22nd February 2025
Share

TUMAKURU:SHAKTHIPEETA FDOUNDATION

  ಕರ್ನಾಟಕ ರಾಜ್ಯದಲ್ಲಿ ಸಾವಯವ ಕೃಷಿಗಾಗಿ, ಲಕ್ಷಾಂತರ ರೈತ ವಿಜ್ಞಾನಿಗಳು ಕಸರತ್ತು ಮಾಡುತ್ತಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ದೇಶಸೇವೆ ಎಂದರೆ ತಪ್ಪಾಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಇಂಥಹ ರೈತರಿಗೆ ಆತ್ಮವಿಶ್ವಾಸ ತುಂಬುವ ವೈಜ್ಞಾನಿಕ ಕಾರ್ಯ ಮಾಡುವುದು ಅಗತ್ಯವಾಗಿದೆ, ಎಂಬುದು ಹಲವಾರು ರೈತರ ಅಭಿಪ್ರಾಯವಾಗಿದೆ.

  ಸಾವಯವ ಕೃಷಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಕ್ರಾಂತಿಯಾಗಿ/ಬೃಹತ್ ಆಂದೋಲನವಾಗಿ ಅಬ್ಬರ ಮಾಡುತ್ತಿದೆ. ಸರ್ಕಾರಗಳ ಇಲಾಖೆಗಳ ಸಹಭಾಗಿತ್ವದೊಂದಿಗೆ ರೈತರ ಜಮೀನಿಗೆ ಎಲ್ಲಾ ವೈಜ್ಞಾನಿಕ ವಿಧಾನಗಳ ತಾಂತ್ರಿಕ ಮಾಹಿತಿಯೊಂದಿಗೆ ಹೆಜ್ಜೆ ಹಾಕುವುದು ಸೂಕ್ತವಾಗಿದೆ. ಈ ಹಿನ್ನಲೆಯಲ್ಲಿ ಆಸಕ್ತರು ಕೈಜೋಡಿಸಲು ಮನವಿ.