24th July 2025
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿನ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯೊಂದಿಗೆ, ನಂಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿ,  ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆ ವ್ಯಾಪ್ತಿಯಲ್ಲೂ,  ನಾಲೇಡ್ಜ್ ಬ್ಯಾಂಕ್ @ 2047 ಸದಸ್ಯತ್ವ ಆಂದೋಲನ ಕೈಗೊಳ್ಳಲು, ದಿನಾಂಕ: 02.07.2025 ರಂದು ಎಂ.ಓ.ಯು ಮಾಡಿಕೊಳ್ಳಲಾಗಿದೆ.

ದಿನಾಂಕ:22.06.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಹೆ.ಚ್.ರಾಜಸಾಬ್ ರವರು, ಸದಸ್ಯರುಗಳಾದ  ಡಾ.ಹೆಚ್.ಹೊನ್ನೇಗೌಡರವರು, ಡಾ.ಹೆಚ್.ನಾಗನಗೌಡರವರು, ಡಾ.ಹೆಚ್.ಎಸ್.ನಾಗರಾಜ್ ರವರು, ಸಿಇಓ ಡಾ ಆನಂದ್‍ರವರು, ಸೈಂಟಿಫಿಕ್ ಆಫೀಸರ್ ಶ್ರೀನಿವಾಸ್‍ರವರು ಸೇರಿದಂತೆ ಇನ್ನೂ ಹಲವಾರು ಜನರು ಹಾಜರಿದ್ದರು.

ರಾಜ್ಯಮಟ್ಟದ ಕೃಷಿ ಆಶ್ರಮಗಳು ಹಾಗೂ ಈಗಾಗಲೇ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯೊಂದಿಗೆ ವಿವಿಧ ಉದ್ದೇಶಗಳಿಗಾಗಿ ಎಂ.ಓ.ಯು ಮಾಡಿಕೊಂಡಿರುವವರ ಸಭೆಯನ್ನು ಪ್ರತ್ಯೇಕವಾಗಿ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು.