21st December 2024
Share

TUMAKURU:SHAKTHIPEETA FOUNDATION

    ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಯಾವುದೇ ತರಗತಿಗಳಲ್ಲಿ ನೋಡಿದರೂ, ವಿಧ್ಯಾರ್ಥಿಗಳಿಗಿಂತ, ಹೆಚ್ಚು ವಿಧ್ಯಾರ್ಥಿನಿಯರೇ ಇದ್ದರು, ನನಗೆ ಮೂಡಿದ ಪ್ರಶ್ನೆ, ಇಷ್ಟೊಂದು ವಿಧ್ಯಾರ್ಥಿನಿಯರು ಇದ್ದರೂ ಗಂಡುಗಳಿಗೆ ಹೆಣ್ಣೇ ಸಿಗುತ್ತಿಲ್ಲ ಎನ್ನುತ್ತಾರೆ.  ಹುಡುಗರಂತೂ ಇದ್ದಾರೆ, ಆದರೇ ಏಕೆ ಪದವಿ ಅಭ್ಯಾಸಕ್ಕೆ ಬರುತ್ತಿಲ್ಲ ಎಂಬ ಪ್ರೆಶ್ನೆಗೆ, ಪ್ರಾಂಶುಪಾಲರಾದ ಡಾ.ಜ್ಯೋತಿ ರವರು ಸ್ವಲ್ಪ ಕಾಲ ಮೌನವಹಿಸಿದರು.

ಯಾವುದೇ ಊರಿಗೆ ಹೋದರೂ ಮದುವೆಯಾಗದ ಹಲವಾರು ಗಂಡು ಮಕ್ಕಳು ಇದ್ದಾರೆ, ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎನ್ನುವುದೇ ಒಂದು ‘ಸಾಮಾಜಿಕ ಪಿಡುಗು’ ಆಗಲಿದೆ. ಈ ಎರಡು ಅಂಶಗಳ ಅಧ್ಯಯನ ಅಗತ್ಯವಾಗಿದೆ.

1.ಹುಡುಗರು  ಪದವಿ ಅಭ್ಯಾಸಕ್ಕೆ ಬರುತ್ತಿಲ್ಲ ಏಕೆ?

2.ಪದವಿ ಕಾಲೇಜುಗಳಲ್ಲಿ ಹೆಚ್ಚು ವಿಧ್ಯಾರ್ಥಿನಿಯರೇ ಇದ್ದರೂ ಗಂಡುಗಳಿಗೆ ಹೆಣ್ಣೆ ಸಿಗುತ್ತಿಲ್ಲ ಏಕೆ?

  ತುಮಕೂರು ವಿಶ್ವ ವಿದ್ಯಾನಿಲಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದ, ತುಮಕೂರು ರೀಸರ್ಚ್ ಫೌಂಡೇಷನ್@2047, ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಅಫ್ ಇಂಡಿಯಾ ಫಂಡ್ಸ್, ನಾಲೇಡ್ಜ್ ಬ್ಯಾಂಕ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಯನ ಪೀಠ, ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ರೂಪುರೇಷೆಗಳ ಬಗ್ಗೆ ದಿನಾಂಕ:24.10.2024 ರಂದು ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಜೊತೆ, ನಡೆಸಿದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಯೋತಿಯವರು ಈ ಬಗ್ಗೆ ಗಂಭೀರ ಚರ್ಚೆ ಅಗತ್ಯವಿದೆ ಎಂದರು. 

ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ರಚಿಸುವುದಾಗಿ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದರು.

ನನ್ನ ಮನವಿಗೆ ಸ್ಪಂಧಿಸಿದ, ವಿದ್ಯಾರ್ಥಿನಿ ಕುಮಾರಿ ಶ್ರುತಿ ಚಿಕ್ಕನಾಯಕನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು, ಯಾವ ಊರಿನವರು, ಯಾವ ಬಡಾವಣೆಯವರು, ಅವರು ಅವರವರ ಊರಿನ/ಬಡಾವಣೆಯ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು, ಆಸಕ್ತಿ ಇರುವವರ ಪರಿಕಲ್ಪನೆಯೊಂದಿಗೆ, ಡಿಜಿಟಲ್ ಮಾಹಿತಿ ಸಂಗ್ರಹ ಮಾಡುವುದಾಗಿ ಸ್ವಯಂ ಘೋಷಣೆ ಮಾಡಿದರು.

ನಾನು ಮಾತನಾಡಿದ್ದಕ್ಕಿಂತ, ಹೆಚ್ಚಾಗಿ ವಿದ್ಯಾರ್ಥಿಗಳ ಬಾಯಿಂದಲೇ ಅವರಲ್ಲಿ ಅಡಗಿರುವ ಆಗಾಧ ಶಕ್ತಿಯ ಪರಿಚಯ ಮಾಡಿಕೊಳ್ಳಲಾಯಿತು. ಸಂವಾದದಲ್ಲಿ ಕಾಲೇಜಿನ ಅಧ್ಯಾಪಕ ಮತ್ತು ನೌಕರ ವರ್ಗದವರು ಹಾಜರಿದ್ದರು. 

ಮಳೆ ಕಡಿಮೆ ಆದರೇ ತೋಟ ಒಣಗುತ್ತದೆ.

ಮಳೆ ಜಾಸ್ತಿಯಾಗಿ ತೋಟಕ್ಕೆ ನೀರು ತುಂಬಿದರೆ, ತೋಟವೇ ಹಾಳಾಗುತ್ತಿದೆ.

ರಾಜಕಾಲುವೆಗಳನ್ನು ಮುಚ್ಚಿರುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ.

ರಾಜಕಾಲುವೆಗಳನ್ನು ಮುಚ್ಚಿರುವುದು ನಮ್ಮ ತಂದೆ ತಾಯಿಗಳ ಅತಿ ಆಸೆಯಿಂದ.

ಈಗ ನಮ್ಮ ನಮ್ಮ, ಜಮೀನುಗಳ ರಾಜಕಾಲುವೆಗಳ ಒತ್ತುವರಿ ತೆರವು ಮಾಡುವುದು ನಮ್ಮ ಕೆಲಸ ಎಂಬ ಭಾವನೆಯನ್ನು ವಿದ್ಯಾಥಿಗಳು ನನ್ನ ಪ್ರಶ್ನೆಗಳಿಗೆ ಉತ್ತರಿಸಿದ್ದು ನಿಜಕ್ಕೂ ಉತ್ತಮ ಅರಿವು ಕಾರ್ಯಕ್ರಮವೆನಿಸಿತು.

ತುಮಕೂರು ಜಿಲ್ಲೆಯ ಕರಾಬುಹಳ್ಳಗಳು/ರಾಜಕಾಲುವೆಗಳ ಅಧ್ಯಯನ ಅಗತ್ಯವಿದೆ.

ಸೋರಲಮಾವು ಗ್ರಾಮದ ಅಧ್ಯಯನ ವರದಿಯನ್ನು ಎನ್.ಎಸ್.ಎಸ್ ಘಟಕದ ವಿದ್ಯಾಥಿಗಳಿಂದ ಮಾಡಿಸುವ ಭರವಸೆಯನ್ನು ಪ್ರೋ.ತಿಮ್ಮೇಗೌಡರು ನೀಡಿದರು.

ಕುಂದರನಹಳ್ಳಿ ರಮೇಶ್.

1.ಅಧ್ಯಕ್ಷ : ಅಭಿವೃದ್ಧಿ ರೆವೂಲ್ಯೂಷನ್ ಫೋರಂ,

2.ಅಧ್ಯಕ್ಷ : ಶಕ್ತಿಪೀಠ ಫೌಂಡೇಷನ್

3.ಮೆಂಟರ್ : ತುಮಕೂರು ರೀಸರ್ಚ್ ಫೌಂಡೇಷನ್@2047,

4.ಮೆಂಟರ್ : ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಅಫ್ ಇಂಡಿಯಾ ಫಂಡ್ಸ್,

5.ಮೆಂಟರ್ : ನಾಲೇಡ್ಜ್ ಬ್ಯಾಂಕ್ @ 2047,

6.ಮಾಜಿ ಸದಸ್ಯ:  ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ.

7.ಮಾಜಿ ಸದಸ್ಯ: ತುಮಕೂರು ಲೋಕಸಭಾ ಸದಸ್ಯರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ  ದಿಶಾ ಸಮಿತಿ.

8.ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ ವರದಿಯ ಕನಸುಗಾರ

9.ಗೌರವ ಅಧ್ಯಕ್ಷ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ,