18th March 2025
Share

TUMAKURU:SHAKTHIPEETA FOUNDATION

1.            ಯಾವುದೇ ಅಧಿಕಾರಿ ಅಥವಾ ನೌಕರರನ್ನು ಅವರು ಖುಷಿಯಿಂದ ಇಚ್ಚೆ ಪಡುವ ಗ್ರಾಮ ಪಂಚಾಯತ್/ಬಡಾವಣೆ   ದತ್ತುದಾರರಾಗಿ’ ಆಗಿ ನೇಮಿಸುವುದು. ನಂತರ ಅವರು ಗ್ರಾಮಗಳಿಗೆ ಒಬ್ಬ ದತ್ತುದಾರರಾಗಿ’ ನೇಮಿಸಿಕೊಳ್ಳಲು ಅವಕಾಶವಿರಬೇಕು.

2.            ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಯೂನಿವರ್ಸಲ್ ಮಿನಿಮಮ್ ಇನ್‍ಕಮ್, ಯೂನಿವರ್ಸಲ್ ಬೇಸಿಕ್ ಇನ್‍ಕಮ್, ಇತ್ಯಾದಿ ಯೋಜನೆಗಳ ಜಾರಿಗೆ ಶ್ರಮಿಸುತ್ತಿವೆ, ನಮ್ಮ ದೇಶ, ರಾಜ್ಯದಲ್ಲೂ ಹಲವಾರು ಸಾಮಾಜಿಕ ಭಧ್ರತೆ ಯೋಜನೆಗಳು ಜಾರಿಯಲ್ಲಿವೆ. ಈಗ ಗ್ಯಾರಂಟಿಗಳ ಕಾಲ, ಈ ಎಲ್ಲಾ ಯೋಜನೆಗಳ ಅವಲೋಕನ ಮತ್ತು ಸಂಶೋಧನೆಯಾಗಲೇಬೇಕು. ಇದಕ್ಕೆ ಪೂರಕವಾಗಿ ‘ಜಾತಿ ಗಣತಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ’ ಆಯಾ ವ್ಯಾಪ್ತಿಯ ಜನರಿಂದಲೇ ಪಕ್ಕಾ ಆಗಬೇಕು. ಪ್ರತಿಯೊಬ್ಬರಿಗೂ/ಕುಟುಂಬಕ್ಕೂ ‘ಆರ್ಥಿಕ ಗ್ರೇಡ್’ ನೀಡಬೇಕು. ಎಲ್ಲಾ ಜಾತಿಯ ಅರ್ಹರನ್ನು ‘ಆರ್ಥಿಕ ಸಬಲ’ರನ್ನಾಗಿ ಮಾಡಲು ‘ವಿಶೇಷ ಯೋಜನೆ’ ರೂಪಿಸಬೇಕು. ‘ನೀಡ್ ಬೇಸ್ಡ್ ಪ್ರಸ್ತಾವನೆ’ ಗಳನ್ನು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ವಿಶೇಷ ಅನುದಾನ ಪಡೆಯಲು ‘ಪಕ್ಷಾತೀತವಾಗಿ’ ಶ್ರಮಿಸಬೇಕು.   ‘ನಂಬರ್ ಒನ್ ಕರ್ನಾಟಕ @ 2047’ ನಿರ್ಮಾಣ ಮಾಡÀಬೇಕಾದರೆ ಹಲವಾರು ಕಠೀಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

3.            ಪ್ರತಿಯೊಬ್ಬ ‘ವ್ಯಕ್ತಿ’2047 ರ ವೇಳೆಗೆ ನಾನು ಹೇಗೆ ಅಭಿವೃದ್ಧಿ ಆಗಬೇಕು ಎಂಬ ಕನಸು ಕಾಣುತ್ತಿರುವ ಮಾಹಿತಿ ಸಂಗ್ರಹ ಮಾಡಬೇಕು.

4.            ಪ್ರತಿಯೊಂದು ‘ಕುಟುಂಬ’ 2047 ರ ವೇಳೆಗೆ ನಾವು ಹೇಗೆ ಅಭಿವೃದ್ಧಿ ಆಗಬೇಕು ಎಂಬ ಕನಸು ಕಾಣುತ್ತಿರುವ ಮಾಹಿತಿ ಸಂಗ್ರಹ ಮಾಡಬೇಕು.

5.            ಪ್ರತಿಯೊಂದು ಗ್ರಾಮದ/ಬಡಾವಣೆಯ ‘ಸರ್ವೆನಂಬರ್/ಸ್ವತ್ತು’ 2047 ರ ವೇಳೆಗೆ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಮಾಹಿತಿ ಸಂಗ್ರಹ ಮಾಡಬೇಕು.

6.            ಗ್ರಾಮೀಣ ಪ್ರದೇಶಗಳಲ್ಲಿ ವಿಲೇಜ್ ವ್ಯಾಪ್ತಿಯನ್ನು ಮತ್ತು ನಗರ ಪ್ರದೇಶಗಳಲ್ಲಿ ಬಡಾವಾಣೆಯನ್ನು ಒಂದು ‘ಯೂನಿಟ್’ ಎಂದು ಪರಿಗಣಿಸಬೇಕು.

7.            ರಾಜ್ಯದ್ಯಾಂತ ನಗರ ಸ್ಥಳೀಯ ಸಂಸ್ಥೆಗಳ ‘ಬಡಾವಣೆಗಳ ಹೆಸರು ಮತ್ತು ನಕೆ’್ಷ ಘೋಷಣೆಯಾಗಬೇಕು.

8.            ಪ್ರತಿಯೊಂದು ‘ವಿಲೇಜ್ ಮ್ಯಾಪ್’ ನಲ್ಲಿರುವ ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

9.            ಪ್ರತಿಯೊಂದು ಗ್ರಾಮ ನಕ್ಷೆ ಮತ್ತು ಬಡಾವಣೆ ನಕ್ಷೆಗಳ ವ್ಯಾಪ್ತಿಯ ‘ಟೋಪೋಶೀಟ್’ ನಲ್ಲಿರುವ ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

10.         ಪ್ರತಿಯೊಂದು ಗ್ರಾಮ ನಕ್ಷೆ ಮತ್ತು ಬಡಾವಣೆ ನಕ್ಷೆಗಳ ವ್ಯಾಪ್ತಿಯ ‘ಗೂಗಲ್ ಇಮೇಜ್’ ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

11.         ಪ್ರತಿಯೊಂದು ಗ್ರಾಮ ನಕ್ಷೆ ಮತ್ತು ಬಡಾವಣೆ ನಕ್ಷೆಗಳ ವ್ಯಾಪ್ತಿಯ ‘1947 ಕ್ಕಿಂತ ಮೊದಲು’ ಹೇಗಿತ್ತು ಎಂಬ  ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

12.         ಪ್ರತಿಯೊಂದು ಗ್ರಾಮ ನಕ್ಷೆ ಮತ್ತು ಬಡಾವಣೆ ನಕ್ಷೆಗಳ ವ್ಯಾಪ್ತಿಯಲ್ಲಿ ‘1947 ರಿಂದ  2024 ರವರೆಗೆ’ ಹೇಗೆ ಅಭಿವೃದ್ಧಿ ಹೊಂದಿದೆ ಎಂಬ ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

13.         ‘2025 ರಿಂದ 2047 ರವರೆಗೆ’ ಹೇಗೆ ಅಭಿವೃದ್ಧಿ ಹೊಂದ ಬೇಕು ಎಂಬ ಮಾಹಿತಿ ಡಾಟಾ ವಿಶ್ಲೇಷಣೆಯೊಂದಿಗೆ ಅವಲೋಕನ ಮತ್ತು ಸಂಶೋಧನೆಯಾಬೇಕು.

14.         ಈ ಎಲ್ಲಾ ನಿಖರವಾದ ಮಾಹಿತಿಗಳ ‘ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047’ ಸಿದ್ಧವಾಗ ಬೇಕು. ಇಲ್ಲಿ ಎಲ್ಲಾ ಅಂಶಗಳ ಮಾಹಿತಿ ಇರಬೇಕು.

15.         ಒಂದೇ ನಕ್ಷೆ- ಒಂದೇ ಡಾಟಾ

  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಏಜೆನ್ಸಿಗಳಾದ

•             ಸೆಂಟರ್ ಆಫ್ ಇ ಗೌರ್ವನೆನ್ಸ್.

•             ಎನ್.ಆರ್.ಡಿ.ಎಂ.ಎಸ್.

•             ಕೆ.ಎಂ.ಡಿ.ಎಸ್.

•             ಕೆ.ಎಸ್.ಆರ್.ಎಸ್.ಎ.ಸಿ.

•             ಎನ್.ಐ.ಸಿ.

•             ಮಾಹಿತಿ ಕಣಜ.

•             ಕುಟುಂಬ.

•             ಡಾಟಾ ಲೇಕ್.

•             ಐ.ಸಿ.ಸಿ.ಸಿ.

•             ಇಲಾಖಾವಾರು.

•             ಅಂಕಿಅಂಶಗಳ ಇಲಾಖೆ

ಮೂಲಕ ಡಾಟಾ ಸಂಗ್ರಹಣೆ ಮಾಡುತ್ತಿವೆ. ಈ ಎಲ್ಲಾ ಡಾಟಾ ಮೂಲಗಳನ್ನು ಒಂದೇ ರೂಪ್‍ನಡಿ ತರಲು ‘ಒಂದು ರಾಜ್ಯ- ಒಂದು ನಕ್ಷೆ ಮತ್ತು ಒಂದು ರಾಜ್ಯ- ಒಂದೇ ಡಾಟಾ’  ಘೋಷಣೆಯಾಗ ಬೇಕು. ಈ ಡಾಟಾಗಳು ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ರಲ್ಲಿ ಜೋಡಣೆಯಾಗಬೇಕು.

•             ಸರ್ಕಾರಿ ಯೋಜನೆಗಳ ಗುತ್ತಿಗೆದಾರರೇ ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಡೇಟ್ ಮಾಡಿಸÀಬೇಕು.

•             ಸರ್ಕಾರಿ ಯೋಜನೆಗಳ ಗುತ್ತಿಗೆ ಕರಾರಿನಲ್ಲಿಯೇ ಇದಕ್ಕೆ ಹಣ ಮೀಸಲೀಡಬೇಕು,

•             ಬಿಲ್ ಮಾಡುವಾಗ ಇದು ಕಡ್ಡಾಯವಾಗಬೇಕು.

•             ಎಲ್ಲಾ ಇಲಾಖೆಗಳ ಡಾಟಾ ಆಪರೇಟರ್  ಜಿಐಎಸ್ ಲೇಯರ್‍ಗೆ ಅಫ್ ಡೇಟ್ ಆಗಬೇಕು.

•             ಖಾಸಗಿಯವರು ಸಹ ತಮ್ಮ ಎಲ್ಲಾ ಕೆಲಸಗಳನ್ನು ಜಿಐಎಸ್ ಪೋರ್ಟಲ್‍ಗೆ  ಅಫ್ ಡೇಟ್ ಮಾಡಿಸÀಬೇಕು.

16.         ಹಾಲಿ ಇರುವ ಎಲ್ಲಾ ಇಲಾಖೆಗಳ ಡಾಟಾಗಳನ್ನು ಊರಿಗೊಂದು/ಬಡಾವಣೆಗೊಂದು ಪುಸ್ತಕದಲ್ಲಿ ನಮೂದಿಸಿ, ಪರಿಶೀಲನೆ ಮಾಡಿಸ ಬೇಕು.

•             ಗ್ರಾಮಗಳ ಮತ್ತು ಬಡಾವಣೆಗಳ ಆಯಾ ವ್ಯಾಪ್ತಿಯ ಡಾಟಾ ವಿಶ್ಲೇಷಣೆ ‘ಆರ್ಟಿಫೀಷಿಯಲ್ ಇಂಟಲಿಜೆನ್ಸ್’ ಪ್ರಕಾರ ನಡೆಯಬೇಕು. ಮಾರ್ಗದರ್ಶಿ ಸೂತ್ರ ಸಿದ್ಧಪಡಿಸ ಬೇಕು.

17.         ಎಲ್ಲಾ ರಾಜಕೀಯ ಪಕ್ಷಗಳು ‘ಚುನಾವಣಾ ಪ್ರಣಾಳಿಕೆ’ ಮಾಡುವಾಗ ಇದೇ ಡಾಟಾ ಬಳಸಿಕೊಳ್ಳ ಬೇಕು.

18.         ಸರ್ಕಾರಗಳು ವಾರ್ಷಿಕ ‘ಆಯವ್ಯಯ’ ಮಂಡಿಸುವಾಗ ಇದೇ ಡಾಟಾ ಬಳಸಿಕೊಳ್ಳ ಬೇಕು.

19.         ‘2025 ನೇ ಸಾಲಿನ ವರ್ಷವನ್ನು ನಂಬರ್ ಒನ್ ಕರ್ನಾಟಕ @ 2047 ವರ್ಷವನ್ನಾಗಿ ಘೋಷಣೆ’ ಮಾಡಬೇಕು. 2047 ರವರೆಗಿನ ಎಲ್ಲಾ ‘ನೀಡ್ ಬೇಸ್ಡ್ ಬೇಡಿಕೆಗಳ ಪಟ್ಟಿ’ ಅಂತಿಮ ಗೊಳಿಸಬೇಕು.

20.         2047 ರ ವೇಳೆಗೆ ‘ಎಲ್ಲಾ ಬೇಡಿಕೆಗಳನ್ನು 0 % ಗೆ ಇಳಿಸಲು’ ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳ ಸಭೆಗಳಿಗೆ ‘ಮೀಟಿಂಗ್ ಟೆಂಪ್ಲೇಟ್’ ಸಿದ್ಧವಾಗಬೇಕು. ಪ್ರಗತಿ ಆಧಾರದ ಮೇಲೆ ‘ರ್ಯಾಂಕಿಂಗ್’ ನಿಗಧಿಗೊಳಿಸಬೇಕು. ವಿವಿಧ ಹಂತದ ‘ಪ್ರಶಸ್ತಿ’ ಗಳನ್ನು ಪ್ರಕಟಿಸ ಬೇಕು.

21.         ಊರಿಗೊಬ್ಬ/ಬಡಾವಣೆಗೊಬ್ಬ ‘ಡಾಟಾ ಮಿತ್ರ’ ಕಮಿಷನ್ ಆಧಾರದಲ್ಲಿ ನೇಮಕ ವಾಗಬೇಕು.

ಡಾಟಾ ಮಿತ್ರ ಪರಿಕಲ್ಪನೆ

•             ನಮ್ಮ ಅಜ್ಜಿ ಹೇಳುವ ಕಥೆಯಲ್ಲೂ ವಿಜ್ಞಾನವಿತ್ತು.

•             ವಾಸ್ತುವಿನಲ್ಲೂ ವಿಜ್ಞಾನವಿದೆ.

•             ಇತಿಹಾಸ ಗೊತ್ತಿಲ್ಲದೆ ಆಡಳಿತ ನಡೆಸಲು ಸಾದ್ಯಾವಿಲ್ಲ.

•             ನಿಖರವಾದ ಡಾಟಾ ಇಲ್ಲದೇ ಶೇ 100 ರಷ್ಟು ಗುರಿಮುಟ್ಟಲೂ ಸಾದ್ಯವಿಲ್ಲ.

•             ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ ನೇಮಕ.

•             ಆಯಾ ಊರಿನ/ಬಡಾವಣೆಯ ಎಲ್ಲಾ ವಿಚಾರಗಳ ವಿಕಿಪೀಡಿಯಾದಂತಿರಬೇಕು.

•             ಎಲ್ಲಾ ಸರ್ಕಾರಿ ಗಣತಿ ಮಾಡುವವರಾಗಿರ ಬೇಕು.

•             ಎಲ್ಲಾ ಸರ್ಕಾರಿ ಸರ್ವಿಸ್ ಮನೆಬಾಗಿಲಿಗೆ ದೊರಕಿಸುವವ.

•             ಯಾವುದೇ ಇಲಾಖೆಯ, ಯಾವುದೇ ಯೋಜನೆಯ ಕಮಿಷನ್ ಆಧಾರದ ಮೇಲೆ ಜಿಐಎಸ್ ಆಧಾರಿತ ಲೈವ್ ಡಾಟಾ ಡಿಜಿಟಲ್ ದಾಖಲೆ.

•             ಫಾರ್ ವಾರ್ಡ್ ಅಂಡ್ ಬ್ಯಾಕ್ ವಾರ್ಡ್ ಸಂಪರ್ಕ ಸೇತುವೆ.

•             ಆ ವ್ಯಾಪ್ತಿಯ ದಿನ ನಿತ್ಯದ ದಿನಚರಿ ಬರೆಯುವವ.

•             ಥೀಮ್ ಪಾರ್ಕ್‍ನಲ್ಲಿಯೇ ವಾಸದ ಸಹಿತ ನಿರ್ವಹಣೆ

•             ಸರ್ಕಾರಿ ಯೋಜನೆಗಳಿಗೆ ಗುತ್ತಿಗೆದಾರ ಹಣ ನೀಡಬೇಕು.

•             ಖಾಸಗಿ ಯೋಜನೆಗಳಿಗೆ ಖಾಸಗಿಯವರೇ ಪಾವತಿಸಬೇಕು.

•             ಎಲ್ಲಾ ವಿಧವಾದ ತೆರಿಗೆ ಸಂಗ್ರಹದಾರ.

•             ಗೋವಿನ ಉತ್ಪನ್ನಗಳು, ಆಯುಷ್ ಗಿಡ,ತೊಗಟೆ, ಬಳ್ಳಿ, ಗೆಡ್ಡೆ, ಬೇರು, ಎಲೆಯೂ ಸೇತರಿದಂತೆ, ಎಲ್ಲಾ ವಿಧವಾದ ಮೌಲ್ಯವರ್ಧಿತ ಉತ್ಪನ್ನಗಳ ರಫ್ತುದಾರ.

22.         ಉದಾಹರಣೆ ಹೀಗೆ ಸಾವಿರಾರು ಕಾಮಗಾರಿಗಳ, ಅಂಶಗಳ ಪಟ್ಟಿ ಮಾಡುವುದು. ಸಪೋರ್ಟಿಂಗ್ ಡಾಕ್ಯುಮೆಂಟ್ ಲಗತ್ತಿಸಬೇಕು. ಡಾಟಾ ಮಿತ್ರರಿಗೆ ‘ನಿರ್ಧಿಷ್ಠ ಆದಾಯ’ ಬರುವಂತಿರಬೇಕು.  ಪ್ರತಿಯೊಂದು ಚಟುವಟಿಕೆಗಳಿಗೂ ಇಂತಿಷ್ಟು ನಿರ್ಧಿಷ್ಠ ಹಣ ಎಂದು ಸರ್ಕಾರ ನಿಗದಿ ಗೊಳಿಸಬೇಕು. ಅದರಲ್ಲಿ ಮೂರು ಭಾಗ ಮಾಡಬೇಕು, ಉದಾ: 60 % ಡಾಟಾ ಮಿತ್ರ ಕಮಿಷನ್ + 20 %ಡಿಜಿಟಲ್ ಪ್ಲಾಟ್ ಫಾರಂ ಸರ್ವಿಸ್ ಚಾರ್ಜು + 20 % ಸರ್ಕಾರಿ ಖಜಾನೆಗೆ ಜಮಾ ಮಾಡಬೇಕು. ಸಿ.ಎಸ್.ಸಿ ಸೆಂಟರ್ ಸೇವೆ, ಗ್ರಾಮ ಒನ್ ಸೇವೆ, ಅಟಲ್ ಸೇವೆ, ರೈತ ಸಂಪರ್ಕ ಕೇಂದ್ರ ಇತ್ಯಾದಿ ಒಂದೇ ರೂಪ್ ನಡಿ ಬರಬೇಕು. ಪಟಾ ಪಟ್ ‘ಜಿ.ಐ.ಎಸ್ ಆಧಾರಿತ ಫೋಟೋ ಸಹಿತ ಸಂಭಂಧಿಸಿದ ಇಲಾಖೆಗೆ ಪ್ರತಿ ದಿನ ಅಫ್ ಲೋಡ್’ ಮಾಡುತ್ತಿರÀಬೇಕು.

•             ಗಿಡಹಾಕಿದರೆ

•             ಗಿಡ ಕಡಿದರೆ

•             ರಸ್ತೆ ಅಗಿದರೆ.

•             ಪೈಪ್ ಲೈನ್ ಹಾಕಿದರೆ.

•             ಚರಂಡಿ ನೀರು ನಿಂತರೆ.

•             ಮನೆ ಕೆಡವಿದರೆ

•             ಮನೆ ಕಟ್ಟಿದರೆ.

•             ಮಗು ಹುಟ್ಟಿದರೆ

•             ಯಾರಾದರೂ ಸತ್ತರೆ.

•             ಜಲಸಂಗ್ರಾಗಾರ ತುಂಬಿದರೆ.

•             ಸರ್ಕಾರಿ ಜಮೀನು ಒತ್ತುವರಿ ಮಾಡಿದರೆ.

•             ಕಾಯಿಲೆ ಬಂದರೆ.

•             ನ್ಯಾಯಾಲಯದ ಕೇಸು ದಾಖಲಾದರೆ.

•             ಜಗಳವಾಡಿದರೆ.

•             ಯಾರಾದರೂ ಆಫೀಸರ್ ಬಂದರೆ.

•             ಅಪರಿಚತ ಹೊಸಬರು ಪ್ರವೇಶ ಮಾಡಿದರೆ

•             ಎಪಿಎಲ್

•             ಬಿಪಿಎಲ್

•             ಸರ್ಕಾರಿ ಸೇವೆಗಳು.

•             ಯಾವುದೇ ಉತ್ಪನ್ನ ರಫ್ತು

•             ಯಾವುದೇ ಉತ್ಪನ್ನ ಮಾರಾಟ

•             ಬೆಳೆ ಬಿತ್ತಿದರೆ.

•             ಬೆಳೆ ಕೊಯ್ದರೆ.

•             ಮಳೆ ಬಂದರೆ.

•             ಗಾಳಿ ಬೀಸಿದರೆ.

•             ಬೆಂಕಿ ಬಿದ್ದರೆ.

•             ಕಳ್ಳತನವಾದರೆ.

•             ವಲಸೆ ಹೋದರೆ.

•             ವಲಸೆ ಬಂದರೆ.

•             ಮದುವೆ ಆದರೆ.

•             ಹಾವು ಕಡಿದರೆ.

•             ಪ್ರಾಣಿ ಸತ್ತರೆ.

•             ಪ್ರಾಣಿ ತಂದರೆ.

•             ಪ್ರಾಣಿ ಹುಟ್ಟಿದರೆ

•             ಟಿಸಿ ಸುಟ್ಟರೆ.

•             ಕರೆಂಟ್ ಹೋದರೆ.

•             ಇಂಟರ್ ನೆಟ್ ಹೋದರೆ,  ಇತ್ಯಾದಿ ಸಾವಿರಾರು ಕೆಲಗಳ ಪಟ್ಟಿ ಸಿದ್ಧವಾಗಬೇಕು — ?

23.         ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮಾದರಿಯಲ್ಲಿ, ಪ್ರತಿಯೊಂದು ಊರಿನ ಮತ್ತು ಬಡಾವಣೆಗಳ ವ್ಯಾಪ್ತಿಯ 6 ನೇ ತರಗತಿಯಿಂದ ಮಾಸ್ಟರ್ ಡಿಗ್ರಿವರೆಗೂ, ದೇಶದ ಯಾವುದೇ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯಾ ಮಟ್ಟದ ‘ರೀಸರ್ಚ್ ಫೌಂಡೇಷನ್’ ರಚಿಸಬೇಕು. ಇವರು ಡಾಟಾ ಮಿತ್ರರಿಗೆ ಸಹಕಾರ ನೀಡಬೇಕು. ‘ಹಳ್ಳಿ ಹಳ್ಳಿಗೂ ವಿಜ್ಞಾನ, ಹಳ್ಳಿ ಹಳ್ಳಿಗೂ ಸ್ಟಾಟ್ ಅಫ್, ಹಳ್ಳಿ ಹಳ್ಳಿಯಲ್ಲೂ ಇನ್ನೊವೇಷನ್, ಸಂಶೋದನೆ ಮನೆ ಮಾತಾಗಬೇಕು’ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ನಿಂದ ನೇರವಾಗಿ ಗ್ರಾಮೀಣ ಸಂಶೋಧನೆಗೆ ನೆರವು ದೊರುಕುವಂತ ವ್ಯವಸ್ಥೆ ನಿರ್ಮಾಣವಾಗಬೇಕು. ವಿಜ್ಞಾನ, ಪರಿಸರ, ಕಾನೂನು, ಯೋಜನೆ, ಎಲ್ಲಾ ಇಲಾಖೆಗಳಲ್ಲೂ ವಿಶೇಷ ಪಾತ್ರ ವಹಿಸಲಿವೆ, ಆದರೆ ವಿಜ್ಞಾನ ಇಲಾಖೆ, ಕೆಲವು ಚಟುವಟಿಕೆಗಳಿಗೆ ಮಾತ್ರ ಸೀಮೀತವಾಗಿರುªದರಿಂದ, ಎಲ್ಲದರಲ್ಲೂ ‘ವಿಜ್ಞಾನ ಆದಿಪತ್ಯ ಸಾಧಿಸಿದರೇ ಮಾತ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರೆಯಲಿದೆ. 

24.         ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳು ಎಲ್ಲೇ ಓದುತ್ತಿದ್ದರೂ, ಆಯಾ ‘ಊರಿನ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047’ ಸಿದ್ಧಪಡಿಸಲು ಮತ್ತು ಪ್ರತಿ ದಿವಸದ ಮಾಹಿತಿಗಳನ್ನು ಅಫ್ ಡೇಟ್ ಮಾಡುವ ಕೆಲಸಗಳನ್ನು ಇಂಟರ್ನ್ ಷಿಪ್, ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್ಸ್, ಪಿಹೆಚ್‍ಡಿ ಗಳಿಗೆ ಹೊಂದಾಣಿಕೆ ಮಾಡುವ ನಿಯಮ ರೂಪಿಸಬೇಕು.

25.         ಪ್ರತಿಯೊಂದು ಊರಿನ ಮತ್ತು ಬಡಾವಣೆಗಳ ವ್ಯಾಪ್ತಿಯ ಚುನಾಯಿತ ಜನಪ್ರತಿ ನಿಧಿಗಳು, ಆಯಾ ಮಟ್ಟದ ಅಧಿಕಾರಿಗಳು,  ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಾಸವಿರುವ ಎಲ್ಲಾ ಧರ್ಮದ, ಜಾತಿಯ/ ಉಪಜಾತಿಯ ಪ್ರತಿನಿಧಿಗಳು ಮತ್ತು ‘ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ಯ ನಾಲೇಡ್ಜ್‍ಬಲ್ ಪರ್ಸನ್‍ಗಳ ನೇತೃತ್ವದಲ್ಲಿ ಆಯಾ ವ್ಯಾಪ್ತಿಯ ‘ವಿಷನ್ ಗ್ರೂಪ್’ ರಚಿಸ ಬೇಕು.

26.         ಪ್ರತಿಯೊಂದು ಊರಿನ ಮತ್ತು ಬಡಾವಣೆಗಳ ವ್ಯಾಪ್ತಿಯ ಬೇಡಿಕೆಗಳ ಬಗ್ಗೆ ನಿರಂತರವಾಗಿ ಶ್ರಮಿಸಲು, ಯೋಜನೆವಾರು ಹೋರಾಟ ಮನೋಭಾವವುಳ್ಳವರ ‘ಪ್ರಷರ್ ಗ್ರೂಪ್’ ರಚಿಸಬೇಕು.

27.         ಪ್ರತಿಯೊಂದು ಊರಿನ ಮತ್ತು ಬಡಾವಣೆಗಳ ವ್ಯಾಪ್ತಿಯ ‘ಥೀಮ್ ಪಾರ್ಕ್’ ನಿರ್ಮಾಣ ಮಾಡ ಬೇಕು.  ಊರಿಗೊಂದು/ಬಡಾವಣೆಗೊಂದು  ಥೀಮ್ ಪಾರ್ಕ್‍ನಲ್ಲಿ, ರಫ್ತುಭವನ, ಗೋಡಾನ್, ಕೋಲ್ಡ್ ಸ್ಟೋರೇಜ್, ಡ್ರೈಯರ್, ಸ್ವಾತಂತ್ರ್ಯ ಪೂರ್ವದ, 1947 ರಿಂದ 2024 ರ  ಮತ್ತು ಮುಂದಿನ 2047 ರ ವರೆಗಿನ ಅಭಿವೃದ್ಧಿ ಮ್ಯೂಸಿಯಂ/ಗ್ರಂಥಾಲಯ, ಡಾಟಾ ಮಿತ್ರ ವಾಸದ ಮನೆ, ಗ್ರಾಮ ನಕ್ಷೆ ಲ್ಯಾಂಡ್ ಯೂಸ್ ಬಳಕೆ ಪ್ರಾತ್ಯಾಕ್ಷಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಭವನ, ವಿವಿಧ ಉತ್ಪನ್ನಗಳ ಮಾರಾಟ ಮಳಿಗೆ. ಎಲ್ಲಾ ವಿಧವಾದ ಮೂಲಭೂತ ಸೌಕರ್ಯ ಇರಬೇಕು,

28.         ಎನ್.ಆರ್.ಐ / ಎನ್ ಆರ್ ಕೆ/ ಎನ್ ಆರ್ ವಿಲೇಜ್/ಬಡಾವಣೆ ರವರು, ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ/ನಾಲೇಡ್ಜ್ ಬ್ಯಾಂಕ್ @2047/ ಅವರ ಹಟ್ಟೂರಿನ ಥೀಮ್ ಪಾರ್ಕ್ @ 2047 ಸ್ಥಾಪನೆಗೆ, ಹುಟ್ಟಿದ ಊರಿನ ಋಣ ತೀರಿಸಲು ‘ನೀಡ್ ಬೇಸ್ಡ್ ಆರ್ಥಿಕ ನೆರವು’ ನೀಡುವ ವ್ಯವಸ್ಥೆಗೆ ಅಥವಾ ಹೂಡಿಕೆಗೆ ಪಾರದರ್ಶಕವಾಗಿ ಮಾರ್ಗದರ್ಶಿ ಸೂತ್ರ ಜಾರಿಗೊಳಿಸಬೇಕು.

29.         ಯಾವುದೇ ‘ಗಣತಿ’ಯನ್ನು ಪ್ರತ್ಯೇಕವಾಗಿ ನಡೆಸ ಬೇಕಿಲ್ಲ, ಎಲ್ಲವೂ ಲೈವ್ ಡಾಟಾ ದೊರೆಯಲಿದೆ. ಆಯಾ ವ್ಯಾಪ್ತಿಯ ಯೋಜನೆಗಳ ‘ಆರ್.ಟಿ.ಐ’ ಮಾಹಿತಿಯೂ ಸಿಗಲಿದೆ. ದೇಶದ ಮತ್ತು ರಾಜ್ಯದ ಸಾಲದ ಮಾಹಿತಿ, ಕೇಂದ್ರ ಸರ್ಕಾರದ ಯೋಜನೆಗಳ ಮನಿ ಟ್ರಾಕಿಂಗ್, ಫೈಲ್ ಟ್ರ್ಯಾಕಿಂಗ್, ಲೆಟರ್ ಟ್ರ್ಯಾಕಿಂಗ್, ‘ಸೋಶಿಯಲ್ ಮೀಡಿಯಾ’ ದಲ್ಲಿ ಪ್ರಕಟವಾಗುತ್ತಿರಬೇಕು. ವಾರ್ಷಿಕ ಸಾವಿರಾರು ಕೋಟಿ ಹಣ ಸರ್ಕಾರಗಳಿಗೆ ಉಳಿಯಲಿದೆ. ಜೊತೆಗೆ ನಿಖರವಾದ ಪಕ್ಕಾ ಮಾಹಿತಿ ದೊರೆಯಲಿದೆ. ‘ಬೋಗಸ್ ಡಾಟಾ’ ಗಳಿಗೆ ಕಡಿವಾಣ.

30.         ಆಯಾ ವ್ಯಾಪ್ತಿಯ ಥೀಮ್ ಪಾರ್ಕ್‍ಗೆ, ಯಾವುದೇ ಅಧಿಕಾರಿಗಳು ಮತ್ತು ಸಾರ್ವಜನಿಕರು ಬಂದರೂ ‘ಆಧಾರ್ ಬಯೋ ಮೆಟ್ರಿಕ್ ಡಿಜಿಟಲ್ ದಾಖಲೆ’ ಸಂಗ್ರಹಿಸಬೇಕು. ಆಯಾ ವ್ಯಾಪ್ತಿಯ ಸಕಾಲ ಮನವಿದಾರರ ಲಿಂಕ್ ಮಾಡಬೇಕು.

31.         ಆಯಾ ವ್ಯಾಪ್ತಿಯ ರೈತರ, ಸ್ತ್ರೀಶಕ್ತಿ ಸಂಘಗಳ, ಕುಶಲಕರ್ಮಿಗಳ, ವಿಶ್ವಕರ್ಮ ಯೋಜನೆಯ, ಒಂದು ಜಿಲ್ಲೆ – ಒಂದು ಉತ್ಪನ್ನಗಳ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಚಟುವಟಿಕೆ, ಒಂದು ನಿರ್ಧಿಷ್ಠ ಬ್ರ್ಯಾಂಡ್ ಅಡಿ, ಪ್ಯಾಕೇಜ್ ಸಹಿತ ಅತ್ಯುತ್ತಮ ವಾಗಿ ‘ಕಾರ್ಪೋರೇಟ್ ಮಾದರಿ ರಫ್ತು ವ್ಯವಹಾರ’ ನಡೆಯಲು ಪ್ರೋತ್ಸಾಹಿಸಬೇಕು.

32.         ಗ್ರಾಮ/ಬಡಾವಣೆಗೊಂದು  ನಾಲೇಡ್ಜ್ ಬ್ಯಾಂಕ್ @ 2047 ವಾರ್ಷಿಕ ನಿರ್ವಹಣೆ

•             ಡಾಟಾ ಮಿತ್ರ ‘ಸರ್ವೀಸ್ ಚಾರ್ಜು ಪಾಲು’ ಬಳಸಿಕೊಳ್ಳುವುದು.

•             ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಂಛಿಛಿess ಚಿಟಿಜ ಃeಟಿeಜಿiಣ Shಚಿಡಿiಟಿg ‘ಎಬಿಎಸ್ ಫಂಡ್’ ಬಳಸಿಕೊಳ್ಳುವುದು.

•             ಲೋಕಸಭಾ/ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ‘ಶೇ 20 ರಷ್ಟು’ ಹಣವನ್ನು ವಾರ್ಷಿಕವಾಗಿ ಬಳಸಿಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸುವುದು.

•             ಸಂಶೋಧನೆ ಮತ್ತು ಅಭಿವೃದ್ಧಿಗಾಗಿ, ಪ್ರತಿಯೊಂದು  ಇಲಾಖೆಗಳಲ್ಲಿಯೂ ವಾರ್ಷಿಕ ಬಡ್ಜೆಟ್ ಅನುದಾನದಲ್ಲಿ ‘0.1% ನಿಂದ 0.7 %’ ನಿಗಧಿಗೊಳಿಸುವುದು.

•             ‘ಸಿ.ಎಸ್.ಆರ್ ಫಂಡ್’ ಮತ್ತು ದಾನಿಗಳ ಸಹಕಾರ.

•             ‘ದತು’್ತ ಪಡೆಯುವವರ ಸಹಕಾರ.

•             ವಿವಿಧ ಉತ್ಪನ್ನಗಳ ‘ಮಾರಾಟ ಮತ್ತು ರಫ್ತು ಕಮಿಷನ್’ ಮೊತ್ತ. ದುಡಿಮೆಯೊಂದಿಗೆ ಸಮಾಜ ಸೇವೆ ಘೋಷಣೆ.

33.         ಕೇಂದ್ರ ಸರ್ಕಾರ ಸಹಭಾಗಿತ್ವದ ‘ಆರ್‍ಸೆಟ್ಟಿ/ ರುಡ್‍ಸೆಟ್ಟಿ’ಗಳು, ಪ್ರತಿ ಜಿಲ್ಲೆಯಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ,  ಈ ಕೆಳಕಂಡ ಸಿಲಬಸ್ ಸೇರ್ಪಡೆ ಮಾಡಿ, ತರಭೇತಿ ನೀಡುವುದಲ್ಲದೇ, ಯೋಜನೆ ಅನುಷ್ಠಾನಕ್ಕಾಗಿ ಶ್ರಮಿಸುವುದರ ಜೊತೆಗೆ, ನಿರಂತರವಾಗಿ 2047 ರವರೆಗೂ ಮಾನಿಟರಿಂಗ್ ಮಾಡುವ ವ್ಯವಸ್ಥೆ ನಿರ್ಮಾಣವಾದರೆ ಒಳ್ಳೆಯದು. ಹಲವಾರು ಮಾರ್ಪಾಡುಗಳನ್ನು ಮಾಡಿ, ಗ್ರಾಮೀಣ ಪ್ರದೇಶದ ಜೊತೆಗೆ ನಗರಪ್ರದೇಶಗಳನ್ನು ಸೇರ್ಪಡೆ ಮಾಡಬೇಕು. ವಿದ್ಯಾಬ್ಯಾಸ, ವಯಸ್ಸಿನ ಮಿತಿ ಮತ್ತು ಸಾಲದ ಮಿತಿ ಸಡಿಲಗೊಳಿಸಬೇಕು.

•             ಡಾಟಾ ಮಿತ್ರ ಸಿಲಬಸ್ 

•             ಥೀಮ್ ಪಾರ್ಕ್ ಸಿಲಬಸ್ 

•             ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047 ಟೆಂಪ್ಲೇಟ್ ನೊಂದಿಗೆ ಸಿಲಬಸ್ 

34.         ಡಾಟಾ ಮಿತ್ರರ ನೇಮಕ ಮಾಡುವಾಗ ಪಾರದರ್ಶಕವಾಗಿ ‘1 : 5 ಅನುಪಾತ’ ದಲ್ಲಿ ಆಯ್ಕೆ ನಡೆಯುವುದು ಸೂಕ್ತವಾಗಿದೆ.

35.         ಗ್ರಾಮ/ಬಡಾವಣೆ  ವ್ಯಾಪ್ತಿಯ ನಾಲೇಡ್ಜ್ ಬ್ಯಾಂಕ್ @ 2047 ಗಳಿಗೆ ‘ಸಲಹಾ ಸಮಿತಿ’ ರಚಿಸಬೇಕು.

36.         ದತ್ತುದಾರರಿಗೆ  ‘ರಪ್ತು ಮತ್ತು ಸಭೆಗಳ ಆಧಾರಿತ ಇನ್ಸ್‍ಸೆಂಟೀವ್’ ನಿಗಧಿ ಮಾಡಬೇಕು.

  ಪಕ್ಷಾತೀತ/ಜಾತ್ಯಾತೀತ ಅನುಭವವುಳ್ಳವರನ್ನು ದತ್ತುದಾರರಿಗೆ ನೇಮಿಸಬೇಕು. ಅವರಿಗೆ ಕೆಳಕಂಡ ಸೌಕರ್ಯಗಳನ್ನು ನೀಡುವುದು. 

•             ಮೀಟಿಂಗ್ ಭತ್ಯೆ  

•             ಪ್ರವಾಸ ಭತ್ಯೆ 

•             ಪ್ರವಾಸದ ವೇಳೆ ದಿನ ಭತ್ಯೆ 

•             ಆರೋಗ್ಯ ವಿಮೆ

•             ಹೆಚ್ಚುವರಿ ಅಧ್ಯಯನ ಮಾಡಿದಾಗ ಯೋಜನಾವಾರು ಇನ್ಸೆಂಟೀವ್  

•             ರಫ್ತು ವಹಿವಾಟಿನ ಮೇಲೆ ಇನ್ಸೆಂಟೀವ್  

•             9 ಜನ ಸಂಶೋಧಕ ವಿದ್ಯಾರ್ಥಿಗಳ ದತ್ತು

•             ಸೋಶಿಯಲ್ ಮೀಡಿಯಾ ನಿರ್ವಹಣೆ. 

37.         ಯೋಜನಾವಾರು ದತ್ತು ಯೋಜನೆ

  ಕೇಂದ್ರ ಸರ್ಕಾರದ ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬರುವವರಿಗೆ, ಮಂಜೂರಾದರೇ ಮಾತ್ರ ಶೇ– ಇಂತಿಷ್ಟು ಸರ್ವೀಸ್ ಚಾರ್ಜು ಎಂದು ನಿಗಧಿ ಗೊಳಿಸಿ ಎಂ. ಓ.ಯು ಮಾಡುವುದು.

•             ಆಧ್ಯತೆಗೆ ತಕ್ಕಂತೆ ಯೋಜನೆಗೆ ದತ್ತು ಯೋಜನೆ ಜಾರಿ.

•             ಒಂದು ಬ್ಯಾಂಕ್ – ಒಂದು ಅಧ್ಯಯನ ಪೀಠ

•             ಒಂದು ವಿಶ್ವ ವಿದ್ಯಾನಿಲಯ – ಒಂದು ಅಧ್ಯಯನ ಪೀಠ

•             ಒಂದು ಕಾಲೇಜು – ಒಂದು ಅಧ್ಯಯನ ಪೀಠ

•             ಒಂದು ಸಹಕಾರ ಸಂಘ – ಒಂದು ಅಧ್ಯಯನ ಪೀಠ

•             ಒಂದು ಕುಟುಂಬ – ಒಂದು ಅಧ್ಯಯನ ಪೀಠ

•             ಒಬ್ಬ ವ್ಯಕ್ತಿ – ಒಂದು ಅಧ್ಯಯನ ಪೀಠ

•             ಒಂದು ಸಂಸ್ಥೆ/ಎಸ್.ಪಿ.ವಿ/ಫೆಡ್‍ರೇಷೆನ್ – ಒಂದು ಅಧ್ಯಯನ ಪೀಠ

•             ಒಂದು ಸ್ಟಾರ್ಟ್ ಅಪ್ – ಒಂದು ಅಧ್ಯಯನ ಪೀಠ

•             ಸಿ.ಎಸ್.ಆರ್ ಕಂಪನಿ– ಒಂದು ಅಧ್ಯಯನ ಪೀಠ

•             ಎನ್.ಆರ್.ಐ ಸಂಘಟನೆ – ಒಂದು ಅಧ್ಯಯನ ಪೀಠ

38.         ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದಿಂದ ಅಥವಾ ಇತರೆ ಮೂಲದಿಂದ 2047 ರವರೆಗೂ ನಿರಂತರವಾಗಿ ‘ಮಾನಿಟರಿಂಗ್’ ಮಾಡಬೇಕು.

ದುಡಿಮೆಯೊಂದಿಗೆ ಸಮಾಜಸೇವೆ ಮಾಡುವವರನ್ನು ಗುರತಿಸಬೇಕು.

•             ಸ್ಟಾಟ್ ಅಫ್ ಕಂಪನಿ.

•             ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದ ಪಿಪಿಪಿ ಯೋಜನೆ.

•             ದಾನಿಗಳು /ಆಸಕ್ತ ವ್ಯಕ್ತಿ, ಕುಟುಂಬ, ಸಂಸ್ಥೆ, ಕಂಪನಿ.

•             ಎನ್.ಆರ್.ಐ/ಎನ್.ಆರ್.ಕೆ/ಎನ್.ಆರ್.ವಿಲೇಜ್-ಬಡಾವಣೆ ಸಂಘಟನೆಗಳು.

•             ಎಸ್.ಹೆಚ್.ಜಿ. ಸಂಘಗಳ ಫೆಡೆರೇಷನ್.

•             ಸಿ.ಎಸ್.ಆರ್.ಫಂಡ್ ಕಂಪನಿಗಳು ಮತ್ತು ಹೂಡಿಕೆದಾರರು

39.         ಜನಜಾಗೃತಿ

•             ರಾಜ್ಯದ ಶಾಲಾ ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳು, ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಜನಜಾಗೃತಿ ಮೂಡಿಸುವುದು.

•             ಎಸ್.ಹೆಚ್.ಜಿ ಸಂಘಗಳಲ್ಲಿ  ಜನಜಾಗೃತಿ ಮೂಡಿಸುವುದು.

•             ಸರ್ವಧರ್ಮಗಳ, ಎಲ್ಲಾ ಜಾತಿ ಉಪಜಾತಿಗಳಿಗೆ ಜನಜಾಗೃತಿ ಮೂಡಿಸುವುದು.

•             ಸೂಕ್ತ ಸ್ಥಳಗಳ ಆಯ್ಕೆ ಮಾಡುವುದು, ಪ್ರವಾಸಿ ಸ್ಥಳಗಳ ಮಾಲೀಕತ್ವದ ಇಲಾಖೆ ಜೊತೆ ಸಮಾಲೋಚನೆ ನಡೆಸಿ, ದತ್ತು ಪಡೆಯಲು ಜನಜಾಗೃತಿ ಮೂಡಿಸುವುದು.

•             ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಅನುದಾನ ಮಂಜೂರು ಮಾಡಿಸಲು ಅವಕಾಶವಿರುವ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು.

•             ಸಿ.ಎಸ್.ಆರ್ ಫಂಡ್ ದೊರಕಿಸಲು ಜನಜಾಗೃತಿ ಮೂಡಿಸುವುದು.

•             ಶಾಸಕರ ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಪಡೆಯಲು. 

•             ಎನ್.ಆರ್.ಐ ಗಳಿಂದ, ಆವರವರ ಊರಿನ ಮತ್ತು ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು, ಅವರ ಊರಿನ ವಿದ್ಯಾರ್ಥಿಗಳಿಗೆ, ನೇರವಾಗಿ ಡಿಬಿಟಿ ಮೂಲಕ  ಆರ್ಥಿಕ ನೆರವು ದೊರಕಿಸಲು ಪಡೆಯಲು ಜನಜಾಗೃತಿ ಮೂಡಿಸುವುದು.

•             ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047 ಟೆಂಪ್ಲೇಟ್ ಸಿದ್ಧಪಡಿಸಲು ಪಡೆಯಲು ಜನಜಾಗೃತಿ ಮೂಡಿಸುವುದು.                                                  

40.         ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ಜೊತೆ ಉತ್ತಮ ಒಡನಾಟವಿಟ್ಟು ಕೊಂಡು, ಅವರಿಗೆ ಅಗತ್ಯವಿರುವ ಲೈವ್ ಡಾಟಾ ನೀಡುವ ಮೂಲಕ ಕಾರ್ಯನಿರ್ವಹಿಸಬೇಕು.

                                                      (ಕುಂದರನಹಳ್ಳಿ ರಮೇಶ್)