20th December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ ಬಂಡೆಪಾಳ್ಯದ ಸಾಪ್ಟ್‍ವೇರ್ ಇಂಜಿನಿಯರ್ ಶ್ರೀ ಚರಣ್‍ರವರು ಮತ್ತು ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀ ಭವನ್ ರವರ ಜೇನು ಕೃಷಿ ಮಾಡುತ್ತಿರುವ ಮತ್ತು ಯಾರಾದರೂ ತೋಟದಲ್ಲಿ/ಜಮೀನಿನಲ್ಲಿ ಜೇನು ಕೃಷಿ ಮಾಡಬೇಕಾದರೆ, ತರಬೇತಿ ಸಹಿತ ಬಾಕ್ಸ್ ನೀಡುತ್ತಿದ್ದಾರೆ, ಎಂ ಮಾಹಿತಿ ದೊರಕಿದಾಗ ದಿನಾಂಕ:06.11.2024 ರಂದು ಅವರ ತೋಟಕ್ಕೆ ಹೋಗಿ ಅವರಿಂದ ಮಾಹಿತಿ ಪಡೆಯಲಾಯಿತು.

ನಂತರ ಅವರ ಮನೆಯಲ್ಲಿ ಅವರ ತಾಯಿ ಸೇರಿದಂತೆ ಮೂರು ಜನರೊಂದಿಗೆ ಸುಧೀರ್ಘವಾಗಿ ಚರ್ಚೆ ನಡೆಸಲಾಯಿತು.ಚರ್ಚೆಯಲ್ಲಿನ ಕೆಳಕಂಡ ಪ್ರಮುಖ ಅಂಶಗಳ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಜೇನು ಅಧ್ಯಯನ ಮತ್ತು ಸಂಶೋದನೆಗಳ ನಾಲೇಡ್ಜ್ ಬ್ಯಾಂಕ್’ ಜೊತೆಗೆ ಅವರ ಜಮೀನಿನನಲ್ಲಿ ಜೇನು ಮ್ಯೂಸಿಯಂ’ ಮಾಡುವ ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ.

1.ಜೇನು ಕೃಷಿ ಹೇಗೆ ಲಾಭದಾಯಕ.

2.ಜೇನು ಕೃಷಿಯಿಂದ ರೈತರಿಗೆ ಮತ್ತು ಪ್ರಕೃತಿಗೆ ಆಗುವ ಪ್ರಯೋಜನೆಗಳು.

3.ಜೇನು ಕೃಷಿ ವಂಶವೃಕ್ಷ, ವಿಧಗಳ ಮಾಹಿತಿ ಸಂಗ್ರಹ.

4.ದೇವರು ಕೊಟ್ಟ ಜೇನು ಕೃಷಿ ಮತ್ತು ಮಾನವ ನಿರ್ಮಿತ ಜೇನು ಕೃಷಿ ವಿಶ್ಲೇಷಣೆ

5.ಜೇನು ಕೃಷಿಗೆ ಯಾವ ಪ್ರಾಣಿಗಳಿಂದ ತೊಂದರೆ ಆಗಲಿದೆ.

6.ಜೇನು ಕೃಷಿಗೆ ರೈತರ ಬಳಸುವ ಕೀಟನಾಶಕಗಳಿಂದ ಆಗುವ ಕೆಟ್ಟ ಪರಿಣಾಮಗಳು

7.ಜೇನು ಕೃಷಿ ಬೇಡಿಕೆ ಮತ್ತು ಎಷ್ಟು ಬಾಕ್ಸ್ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಸಂಗ್ರಹ.

8.ಜೇನು ಕೃಷಿ  ಬೆಳೆಯುವ ವಿಧಾನ, ಹವಾಮಾನ, ಭೂಮಿ ಇತರೆ  ಮಾಹಿತಿ ಸಂಗ್ರಹ.

9.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಪ್ರಗತಿಪರ ರೈತರ ಮಾಹಿತಿ ಸಂಗ್ರಹ.

10.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸಂಶೋದಕರ ಮಾಹಿತಿ ಸಂಗ್ರಹ.

11.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾಟ್‍ಅಫ್ ಕಂಪನಿಗಳ ಮಾಹಿತಿ ಸಂಗ್ರಹ.

12.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಇನ್ನೋವೇಷನ್ ಮಾಹಿತಿ ಸಂಗ್ರಹ.

13.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉಪಯೋಗಗಳ ಮಾಹಿತಿ ಸಂಗ್ರಹ.

14.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರಪಂಚದ ಯಾವ ದೇಶದಲ್ಲಿ ರಫ್ತು ಮಾಡಲು ಬೇಡಿಕೆ ಇದೆ ಎಂಬ ಮಾಹಿತಿ ಸಂಗ್ರಹ.

15.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಯಂತ್ರೋಪಕರಣಗಳ ಉತ್ಪಾದಕರ, ವ್ಯಕ್ತಿ/ ಕಂಪನಿಗಳ ಮಾಹಿತಿ ಸಂಗ್ರಹ.

16.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ  ರೈತರು ಮಾಡುತ್ತಿರುವ ತಪ್ಪು ಪ್ರಯೋಗಗಳ ಮಾಹಿತಿ ಸಂಗ್ರಹ.

17.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಗೆ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

18.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಎಲ್ಲಾ ಪ್ರಾತ್ಯಾಕ್ಷಿಕೆಗಳನ್ನು ರೈತರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದು.

19.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಜ್ಞಾನಿಗಳ, ರೈತರ, ಸಂಶೋದಕರ, ಸ್ಟಾಟ್ ಅಫ್ ಕಂಪನಿಗಳ ಸದಸ್ಯರ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸುವುದು.

20.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವಿನ ಇಲಾಖಾವಾರು ಯೋಜನೆಗಳು, ಇದೂವರೆಗೂ ಕರ್ನಾಟಕ ರಾಜ್ಯ ಪಡೆದಿರುವ ಅನುದಾನದ ಮಾಹಿತಿ.

21.ಜೇನು ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದಿಂದ 2047 ರವರೆಗೆ ಪಡೆಯ ಬಹುದಾದ 224 ವಿಧಾನಸಭಾ ಕ್ಷೇತ್ರವಾರು ಅವಕಾಶಗಳು.

22.ಕೃತಕ ಜೇನು ಕೃಷಿ ಪರಿಣಾಮಗಳು.

ಜೇನು ಕೃಷಿ ಬಗ್ಗೆ ಜ್ಞಾನವಿರುವವರು ಸಂಪರ್ಕಿಸಬಹುದು.