31st October 2024
Share

TUMAKURU:SHAKTHIPEETA FOUNDATION

ತೆಂಗು ಬೆಳೆಗಾರರ ಸಂಕಷ್ಟಕ್ಕೆ, ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿದ್ದಾಗ, ದಿಶಾ ಸಮಿತಿ ಸದಸ್ಯನಾಗಿ, ನಾನೇ ಜಿಲ್ಲೆಯಲ್ಲಿ ಒಣಗಿರುವ ತೆಂಗಿನ ಮರಗಳ ಸಮೀಕ್ಷೆ ಮಾಡಿ, ಎಷ್ಟು ರೈತರ, ಎಷ್ಟು ಮರಗಳು, ಏಕೆ ಒಣಗಿವೆ ಎಂಬ ಅಧ್ಯಯನ ವರದಿ ಸಿದ್ಧಪಡಿಸಿ, ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ  ಸಲ್ಲಿಸಿ, ರೈತರಿಗೆ ಪರಿಹಾರ ಮತ್ತು ಮುಂದಿನ ಕ್ರಮದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ದಿನಾಂಕ:19.09.2024 ರಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೆಶಕರಾದ ಶ್ರೀಮತಿ ಶಾರದಮ್ಮರವರನ್ನು ಭೇಟಿಯಾಗಿ ವರದಿ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು 

ದಿನಾಂಕ:23.10.2024 ರಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೆಶಕರಾದ ಶ್ರೀಮತಿ ಶಾರದಮ್ಮರವರ ನೇತೃತ್ವದ ತಜ್ಞರ ತಂಡ ಕುಂದರನಹಳ್ಳಿಯ ನಮ್ಮ ತೋಟಕ್ಕೂ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ ಹಾಗೂ ಜಿಲ್ಲಾದ್ಯಾಂತ ಹಲವಾರು ಕಡೆ ಪರಿಶೀಲನೆ ನಡೆಸಿದ್ದಾರೆ. ಅವರ ತಂಡಕ್ಕೆ ಅಭಿನಂದನೆ.

ನಾನು ಸಹ ಬೆಳಿಗ್ಗೆ ಕುಂದರನಹಳ್ಳಿಗೆ ಹೋಗಿ ಸಂಜೆ 4 ಗಂಟೆವರೆಗೂ ಕಾಯ್ದೆ. ನನಗೆ ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಪೋನ್ ಕರೆ ತಲೆಕಡಿಸಿತು. ಅವರಿಗೆ ತುರ್ತಾಗಿ ತುಮಕೂರು ಏರ್ ಪೋರ್ಟ್ ಬಗ್ಗೆ ಅವರ ಅವಧಿಯಲ್ಲಿ ನಡೆಸಿದ ಪತ್ರವ್ಯವಹಾರಗಳ ದಾಖಲೆ ಬೇಕಿತ್ತು. ವಿಧಾನಸಭಾ ವಿರೋಧ ಪಕ್ಷದ ಉಪನಾಯಕಾರದ ಶ್ರೀ ಅರವಿಂದ್ ಬೆಲ್ಲದ್ ರವರಿಗೆ ರವಾನಿಸಬೇಕಿತ್ತು. ಆ ಒತ್ತಡದಿಂದ ನಾನು ತುಮಕೂರಿಗೆ  ವಾಪಾಸ್ಸು ಬಂದೆ ಕ್ಷಮೆಯಿರಲಿ ಮೇಡಂ.

ಈಗ ನಾನು ನಿಮ್ಮಿಂದ ನೀರಿಕ್ಷೆ ಮಾಡುವ ವರದಿ, ಈ ಕೆಳಕಂಡಂತಿರ ಬೇಕು ಮೇಡಂ. ಒಂದು ವೇಳೆ ಈ ವರದಿ ತಯಾರಿಸಲು ಅಡಚಣೆ, ಹಣಕಾಸು, ಸಿಬ್ಬಂದಿ ಕೊರತೆ ಇದ್ದಲ್ಲಿ ಮುಕ್ತವಾಗಿ ತಿಳಿಸಿ, ಇಲಾಖಾ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಿಸಲಾಗುವುದು.

ತುಮಕೂರು ಜಿಲ್ಲೆಯ ರೈತರ ತೆಂಗು ರೋಗದ ತಾಂತ್ರಿಕ ವರದಿಯ ಪ್ರಮುಖ ಅಂಶಗಳು

1.ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆವಾರು ರೈತರು ತೆಂಗಿನ ತೋಟ ಬೆಳೆಸಿರುವ ರೈತರವಾರು, ಎಕರೆವಾರು ವಿಸ್ತೀರ್ಣ,

2.ಒಟ್ಟು ಅವರು ಹಾಕಿರುವ ಮರಗಳ ಸಂಖ್ಯೆ (ಅಂದಾಜು ಗಿಡಹಾಕಿದ್ದ ಇಸವಿ), ತಳಿ, ರೋಗ ಬಂದು ಒಣಗಿರುವ ವರ್ಷ/ಮರಗಳ ಸಂಖ್ಯೆ,

3.ಮರಗಳು ಒಣಗಲು ಕಾರಣಗಳು. ಅವರಿಗೆ ಆಗಿರುವ ನಷ್ಟ.

4.ರೋಗ ಬಂದಿರುವ ಮರಗಳ ರಕ್ಷಣೆಗೆ ರೈತರು ಏನು ಮಾಡಬೇಕು ? ತಮ್ಮ ಇಲಾಖಾ ನೆರವು ಏನು ಸಿಗಲಿದೆ?.

5.ರೋಗ ಬಂದು ಒಣಗಿರುವ, ಈಗಾಗಲೇ ಕಿತ್ತುಹಾಕಿರುವ ಮರಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವ ರೀತಿ, ನಿಯಾಮುನುಸಾರ ಅಥವಾ ವಿಶೇಷ ಅನುದಾನದಡಿ ಎಷ್ಟೆಷ್ಟು ಪರಿಹಾರ ಕೊಡಿಸಬಹುದು.  ಪರಿಹಾರ ನೀಡಿರುವ ಉದಾಹರಣೆಗಳು ಇದ್ದಲ್ಲಿ ಮಾಹಿತಿ ನೀಡುವುದು.

ಗೂಗಲ್ ಫಾರಂ ಮಾಡಿ, ಜಿಯೋ ಟ್ಯಾಗಿಂಗ್ ಸಹಿತ ಪ್ರತಿಯೊಬ್ಬ ರೈತರ ಮಾಹಿತಿ ಕಡ್ಡಾಯವಾಗಿ ಮಾಡಲೇ ಬೇಕು. ಸರ್ಕಾರದಿಂದ ಪರಿಹಾರ ದೊರಕಿಸುವ ಕೆಲಸ ಚುನಾಯಿತ ಜನಪ್ರತಿನಿದಿಗಳದ್ದು ಅದು ನಮಗೆ ಬಿಡಿ, ನಿಮ್ಮಿಂದ ನಮಗೆ ತಾಂತ್ರಿಕ ಅಧ್ಯಯನ ವರದಿ ಬೇಕಷ್ಟೆ. ಅಧ್ಯಯನ ವರದಿಗೆ ಪೂರಕವಾಗಿರುವ ಇತರೆ ಅಂಶಗಳು ಇದ್ದರೂ ಸೇರ್ಪಡೆ ಮಾಡಿ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ತೆಂಗು ಸಂಶೋಧನಾ ಕೇಂದ್ರ ಇದೆ. ಅಗತ್ಯವಿದ್ದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ @ 2047 ತಮಗೆ ಕೈಜೋಡಿಸಲಿದೆ. ಅವರ ನೆರವನ್ನು ಸಹ ಪಡೆಯ ಬಹುದಾಗಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ರೈತರವಾರು ಗೂಗಲ್ ಫಾರಂ ಭರ್ತಿ ಮಾಡಿಸುವ ಕೆಲಸಕ್ಕೂ ನಾವು ಸಿದ್ದವಿದ್ದೇವೆ.

ದಯವಿಟ್ಟು ಏನೇ ಸಮಸ್ಯೆ ಇದ್ದರೂ ಕರೆ ಮಾಡಿದರೆ, ನಿಮ್ಮ ಕಚೇರಿಗೆ ಬರಲಿದ್ದೇನೆ. ದಯವಿಟ್ಟು ವರದಿಯಲ್ಲಿ ಮಾತ್ರ ರಾಜಿ ಇಲ್ಲ.