TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ, ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಪಾಟೀಲ್ ರವರು. ನೇರ, ದಿಟ್ಟ, ನಿರಂತರ ಎರಡು ಮಾತಿಲ್ಲ. ಬಹುತೇಕ ಅವರು ಇಚ್ಚೆ ಪಟ್ಟ ಹುದ್ದೆ ಇದಾಗಿರ ಬಹುದು. ಇಲ್ಲದಿದ್ದರೇ ಬಾಂಬ್ ಸಿಡಿಯುತ್ತಿತ್ತು.

ನಾನು ದಿನಾಂಕ:04.03.2025 ರಂದು ವಿಧಾನ ಸೌಧದಲ್ಲಿರುವ ಅವರ ಕಚೇರಿ ಮತ್ತು ಬಹು ಮಹಡಿಗಳ ಕಟ್ಟದಲ್ಲಿರುವ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಕಚೇರಿಗಳಿಗೆ ಭೇಟಿ ನೀಡಿದ್ದೆ. ಒಂದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕುವ ಆಯೋಗ ಇದಾಗಿದೆ.
ಪಾಟೀಲರ ಹೆಜ್ಜೆ ಹೇಗಿರಲಿದೆ ಎಂಬ ಬಗ್ಗೆ ಕಾದು ನೋಡಬೇಕಿದೆ.
