TUMAKURU:SHAKTHIPEETA FOUNDATION
ವಿದ್ಯಾರ್ಥಿಗೊಂದು ನಿರ್ದಿಷ್ಟ ಬೆಳೆ, ಆ ಬೆಳೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಇದೂವರೆಗೂ ಅಧ್ಯಯನ ಮತ್ತು ಸಂಶೋಧನೆ ಮಾಡಿರುವವರ ಮಾಹಿತಿಗಳ ಸಂಗ್ರಹದ ಡಾಟಾ ಬ್ಯಾಂಕ್ ಮತ್ತು ಅಗತ್ಯವಿದ್ದಲ್ಲಿ ಸ್ಟಾಟ್ ಅಪ್, ಅಧ್ಯಯನ ಮತ್ತು ಸಂಶೋಧನೆ ನಡೆಸುವ ಮಹತ್ದದ ನಿರ್ಧಾರ ಕೈಗೊಳ್ಳಲಾಯಿತು.
ಕೆಳದಿ ಶಿಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಶಿವಮೊಗ್ಗದ ಅಧೀನದಲ್ಲಿರುವ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಬ್ಬೂರು ತೋಟಗಾರಿಕೆ ಮಾಹಾ ವಿದ್ಯಾಲಯಕ್ಕೆ ದಿನಾಂಕ:05.11.2024 ರಂದು ಭೇಟಿಯಾಗಿ ಡೀನ್ ಶ್ರೀ ಡಾ.ಸುರೇಶ್ ಡಿ. ಏಕಬೋಟೆ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಈ ಕಾಲೇಜಿನಲ್ಲಿ ಸುಮಾರು 350 ವಿದ್ಯಾರ್ಥಿಗಳು ಇದ್ದು, ಒಬ್ಬೊಬ್ಬರು ಒಂದು ಬೆಳೆ ಎಂದರೆ 350 ಬೆಳೆಗಳ ಸಚಿವಾರುಗುತ್ತಾರೆ ನಮ್ಮ ವಿದ್ಯಾರ್ಥಿಗಳು. ವಿಶೆಷ ಎಂದರೆ ಈ ಕಾಲೇಜು ಕೃಷಿ ಮತ್ತು ತೋಟಗಾರಿಕಾ ಎರಡು ವಿಷಯಗಳನ್ನು ಒಳಗೊಂಡಿದೆ.
ಈ ಸಂದರ್ಭದಲ್ಲಿ ಜೊತೆಯಲ್ಲಿ ಪ್ರೋ. ಕೇಶವಪ್ರಸಾದ್‍ರವರು, ಪ್ರೋ. ಶ್ರೀದರ್‍ರವರು ಮತ್ತು ಪ್ರೋ.ರವೀಶ್‍ರವರು ಇದ್ದರು.
ಚರ್ಚೆಯಲ್ಲಿನ ಪ್ರಮುಖ ಅಂಶಗಳು, ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ನಂತರದ ಕ್ರಮ.
1.ವಿದಾರ್ಥಿಗಳೊಂದಿಗೆ ಸಂವಾದ.
2.ಅವರಿಗೆ ಇಷ್ಟವಿರುವ ಬೆಳೆ ಆಯ್ಕೆ.
3.ಆ ಬೆಳೆಯ ವಂಶವೃಕ್ಷ, ವಿಧಗಳ ಮಾಹಿತಿ ಸಂಗ್ರಹ.
4.ಆ ಬೆಳೆಯ ಬೇಡಿಕೆ ಮತ್ತು ಎಷ್ಟು ಎಕರೆಯಲ್ಲಿ ಬೆಳೆಯಲಾಗುತ್ತಿದೆ ಎಂಬ ಮಾಹಿತಿ ಸಂಗ್ರಹ.
5.ಆ ಬೆಳೆ ಬೆಳೆಯುವ ವಿಧಾನ, ಹವಾಮಾನ, ಭೂಮಿ ಇತರೆ ಮಾಹಿತಿ ಸಂಗ್ರಹ.
6.ಆ ಬೆಳೆ ಮತ್ತು ಮೌಲ್ಯವರ್ಧಿತ ಪ್ರಗತಿಪರ ರೈತರ ಮಾಹಿತಿ ಸಂಗ್ರಹ.
7.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸಂಶೋದಕರ ಮಾಹಿತಿ ಸಂಗ್ರಹ.
8.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾಟ್‍ಅಫ್ ಕಂಪನಿಗಳ ಮಾಹಿತಿ ಸಂಗ್ರಹ.
9.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಇನ್ನೋವೇಷನ್ ಮಾಹಿತಿ ಸಂಗ್ರಹ.
10.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಉಪಯೋಗಗಳ ಮಾಹಿತಿ ಸಂಗ್ರಹ.
11.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರಪಂಚದ ಯಾವ ದೇಶದಲ್ಲಿ ರಫ್ತು ಮಾಡಲು ಬೇಡಿಕೆ ಇದೆ ಎಂಬ ಮಾಹಿತಿ ಸಂಗ್ರಹ.
12.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಯಂತ್ರೋಪಕರಣಗಳ ಉತ್ಪಾದಕರ, ವ್ಯಕ್ತಿ/ ಕಂಪನಿಗಳ ಮಾಹಿತಿ ಸಂಗ್ರಹ.
13.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರೈತರು ಮಾಡುತ್ತಿರುವ ತಪ್ಪು ಪ್ರಯೋಗಗಳ ಮಾಹಿತಿ ಸಂಗ್ರಹ.
14.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಗೆ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
15.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಎಲ್ಲಾ ಪ್ರಾತ್ಯಾಕ್ಷಿಕೆಗಳನ್ನು ರೈತರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುವುದು.
16.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಜ್ಞಾನಿಗಳ, ರೈತರ, ಸಂಶೋದಕರ, ಸ್ಟಾಟ್ ಅಫ್ ಕಂಪನಿಗಳ ಸದಸ್ಯರ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸುವುದು.
17.ಕಾಲಮಿತಿ ನಿಗದಿಗೊಳಿಸಿ ಒಂದೇ ದಿನ ಎಲ್ಲಾ ಗ್ರಂಥಗಳನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮುಖ್ಯಸ್ಥರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿಸುವುದು.
18.ಕಾಲೇಜಿನ ಎಲ್ಲಾ ಪ್ರೋಫೆಸರ್ ಗಳಿಗೆ ವಿದ್ಯಾರ್ಥಿಗಳ ಹಂಚಿಕೆ ಮಾಡುವುದು.
19.ಇಂಟರ್ನ್ ಶಿಪ್, ಪಾಜೆಕ್ಟ್ ವರ್ಕ್, ಪಿಹೆಚ್‍ಡಿ, ಗ್ರಾಮೀಣ ಸೇವೆ ಇತ್ಯಾದಿ ಯೋಜನೆಗಳಿಗೆ ಹೊಂದಾಣಿಕೆ ಮಾಡುವುದು.
20.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವಿನ ಇಲಾಖಾವಾರು ಯೋಜನೆಗಳು, ಇದೂವರೆಗೂ ಕರ್ನಾಟಕ ರಾಜ್ಯ ಪಡೆದಿರುವ ಅನುದಾನದ ಮಾಹಿತಿ.
21.ಆ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಕೇಂದ್ರ ಸರ್ಕಾರದಿಂದ 2047 ರವರೆಗೆ ಪಡೆಯ ಬಹುದಾದ 224 ವಿಧಾನಸಭಾ ಕ್ಷೇತ್ರವಾರು ಅವಕಾಶಗಳು.
22.ಪ್ರಪಂಚದ, ದೇಶದ ಯಾವುದಾದರೂ ಕಾಲೇಜಿನಲ್ಲಿ ಈ ರೀತಿಯ ಪ್ರಯೋಗ ಮಾಡಿದ್ದಾರೆಯೇ ಎಂಬ ಮಾಹಿತಿ ಸಂಗ್ರಹ.
23.ಇತ್ಯಾದಿ ಅಗತ್ಯವಿರುವ ಮಾಹಿತಿಗಳನ್ನು ಒಳಗೊಂಡ ಒಂದು ಟೆಂಪ್ಲೇಟ್ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆ ನೀಡುವುದು.
–ಕುಂದರನಹಳ್ಳಿ ರಮೇಶ್
1.ಗೌರವ ಅಧ್ಯಕ್ಷ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯÀ ಅಧ್ಯಯನ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ
2.ಮೆಂಟರ್ : ತುಮಕೂರು ರೀಸರ್ಚ್ ಫೌಂಡೇಷನ್@2047, ತುಮಕೂರು ವಿಶ್ವ ವಿದ್ಯಾನಿಲಯ
3.ಮೆಂಟರ್ : ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಅಫ್ ಇಂಡಿಯಾ ಫಂಡ್ಸ್, ತುಮಕೂರು ವಿಶ್ವ ವಿದ್ಯಾನಿಲಯ
4.ಮೆಂಟರ್ : ನಾಲೇಡ್ಜ್ ಬ್ಯಾಂಕ್ @ 2047, ತುಮಕೂರು ವಿಶ್ವ ವಿದ್ಯಾನಿಲಯ
5.ಕನಸುಗಾರ: ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ ವರದಿ.
6.ಅಧ್ಯಕ್ಷ : ಅಭಿವೃದ್ಧಿ ರೆವೂಲ್ಯೂಷನ್ ಫೋರಂ,
7.ಅಧ್ಯಕ್ಷ : ಶಕ್ತಿಪೀಠ ಫೌಂಡೇಷನ್
8.ಮಾಜಿ ಸದಸ್ಯ: ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ.
9.ಮಾಜಿ ಸದಸ್ಯ: ತುಮಕೂರು ಲೋಕಸಭಾ ಸದಸ್ಯರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ.