18th July 2025
Share

TUMAKURU:SHAKTHIPEETA FOUNDATION

  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೇತೃತ್ವದಲ್ಲಿ, ರಾಜ್ಯದ ವಿಶ್ವ ವಿದ್ಯಾನಿಲಯ ಗಳ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳಲ್ಲಿ ಕೆಳಕಂಡ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು, 1947 ರಿಂದ ಇದೂವರೆಗೂ ಸಂಶೋಧನೆ ಮಾಡಿರುವವರನ್ನು ಗುರುತಿಸಿ, ಅವರನ್ನು ನಾಲೇಡ್ಜ್ ಬ್ಯಾಂಕ್ @2047 ನಲ್ಲಿ ಸೇರ್ಪಡೆ ಮಾಡಲು. ಸಂಶೋಧನೆ ಮ್ಯೂಸಿಯಂ ಸ್ಥಾಪಿಸಲು,  ಕೃಷಿ ಆಶ್ರಮಗಳ ಹರಿಕಾರರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಲಾಯಿತು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದ್ದ ಹಿನ್ನಲೆಯಲ್ಲಿ, ದಿನಾಂಕ:16.08.2025 ರಂದು ಬೆಂಗಳೂರಿನ ವನಲೋಕ ಫೌಂಡೇಷನ್ ನಲ್ಲಿ, ಮಧ್ಯಾಹ್ನ 3.30 ಕ್ಕೆ, ಕೃಷಿ ಆಶ್ರಮಗಳ ವಿಜ್ಞಾನಿಗಳ  ತುರ್ತು ಸಭೆ ನಡೆಯಿತು. ಈ ಸಭೆಯಲ್ಲಿ ಡಾ.ಬಿ.ಎಂ.ನಾಗಭೂಷಣ್‍ರವರು, ಡಾ.ಜಗನ್ನಾಥ್‍ರವರು, ಡಾ.ಸಂತೋóಷ್ ರವರು, ಡಾ. ರೂಪರವರು ಇದ್ದರು.

oplus_2

 ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ, ಪ್ರತಿಯೊಂದು ಊರು/ಬಡಾವಣೆಗಳ ಮಟ್ಟದಲ್ಲಿ, ವಯಸ್ಸಿನ ಮತ್ತು ವಿದ್ಯಾರ್ಹತೆಯ ಮಿತಿ ಇಲ್ಲದೆ,  ಭೂಮಿಯ ಮೇಲೆ ಹುಟ್ಟುವ ಕಳೆ-ಬೆಳೆಗಳ ಹಾಗೂ ಕೆಳಕಂಡ ವಿವಿಧ ವಿಷಯಗಳ ಪ್ರಬಂಧ ಬರೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಬಹುಮಾನ ಮತ್ತು ಪ್ರಶಸ್ತಿ ನೀಡಲು ಬೃಹತ್ ಆಂದೋಲನ ಕೈಗೊಳ್ಳಲು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವುದು.

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳಿಗೆ, ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು, ಹಕೀಮರ ಜೊತೆಗೆ ನಾಲೇಡ್ಜಬಲ್ ಪರ್ಸನ್ ಗಳನ್ನು ಸೇರ್ಪಡೆ ಮಾಡಲು ಅವಕಾಶವಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮಾರ್ಗದರ್ಶಿಯಲ್ಲಿರುವ, ಈ ಕೆಳಕಂq ಅಂಶಗಳ ಜ್ಞಾನಿಗಳನ್ನು ನಾಲೇಡ್ಜಬಲ್ ಪರ್ಸನ್ ವ್ಯಾಪ್ತಿಗೆ ತರುವ ಮೂಲಕ, ಅವರೆಲ್ಲರನ್ನು ಸದಸ್ಯರನ್ನಾಗಿ ಮಾಡಿ, ನಂಬರ್ ಒನ್ ಕರ್ನಾಟಕ @ 2047 ಗೆ ಶ್ರಮಿಸಲು ಆಂದೋಲನ ಕೈಗೊಳ್ಳಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿ, ನಿರಂತರವಾಗಿ 2047 ರ ವರೆಗೂ ಮಾನಿಟರಿಂಗ್ ಮಾಡಲು ಸರ್ಕಾರಗಳ ಗಮನ ಸೆಳೆಯಲು ಚರ್ಚಿಸಲಾಯಿತು.

1.            ಕೃಷಿ ವಿಜ್ಞಾನ

2.            ಪ್ರಾಣಿ ವಿಜ್ಞಾನ

3.            ಬಯೋಕೆಮಿಸ್ಟ್ರಿ

4.            ಬಯೋಫಿಸಿಕ್ಸ್

5.            ಬಯೋಟೆಕ್ನಾಲಜಿ

6.            ರಾಸಾಯನಿಕ ವಿಜ್ಞಾನ

7.            ಭೂ ವಿಜ್ಞಾನ

8.            ಎಂಜಿನಿಯರಿಂಗ್ ವಿಜ್ಞಾನ

9.            ಎಂಜಿನಿಯರಿಂಗ್ ತಂತ್ರಜ್ಞಾನ

10.         ಗಣಿತ ವಿಜ್ಞಾನ

11.         ವೈಧ್ಯಕೀಯ ವಿಧಿವಿಜ್ಞಾನ

12.         ಭೌತಿಕ ವಿಜ್ಞಾನ

13.         ಸಸ್ಯ ವಿಜ್ಞಾನ

14.         ವಿಜ್ಞಾನ ಮತ್ತು ಸೋಸೈಟಿ

15.         ಸಮಾಜ ವಿಜ್ಞಾನ

 ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮಾರ್ಗದರ್ಶಿ ಸೂತ್ರಕ್ಕೆ, ಕೆಳಕಂಡ ಅಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀಎನ್. ಎಸ್. ಬೋಸರಾಜ್ ರವರ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಲು ಚರ್ಚಿಸಲಾಯಿತು.

1.            ಪರಿಸರ ವಿಜ್ಞಾನ

2.            ಪಾರಂಪರಿಕ ವಿಜ್ಞಾನ

3.            ಇತಿಹಾಸ ವಿಜ್ಞಾನ

4.            ಅಭಿವೃದ್ಧಿ ವಿಜ್ಞಾನ

5.            ಪ್ರವಾಸೋಧ್ಯಮ ವಿಜ್ಞಾನ

6.            ಧರ್ಮ ವಿಜ್ಞಾನ

7.            ಆಯುಷ್ ವಿಜ್ಞಾನ

8.            ಸಾಮಾಜಿಕ ನ್ಯಾಯ ವಿಜ್ಞಾನ

9.            ಸಮಾನತೆ ವಿಜ್ಞಾನ

10.         ಸಾವಯವ ಕೃಷಿ ವಿಜ್ಞಾನ

  ಅಗ್ರಿ ಟೂರಿಸಂ ಮತ್ತು ಕೃಷಿ ವಿಜ್ಞಾನಿಗಳ ಅಂತರರಾಷ್ಟ್ರೀಯ ಸಮಾವೇಶ ನಡೆಸಲು ಚರ್ಚೆ ನಡೆಸಲಾಯಿತು. ಮುಂದಿನ ಸಭೆ ವೇಳೆಗೆ, ಅಂತಿಮ ರೂಪುರೇಷೆ ಸಿದ್ಧಪಡಿಸಲು ಚಿಂತನೆ ನಡೆಯಿತು.