TUMAKURU:SHAKTHIPEETA FOUNDATION
ಮಹಾರಾಷ್ಟ್ರ ರಾಜ್ಯದ, ಕೊಲ್ಲಾಪುರ ಜಿಲ್ಲೆ, ಕರವೀರ ತಾಲ್ಲೂಕಿನ ಕನ್ನೇರಿ ಸಿದ್ಧಗಿರಿ ಮಹಾಸಂಸ್ಥಾನದ ಶ್ರೀಗಳು ಕೃಷಿಕರ ಸ್ವಾಮಿಜಿಗಳೆಂದರೆ ತಪ್ಪಾಗಲಾರದು, ನಾನಂತೂ ಇಂಥಹ ಮಹಾತ್ಕಾರ್ಯ ಮಾಡುತ್ತಿರುವವರನ್ನು ನೋಡಿಲ್ಲ, ಇವರನ್ನೂ ಸಹ ನೋಡಿಲ್ಲ. ಇವರಿಗೆ ಇರುವ ಕೃಷಿಜ್ಞಾನ ಯಾವ ವಿಜ್ಞಾನಿಗೂ ಕಡಿಮೆ ಇಲ್ಲ.
ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮತ್ತು ಅವರ ತಂಡ ಕರ್ನಾಟಕ ರಾಜ್ಯದಲ್ಲಿನ 108 ಕೃಷಿ ಆಶ್ರಮಗಳನ್ನು ಪಾದರಸದಂತೆ ನೀಗಾ ವಹಿಸುತ್ತಿದ್ದಾರೆ.
ಇದೇ ತಿಂಗಳು ಏಫ್ರಿಲ್ 10,11 ಮತ್ತು 12 ರಂದು ಮೂರು ದಿವಸಗಳ ಕಾಲ, ಶ್ರೀಗಳ ಆಶೀರ್ವಾದೊಂದಿಗೆ, ಅವರ ನೇತೃತ್ವದಲ್ಲಿಯೇ ‘108 ಕೃಷಿ ಆಶ್ರಮಗಳ ಕಾರ್ಯಾಗಾರ’ ನಡೆಯಲಿದೆ. ಕರ್ನಾಟಕ ರಾಜ್ಯದ ಮೊದಲನೇ ಹಂತದ ಎಲ್ಲಾ 108 ಕೃಷಿ ಆಶ್ರಮಗಳ ರೈತರು ಮತ್ತು 2 ನೇ ಹಂತದ 108 ಕೃಷಿ ಆಶ್ರಮಗಳನ್ನು ಆರಂಭಿಸಲು ಆಸಕ್ತಿ ಇರುವ ರೈತರು ಭಾಗವಹಿಸಲು ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮನವಿ ಮಾಡಿದ್ದಾರೆ.
ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಎಲ್ಲಾ ಉಚಿತ ಸೇವೆ, ತಂಗಲು ಪುರುಷರಿಗೆ ಮತ್ತು ಸ್ತ್ರಿಯರಿಗೆ ಪ್ರತ್ಯೇಕ ಡಾರ್ಮೆಟ್ರಿ, ಅನ್ನದಾನ, ಜ್ಞಾನದಾನ ನಡೆಯಲಿದೆ. ವಾಟ್ಸ್ ಅಫ್ ಗ್ರೂಪ್ ಸೇರ್ಪಡೆ ಮಾಡಲು ಮತ್ತು ಹೆಚ್ಚಿನ ವಿವರಗಳಿಗೆ ಶ್ರೀ ಮಾರುತಿ ರಾವ್ – 9945111097 ಸಂಪರ್ಕಿಸ ಬಹುದು.
ಹಲವಾರು ರೈತ ವಿಜ್ಞಾನಿಗಳಿಂದ, ಹತ್ತಾರು ವಿಚಾರಗಳ ಬಗ್ಗೆ 3 ದಿವಸಗಳ ಕಾಲ ಸಮಾಲೋಚನೆ ನಡೆಸಲಿದ್ದಾರೆ.ಕೇಂದ್ರ ಸರ್ಕಾರದ ನೀತಿ ಆಯೋಗದ ಕೃಷಿಕರ ವಿಭಾಗದ ಸಲಹೆಗಳು ಮತ್ತು ವಿಶ್ವದ, ದೇಶದ, ರಾಜ್ಯದ ಹಲವಾರು ಸಂಶೋಧಕರ ಅಭಿಪ್ರಾಯಗಳೊಂದಿಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ವರ್ಗದ ರೈತ ಮುಂಡರ ಸಲಹೆಗಳನ್ನು ಸಂಗ್ರಹಿಸಲು ರೂಪುರೇಷೆ ನಿರ್ಧರಿಸಲಾಗುವುದು ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿನ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಅಧ್ಯಕ್ಷರಾದ ಭಾರತ ರತ್ನ ಶ್ರೀ ಸಿ.ಎನ್.ಆರ್ ರಾವ್ ರವರು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋUದ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಪಾಟಿಲರವರು ಮತ್ತು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಆಶೋಕ ದಳವಾಯಿರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಅಲ್ಲಿನ ನಿರ್ಣಯಗಳನ್ನು ಪರಿಶೀಲಿಸಿ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಗೆ ಮತ್ತು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ‘ಕೃಷಿ @ 2047’ ಎಂಬ ವಿಶೇಷ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿ ನಡೆದ ಹಲವಾರು ವಿವಿಧ ರೀತಿಯ ಸಭೆಗಳಲ್ಲಿ ಸಮಾಲೋಚನೆ ನಡೆಸಲಾಗಿದೆ. ಸರ್ಕಾರದ ಹಂತದಲ್ಲಿಯೂ ಕಡತಗಳ ಅನುಸರಣೆ ಮಾಡಲಾಗುತ್ತಿದೆ.
ಆದ್ದರಿಂದ ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರವಾರು ರೈತರು, ಪ್ರಗತಿಪರ ರೈತರು, ಸಾವಯವ ಕೃಷಿಕರು, ಯುವ ಕೃಷಿಕರು, ಸಂಶೋಧಕರು, ರೂರಲ್ ಇನ್ನೋವೇಟರ್ಸ್, ಕೃಷಿಯಾಧಾರಿತ ಮೌಲ್ಯವರ್ಧಿತ ಉತ್ಪನ್ನಗಳ ರಫ್ತುದಾರರು, ಅಗ್ರಿಸ್ಟಾಟ್‍ಅಫ್ ಕನಸುಗಾರರು, ರೈತ ಸಂಘಟನೆಗಳ ಪಧಾಧಿಕಾರಿಗಳು ಭಾಗವಹಿಸಿ ‘ಕನ್ನೇರಿ ಸ್ವಾಮೀಜಿಗಳಿಂದ ಕೃಷಿ ಆಶ್ರಮ ದೀಕ್ಷೆ’ ಪಡೆಯಲು ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿಯವರ ಮತ್ತು ಮುಖ್ಯಮಂತ್ರಿಯವರ ಬಳಿ ನಿಯೋಗ ಹೋಗಲು, ಲೋಕಸಭಾ ಕ್ಷೇತ್ರವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಸಂಚಾಲಕರನ್ನು ನೇಮಿಸಲು ಉದ್ದೇಶಿರುವುದರಿಂದ, ಆಸಕ್ತರು ದಯವಿಟ್ಟು ಭಾಗವಹಿಸಿ,