6th March 2025
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಾ.ನಿತ್ಯಾನಂದ ಬಿ.ಶೆಟ್ಟಿರವರೊಂದಿಗೆ, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್‍ಗೆ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕ ವಿವಿಧ ಸಂಶೋಧನೆಗಳ ಪ್ರಸ್ತಾವನೆ ಸಲ್ಲಿಸಲು ಸುಧೀರ್ಘ ಸಮಾಲೋಚನೆ ನಡೆಸಲಾಯಿತು.

ತುಮಕೂರಿನಲ್ಲಿ ಕಲಾಗ್ರಾಮ’ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಹಿಂದೆ ನಡೆದ ಹಲವಾರು ಪ್ರಸ್ತಾವನೆಗಳ ಮೆಲುಕು ಹಾಕಲಾಯಿತು. ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಒಂದು ಉನ್ನತ ಮಟ್ಟದ ಸಮಿತಿ ರಚಿಸಿ, ಶೀಘ್ರವಾಗಿ ಯಾವ ವಿಧಾನಸಭಾ ಕ್ಷೇತ್ರದಲ್ಲಿ  ಕಲಾಗ್ರಾಮ ಸ್ಥಾಪಿಸ ಬೇಕು, ಹೇಗಿರಬೇಕು ಎಂಬ ರೂಪುರೇಷೆ ಸಿದ್ಧಪಡಿಸಲು ಚಿಂತನೆ ಮೊಳಕೆಯೊಡೆದಿದೆ. ಆಸಕ್ತರು ಸಂಪರ್ಕಿಬಹುದಾಗಿದೆ