8th April 2025
Share

TUMAKURU:SHAKTHIPEETA FOUNDATION

  ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮಂಡಿಸಿದ 2025-2026 ನೇ ಸಾಲಿನ ಆಯವ್ಯಯ, ಕೇಂದ್ರ ಸರ್ಕಾರದ ಅನುದಾನ ಬಳಕೆಗೆ ವಿಶೇಷ ಒತ್ತು ನೀಡಲಾಗಿದೆ. ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ವಿವಿಧ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಅನದಾನ ಪಡೆಯುವ ಕಸರತ್ತು ನಿಜಕ್ಕೂ ಅದ್ಭುತವಾಗಿದೆ.

ಬೆಂಗಳೂರು ಅಭಿವೃದ್ಧಿಗೆ ಸ್ಪೆಷಲ್ ಪರ್ಪಸ್ ವೆಹಿಕಲ್

  ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ, ಸ್ಪೆಷಲ್ ಪರ್ಪಸ್ ವೆಹಿಕಲ್  ಮಾಡಿದಾಗ ವ್ಯಾಪಕ ವಿರೋಧವಾಗಿತ್ತು. ಈಗ ಬೆಂಗಳೂರು ಅಭಿವೃದ್ಧಿಗೆ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆ ಆಲೋಚನೆ ಮಾಡಿದ್ದಾರೆ. ಏನೇ ಆಗಲಿ ಪಾರದರ್ಶಕತೆ ಇದ್ದಲ್ಲಿ, ಬೆಂಗಳೂರು ಅಭಿವೃದ್ಧಿಯ ಪೂರಕ ಯೋಜನೆಗಳಿಗೆ ಅನೂಕೂಲವಾಗಬಹುದು.

ಎಲ್ಲರಿಗೂ ಗ್ಯಾರಂಟಿ – ಸಾಲದ ಅಡಕಕತ್ತರಿಗೆ  ?

  ಎಲ್ಲರಿಗೂ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಹೊಡೆತ, ರಾಜ್ಯವನ್ನು ಸಾಲದ ಅಡಕಕತ್ತರಿಗೆ  ಸಿಲುಕಿಸಿದೆ. ಅರ್ಹರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಜಾರಿಗೆ ಗಮನ ಹರಿಸಿಬಹುದಿತ್ತು. ಆದರೇ ಚುನಾವಣಾ ಪ್ರಣಾಳಿಕೆ ಘೋಷಣೆಯ ಬದ್ದತೆಗೆ ಕಟಿಬದ್ದರಾಗಿದ್ದಾರೆ. ಜೊತೆಗೆ ದುಡಿಯುವವರಿಗೂ ಅವಕಾಶ ನೀಡಿದ್ದಾರೆ. ಸಮಸಮಾಜದ ಯೋಜನೆಗಳಿಗೆ  ಕಸರತ್ತು ಮಾಡಿದ್ದಾರೆ.

ಡಿಜಿಟಲ್‍ಗೆ ಒತ್ತು.

ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಜಿ.ಐ.ಎಸ್, ಡಿಜಿಟಲ್ ವ್ಯವಸ್ಥೆಗೆ ವಿಶೇಷ ಗಮನಹರಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.

-ಕುಂದರನಹಳ್ಳಿ ರಮೇಶ್

ಅಧ್ಯಕ್ಷರು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ