3rd July 2025
Share

TUMAKURU:SHAKTHIPEETA FOUNDATION

ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಅಗ್ರಿ ಟೂರಿಸಂ ಬಗ್ಗೆ, ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ, ರಾಜ್ಯ ಮಟ್ಟದ ಕಾರ್ಯಾಗಾರವನ್ನು ರಾಜ್ಯ ಪ್ರವಾಸೋಧ್ಯಮ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರ  ನೇತೃತ್ವದಲ್ಲಿ,  ಆಯೋಜಿಸುವ ಸಂಬಂಧ ದಿನಾಂಕ: 06.07.2025 ರಂದು, ಬೆಂಗಳೂರಿನ ಮಲ್ಲೇಶ್ವರಂ ಸಾಂಸ್ಕøತಿಕ ಕೇಂದ್ರದಲ್ಲಿ ಸಂಜೆ 5.30 ರಿಂದ 9 ರವರೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಕಪ್ಪತ್ತಗುಡ್ಡ ಭಾಗದ ಕೃಷಿ ಆಶ್ರಮಗಳ ಪ್ರಮುಖರಾದ ರುದ್ರಣ್ಣನವರು ಮತ್ತು ದೇವರೆಡ್ಡಿರವರು ಕಾರ್ಯಕ್ರಮದ ಬಗ್ಗೆ ವಿವರಣೆ ನೀಡುÀವರು. ಆಸಕ್ತರು ಭಾಗವಹಿಸಬಹುದು.

ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ ಸಭೆಯಲ್ಲಿ, ತುಮಕೂರು ಜಿಲ್ಲೆಯ ಅಮ್ಮ,ನಘಟ್ಟದ ಮಹೇಶ್‍ರವರು, ವಿಷಯ ಮಂಡಿಸಿದ್ದರ ಹಿನ್ನಲೆಯಲ್ಲಿ ಸುಧೀರ್ಘವಾದ ಚರ್ಚೆ ನಡೆದಿತ್ತು. ರಾಜ್ಯ ಪ್ರವಾಸೋಧ್ಯಮ ಆಯುಕ್ತರ ಕಚೇರಿಯ ಅಧಿಕಾರಿಗಳೊಂದಿಗೆ, ತುಮಕೂರು ಪ್ರವಾಸೋಧ್ಯಮ ಅಧಿಕಾರಿಗಳೊಂದಿಗೆ, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ನಬಾರ್ಡ್ ಅಧಿಕಾರಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ತುಮಕೂರಿನಲ್ಲಿ ಸಭೆ ಅಯೋಜಿಸುವುದಾದರೆ ತುಮಕೂರಿನ ಆಕ್ಸಿಸ್ ಬ್ಯಾಂಕ್ ಸಹಕಾರ ನೀಡುವ ಭರವಸೆ ನೀಡಿದೆ.