6th February 2025
Share

TUMAKURU:SHAKTHIPEETA FOUNDATION

ದಿನಾಂಕ:24.10.2024 ರಂದು, ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕು, ಹಂದನಕೆರೆ ಹೋಬಳಿ, ಚೌಳಕಟ್ಟೆ ಗ್ರಾಮಪಂಚಾಯಿತಿ, ಸೋರಲಮಾವು ಗ್ರಾಮಕ್ಕೆ ಭೇಟಿ ನೀಡಿ, ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಸೋರಲಮಾವು ಗ್ರಾಮದ ಪ್ರತಿಯೊಂದು ಮನೆ, ಮನೆಗೂ ವಿದ್ಯಾರ್ಥಿಗಳು ಭೇಟಿ ನೀಡಿ, ಜನಾಭಿಪ್ರಾಯ ಸಂಗ್ರಹ ಮಾಡಿ, ಒಂದು ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿನ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ತುಮಕೂರು ರೀಸರ್ಚ್ ಫೌಂಡೇಷನ್ @ 2047 ವತಿಯಿಂದ  ಸಲ್ಲಿಸುವ ಮಹತ್ವದ ನಿರ್ಧಾರ ಮಾಡಲಾಗಿದೆ.

ಸಾವಿಗೆ ಕಾರಣದ ಸರ್ಕಾರಿ ವರದಿ, ಜನತೆಯ ಅನುಮಾನ, ಮುಂದೆ ಇಂತಹ ಘಟನೆಗಳು ನಡೆಯದ ಹಾಗೆ ಮುನ್ನೆಚ್ಚರಿಕೆ ಕ್ರಮ, ಇಂಥಹ ಘಟನೆಯಲ್ಲಿ ಯಾರ್ಯಾರ ಪಾತ್ರ ಎಷ್ಟೆಷ್ಟು ಇದೆ ಎಂಬ ವರದಿಯನ್ನು ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಯ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಸಲಾಗುವುದು.

  1. ಸೋರಲಮಾವು ಗ್ರಾಮ ನಾಲೇಡ್ಜಬಲ್ ಪರ್ಸನ್ ಶ್ರೀ ಹರ್ಷರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
  2. ಗ್ರಾಮಪಂಚಾಯಿತಿ ಸದಸ್ಯೆಯಾದ ಶ್ರೀಮತಿ ಪವಿತ್ರರವರೊಂದಿಗೆ ಚರ್ಚೆ ನಡೆಸಲಾಯಿತು.
  3. ಚೌಳಕಟ್ಟೆ ಗ್ರಾಮಪಂಚಾಯಿತಿ ಪಿಡಿಓ ಶ್ರೀ ತಿಮ್ಮೆಗೌಡರವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಯಿತು.
  4. ಸರ್ಕಾರಿ ವೈಧ್ಯರಾದ ಶ್ರೀ ಶರತ್ ರವರೊಂದಿಗೆ ಚರ್ಚೆ ನಡೆಸಲಾಯಿತು.
  5. ಶಾಲಾ ಮುಖ್ಯೋಪಾದ್ಯಯರಾದ ಶ್ರೀ ಸೋಮಶೇಖರ್‍ರವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಯಿತು.
  6. ಆಶಾ ಕಾರ್ಯಕರ್ತೆ ಶ್ರೀಮತಿ ವಸಂತರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
  7. ತಾಲ್ಲೋಕು ವೈಧ್ಯಾಧಿಕಾರಿಗಳಾದ ಶ್ರೀ ಯಶವಂತ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
  8. ಹುಳಿಯಾರಿನ ಖಾಸಗಿ ವೈಧ್ಯರಾದ ಶ್ರೀ ಡಾ. ಸಿದ್ಧರಾಮಣ್ಣನವರು ಮತ್ತು ಶ್ರಿಮತಿ ಡಾ.ಉಮಾರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
  9. ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿರವರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.
  10. ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀ ರವಿಕುಮಾರ್ ರವರು  ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು.

ಬಹುತೇಕ ಸಮಾಲೋಚನೆ ನಡೆಸಿದ ಎಲ್ಲರಿಂದ ತುಮಕೂರು ವಿಶ್ವ ವಿದ್ಯಾನಿಲಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಇಂತಹ ಕೆಲಸಕ್ಕೆ ಮುಂದಾಗಿರುವುದು ಸ್ವಾಗತಾರ್ಹ, ನಾವೆಲ್ಲರೂ ಕೈಜೋಡಿಸುವುದಾಗಿ ಭರವಸೆ ನೀಡಿದ್ದಾರೆ.

–              ಕುಂದರನಹಳ್ಳಿ ರಮೇಶ್

ಗೌರವ ಅಧ್ಯಕ್ಷರು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು.