ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮಂಡಿಸಿರುವ, 2025-2026 ನೇ ಸಾಲಿನ ಆಯವ್ಯಯದ ಪುಟ ಸಂಖ್ಯೆ 99 ರಲ್ಲಿನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ, 272 ನೇ ವಿಷಯದ, 4 ನೇ ಅಂಶ : ಹಿರಿಯ ಅಧಿಕಾರಿಗಳಿಂದ ಗ್ರಾಮಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ‘ಗ್ರಾಮ ಪಂಚಾಯಿತಿ ದತ್ತು’ ಕಾರ್ಯಕ್ರಮವನ್ನು ಆರಂಭಿಸಲಾಗುವುದು.
ನಿಜಕ್ಕೂ ಇದೊಂದು ಅತ್ಯುತ್ತಮವಾದ ಯೋಜನೆಯಾಗಲಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಆಸಕ್ತ ಹಿರಿಯ ಅಧಿಕಾರಿಗಳು ದತ್ತು ಪಡೆದು, 2047 ರವರೆಗೆ ನಿರಂತರವಾಗಿ ಶ್ರಮಿಸಿದರೆ, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರೆಯಲಿದೆ.
ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ, ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್‍ರವರಿಗೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆರವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ನಂಬರ್ ಒನ್ ಕರ್ನಾಟಕ @ 2047 ಜಾರಿಗಾಗಿ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗೂ, ನೋಡೆಲ್ ಅಧಿಕಾರಿಗಳಾಗಿ, ಒಬ್ಬೊಬ್ಬ ಸರ್ಕಾರಿ ಅಧಿಕಾರಿ ಅಥವಾ ನೌಕರರನ್ನು ನೇಮಿಸಲು, ರಾಜ್ಯ ಸರ್ಕಾರದ ಗಮನ ಸೆಳೆಯಲಾಗಿತ್ತು.
ಬೆಂಗಳೂರು ನಗರಾಭಿವೃದ್ಧಿ ಸಚಿವರು, ನಗರಾಡಳಿತ ಮತ್ತು ಫೌರಾಡಳಿತ ಸಚಿವರಿಗೂ, ಹಿರಿಯ ಅಧಿಕಾರಿಗಳಿಂದ ‘ಬಡಾವಣೆವಾರು ದತ್ತು’ ಕಾರ್ಯಕ್ರಮ ಆರಂಭಿಸಲು ಮನವಿ ಮಾಡಲಾಗಿದೆ. ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ‘ವಿಕಸಿತ ಭಾರತ @ 2047’ ಘೋಷಣೆ ಮಾಡಿದರೆ, ರಾಜ್ಯ ಸರ್ಕಾರವೂ ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಗೂ ವಿಶೇಷ ಗಮನ ಹರಿಸಿರುವುದು, ದೇಶದಲ್ಲಿಯೇ ವಿನೂತವಾಗಿರ ಬಹುದು.
-ಕುಂದರನಹಳ್ಳಿ ರಮೇಶ್
ಮಾಜಿ ಸದಸ್ಯ: ರಾಜ್ಯ ಮಟ್ಟದ ದಿಶಾ ಸಮಿತಿ