ್ರೀ ಗುರುಸಿದ್ಧಪ್ಪನವರು, ಶ್ರೀ ರೂಪೇಶ್ ರವರು, ಶ್ರೀ ಪಿ,ಬಿ.ಮೋಹನ್ ಕುಮಾರ್ ರವರು, ಶ್ರೀ ಸತ್ಯಾನಂದ್ ರವರು, ವಡ್ಡನಹಳ್ಳಿ ಶ್ರೀ ಬಸವರಾಜ್ ರವರು ಸೇರಿದಂತೆ ಹಲವಾರು ಜನರು ವಿವಿಧ ಜಾತಿಯ ಗಿಡ,ಬೀಜ,ಬಳ್ಳಿ, ಕಡ್ಡಿ ಹಾಕಲು ಸಲಹೆ ನೀಡುವ ಜೊತೆಗೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಪ್ರಶಸ್ತಿ  ನೀಡಿ ಗೌರವಿಸಲು ಸಹ ಯೋಚಿಸಲಾಯಿತು.

ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರೊಂದಿಗೆ, ವಿಶ್ವ ವಿದ್ಯಾನಿಲಯದ ಪ್ರತಿಯೊಂದು ವಿಭಾಗದ ಮುಖ್ಯಸ್ಥರು, 15 ಅಧ್ಯಯನ ಪೀಠಗಳ ಮುಖ್ಯಸ್ಥರು, ಕಾಲೇಜಿನ ಪ್ರಾಂಶುಪಾಲರು, ಸಹೋಧ್ಯೋಗಿಗಳು, ವಿದ್ಯಾರ್ಥಿಗಳೊಂದಿಗೆ ತುಮಕೂರು ರೀಸರ್ಚ್ ಫೌಂಡೇಷನ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಉದ್ದೇಶಗಳ ಅನುಷ್ಠಾನದ ಬಗ್ಗೆ ಸಂವಾದ ನಡೆಸಲು ಸಮಾಲೋಚನೆ ನಡೆಸಲಾಗಿತ್ತು.

ಈ ಹಿನ್ನಲೆಯಲ್ಲಿ ಡಾ.ಪರುಷರಾಮ್ ರವರು, ಕ್ಯಾಂಪಸ್‍ನ ಈಶಾನ್ಯ ಮೂಲೆಯಲ್ಲಿರುವ ಮತ್ತು ನನ್ನ ನೆಚ್ಚಿನ ಪರಿಸರ ವಿಭಾಗದಿಂದಲೇ ಆರಂಭಿಸಲು ಸಲಹೆ ನೀಡಿದ್ದರು. ಡಾ.ಸುರೇಶ್ ರವರು ಮತ್ತು ಶ್ರೀ ಲಕ್ಷ್ಮಿ ಕಾಂತ್‍ರªರು ಇವರೆಲ್ಲರ ಮಾಹಿತಿ ನೀಡಿದರು.  ಇಂದಿನಿಂದ ಚಾಲನೆ ನೀಡಲಾಗಿದೆ.