20th February 2025
Share

TUMAKURU:SHAKTHIPEETA FOUNDATION

•ಎಫ್-ಮಾರ್ಟ್ ಕನಸು ಹಂಚಿಕೊಂಡವರು 108 ಕೃಷಿ ಆಶ್ರಮಗಳ ತಜ್ಞ ಶ್ರೀ ಡಾ.ಬಿ.ಎಂ.ನಾಗಭೂಷಣರವರು. ಅವರ ತಂಡವೇ ರೂಪು ರೇಷೆ ಸಿದ್ಧಪಡಿಸಿಲಿದ್ದಾರೆ.

•ರೈತರ, ಕೃಷಿ ಆಶ್ರಮಗಳ, ರೈತ ಕಂಪನಿಗಳ, ಸ್ತ್ರೀಶಕ್ತಿ ಸಂಘಗಳ, ಕುಶಲಕರ್ಮಿಗಳ, ವಿಶ್ವಕರ್ಮ ಯೋಜನೆಯ, ಒಂದು ಜಿಲ್ಲೆ – ಒಂದು ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾಲೀಕರೇ ನಿಗಧಿ ಮಾಡುವ ಬೆಲೆಗೆ ಕೊಳ್ಳುವ ಅಥವಾ ರೈತರು ಹಾಗೂ ಕೊಂಡುಕೊಳ್ಳುವವರನ್ನು ಎದುರು-ಬದರು ಕೂರಿಸಿ, ಮನೆ, ಮನೆಗೆ ಆನ್ ಲೈನ್ ಮಾರಾಟ, ದೇಶಿಯ ಮಾರಾಟ ಹಾಗೂ  ರಫ್ತು ಚಟುವಟಿಕೆ ವ್ಯವಹಾರ ಮಾಡುವ ಒಂದು ಲೀಗಲ್ ಎಂಟೆಟಿ. (ಸ್ಟಾರ್ಟ್ ಅಫ್ ಕಂಪನಿ, ಕಂಪನಿ ಆಕ್ಟ್, ಸಹಕಾರ, ಟ್ರಸ್ಟ್ ಅಥವಾ ಸೊಸೈಟಿ ಆಕ್ಟ್ ಅಡಿಯಲ್ಲಿ ಸ್ಥಾಪನೆ ಮಾಡಬಹುದಾಗಿದೆ)

•ಪಾರದರ್ಶಕವಾಗಿ ನಗದು ರಹಿತ, ಡಿಜಿಟಲ್ ಸೇವಾ ಶುಲ್ಕ ನಿಗಧಿಗೊಳಿಸಿ, ಬೇಡಿಕೆಗಳಿಗೆ ಅನುಗುಣವಾಗಿ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ, ಗುಣಮಟ್ಟ, ಅಗತ್ಯ ಸರ್ಟಿಫಿಕೆಟ್‍ಗಳೊಂದಿಗೆ, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ, ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುವ ಡಿಜಿಟಲ್ ಪ್ಲಾಟ್ ಫಾರಂ.

•ವಿಕಸಿತ ಭಾರತ @ 2047 ಹಾಗೂ ನಂಬರ್ ಒನ್ ಕರ್ನಾಟಕ @ 2047 ಅಡಿಯಲ್ಲಿ, ಸ್ಥಾಪಿಸಲು ಉದ್ದೇಶಿಸಿರುವ ಸುಮಾರು 30753 ನಾಲೇಡ್ಜ್ ಬ್ಯಾಂಕ್ @ 2047 ಗಳಲ್ಲಿಯೂ ಒಂದೊಂದು ಎಫ್ – ಮಾರ್ಟ್ ಪ್ರ್ಯಾಂಚೈಸಿ ಘಟಕಗಳನ್ನು ಸ್ಥಾಪಿಸುವ ಚಿಂತನೆ ಚರ್ಚಾ ಹಂತದಲ್ಲಿದೆ.

•ದುಡಿಮೆಯೊಂದಿಗೆ ಸಮಾಜಸೇವೆ ನಮ್ಮ ದ್ಯೇಯ ವಾಕ್ಯವಾದ್ದರಿಂದ 2047 ರೊಳಗೆ ನಂಬರ್ ಒನ್ ಕರ್ನಾಟಕ ಆಗಬೇಕಾದರೆ, ರೈತರ ಆದಾಯ ದುಪ್ಪಟ್ಟು ಆಗಲೇಬೇಕು.

ನಮ್ಮ ಪರಿಕಲ್ಪನೆ ಇದಾಗಿದೆ.

1.ತುಮಕೂರು ನಗರದ ಶಕ್ತಿಭವನದಲ್ಲಿ : ನಾಲೇಡ್ಜ್ ಬ್ಯಾಂಕ್ @ 2047  ಪ್ರಧಾನ ಕಚೇರಿಯಲ್ಲಿ ಎಫ್ – ಮಾರ್ಟ್ ಅಧ್ಯಯನ ಪೀಠ.

2.ತುಮಕೂರು ಜಿಲ್ಲೆಯ ವಸಂತನರಸಾಪುರದ ಇಂಡಸ್ಟ್ರಿಯಲ್ ಕಾರಿಡಾರ್‍ನಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಬಳಿ : ಎಫ್ – ಮಾರ್ಟ್ ಎಕ್ಸ್‍ಪೋರ್ಟ್ ಭವನ ಮತ್ತು ಮ್ಯೂಸಿಯಂ

3.ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್‍ನಲ್ಲಿ ಶಕ್ತಿಪೀಠ ಕ್ಯಾಂಪಸ್ : ಉದ್ದೇಶಿತ ಅಂತರರಾಷ್ಟ್ರೀಯ ಮಟ್ಟದ ಕ್ಯಾಂಪಸ್‍ನಲ್ಲಿ  ಎಫ್ – ಮಾರ್ಟ್ ಉತ್ಪನ್ನಗಳ ಸಂಶೋಧನೆ.

4.ಬೆಂಗಳೂರು : ಎಫ್ – ಮಾರ್ಟ್ ಯೋಜನೆಗೆ ಹೂಡಿಕೆ ಮಾಡಲು ಹಲವಾರು ಕಂಪನಿಗಳು ಮುಂದೆ ಬಂದಿವೆ, ರೂಪುರೇಷೆ ಅಂತಿಮ ಗೊಳಿಸಿದ ನಂತರ ವ್ಯಾಪಾರ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ.

5.ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 36 ನಾಲೇಡ್ಜ್ ಬ್ಯಾಂಕ್ @ 2047  ಗಳಲ್ಲಿ ಎಫ್ – ಮಾರ್ಟ್ ಪ್ರ್ಯಾಂಚೈಸಿ ಘಟಕ.

6.ವಿಶ್ವದ ಎಲ್ಲಾ ದೇಶಗಳಲ್ಲಿ 198 ನಾಲೇಡ್ಜ್ ಬ್ಯಾಂಕ್ @ 2047   ಗಳಲ್ಲಿ ಎಫ್ – ಮಾರ್ಟ್ ಪ್ರ್ಯಾಂಚೈಸಿ ಘಟಕ.

7.ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 376 ನಾಲೇಡ್ಜ್ ಬ್ಯಾಂಕ್ @ 2047 ಗಳಲ್ಲಿ ಎಫ್ – ಮಾರ್ಟ್ ಪ್ರ್ಯಾಂಚೈಸಿ  ಘಟಕ.

8.ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ನಗರ ಪ್ರದೇಶಗಳ ಬಡಾವಣೆಗಳ ವ್ಯಾಪ್ತಿಯಲ್ಲಿ 30000 ನಾಲೇಡ್ಜ್ ಬ್ಯಾಂಕ್ @ 2047 ಗಳಲ್ಲಿ ಎಫ್ – ಮಾರ್ಟ್ ಪ್ರ್ಯಾಂಚೈಸಿ ಘಟಕ.

9.ರಾಜ್ಯದ ಯಾವುದೇ ಜಿಲ್ಲೆಯಲ್ಲಿ 108 ಎಕರೆ ಕ್ಯಾಂಪಸ್‍ನಲ್ಲಿ 143 ನಾಲೇಡ್ಜ್ ಬ್ಯಾಂಕ್ @ 2047 ಗಳಲ್ಲಿ ಎಫ್ – ಮಾರ್ಟ್ ಬೃಹತ್ ಘಟಕ.

108 ಕೃಷಿ ಆಶ್ರಮಗಳ ಜನ್ಮದಾತರ, ಎಲ್ಲಾ ವರ್ಗದವರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಪತ್ರ ವ್ಯವಹರಿಸಿದ ನಂತರ, ಅಂತಿಮ ನಿರ್ಧಾರ ಕೈಗೊಳ್ಳುವುದು ಸೂಕ್ತವಾಗಿದೆ.