TUMAKURU:SHAKTHIPEETA FOUNDATION
ಮೋಜು ಮಸ್ತಿ ಮಾಡುವ ಈ ಕಾಲದಲ್ಲಿ, ತುಮಕೂರು ಜಿಲ್ಲೆಯ ಶಿರಾ ತಾಲ್ಲೋಕಿನ, ಹೊನ್ನಗೊಂಡನಹಳ್ಳಿ ಶ್ರೀ ಲಕ್ಮಿಕಾಂತ್ ರವರು,(9844598705) ಶ್ರೀ ಸಾಗರ್ ರವರ ಧನ್ವಂತರಿ ಸಸ್ಯ ಕಾಶಿ ಕೃಷಿ ಆಶ್ರಮದಲ್ಲಿ, ಒಂದು ರಾತ್ರಿ ಒಂದು ವಿಶಿಷ್ಟವಾದ ಕಾರ್ಯಕ್ರಮ ನಡೆಸುವ ಮೂಲಕ ಕಳೆಯಲಾಯಿತು. ಕೆಳಕಂಡವರು ಇದ್ದರು

1. ಶ್ರೀ ಲಕ್ಮಿಕಾಂತ್ ರವರು,
2. ಶ್ರೀ ಸಾಗರ್ ರವರು
3. ಪಶ್ಚಿಮ ಘಟ್ಟದ ಶ್ರೀ ಎನ್.ಬಿ.ನಾಯಕ್ ರವರು.
4. ಶ್ರೀ ಸಿದ್ದಗಂಗಪ್ಪನವರು
5. ಶ್ರೀ ಗೋವಿಂದಪ್ಪನವರು
6. ಶ್ರೀ ಬಿದರಿಯವರು
7. ಶ್ರೀ ದರ್ಶನ್ ರವರು.
8. ಶ್ರೀ ಆಶೋಕ್ ರವರು
9. ಶ್ರೀ ಮಧುರವರು
10. ಶ್ರೀ ಬಸವರಾಜ್ ರವರು

ಸೇರಿದಂತೆ ಸುಮಾರು 10-15 ಜನರು ತೋಟವನ್ನು ಸುತ್ತಾಡಿದೆವು. ಸುಮಾರು ಜಾತೀಯ ಹಣ್ಣಗಳನ್ನು ನೇರವಾಗಿ ಮರದಿಂದ ಕಿತ್ತು ತಿಂದೆವು, ನೂರಾರು ಜಾತೀಯ ಗಿಡಗಳನ್ನು ಮಾತನಾಡಿಸಿದೆವು. 11 ನಾಯಿಗಳ ಪ್ರೀತಿ ಅನುಭವಿಸಿದೆವು.
ಸುಮಾರು 4 ಗಂಟೆಗಳ ಕಾಲ ಬಾಲ್ಯದಿಂದ ಆರಂಭಿಸಿ ಇಲ್ಲಿಯವರೆಗೂ ಅವರವರ ಜೀವನದ ಘಟನೆಗಳು, ಅನುಭವ ಹಂಚಿಕೊಂಡೆವು. ವಿಚಿತ್ರ ಘಟನೆಗಳಿಗೆ ಎಲ್ಲರೂ ನಕ್ಕು ನಕ್ಕು ಸುಸ್ತಾದೆವು.
ನೆಲದಲ್ಲಿ ಕುಳಿತು ಊಟ ಮಾಡಿದೆವು. ನೆಲದಲ್ಲಿಯೇ ಚಾಪೆ ಮೇಲೆ ಮಲಗಿದೆವು.ಬಾಲ್ಯದ ದಿನಗಳ ನನೆಪು ನಿಜಕ್ಕೂ ಅದ್ಭುತವಾಗಿತ್ತು.
ಬೆಂಗಳೂರು, ತುಮಕೂರು ಎಂದು ಶಿರಾದಲ್ಲಿ ಬಸ್ ಎಜೆಂಟಾಗಿ ಕೂಗುತ್ತಿದ್ದ ಶ್ರೀ ಲಕ್ಮಿಕಾಂತ್ ರವರು, ಇಂಜಿನಿಯರ್ ಆಗಿದ್ದು, ನಂತರ ಅವರ ಪುತ್ರ ಶ್ರೀ ಸಾಗರ್ ರವರು ಇಂಜಿನಿಯರ್ ಆಗಿದ್ದರೂ, ಅವರನ್ನು ಜೊತೆ ಮಾಡಿಕೊಂಡು, ಕೃಷಿಗೆ ಇಳಿಸಿರುವ ಇತಿಹಾಸವನ್ನು ಕೇಳಬೇಕು, ನಿರ್ಮಾಣ ಮಾಡುತ್ತಿರುವ ಧನ್ವಂತರಿ ಸಸ್ಯ ಕಾಶಿ ಕೃಷಿ ಆಶ್ರಮವನ್ನು ಒಮ್ಮೆ ನೋಡಲೇ ಬೇಕು.
ಇದೊಂದು ಬೃಹತ್ ಉದ್ಯಮವಾಗಿ ಬೆಳೆಯಲಿದೆ. ಕೃಷಿ ಕನಸು ಕಾಣುವ ವಿದ್ಯಾರ್ಥಿಗಳು ಒಮ್ಮೆ ಭೇಟಿ ಕೊಟ್ಟರೆ ಒಳ್ಳೆಯದು.