18th July 2025
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ  ಶಾಲಿನಿ ರಜನೀಶ್ ರವರು, ಬೆಂಗಳೂರಿನಲ್ಲಿ ನಡೆದ ನಬಾರ್ಡ್ ನ 44 ನೇ ವರ್ಷದ ಫೌಂಡೇಷನ್ ಡೆ ದಿವಸ ‘ರೈತ- ರೈತೋಧ್ಯಮಿ’ ಯಾಗಬೇಕು  ಎಂದು ಪ್ರತಿ ಪಾದಿಸಿದರು.

 ರೈತರ, ತಮ್ಮ ಪ್ರತಿಯೊಂದು ಬೆಳೆಯನ್ನು, ಮೌಲ್ಯ ವರ್ಧಿತ ಉತ್ಪನ್ನಗಳನ್ನು ಮಾಡಿಯೇ ಮಾರಾಟ ಮಾಡ ಬೇಕು. ಪ್ರಗತಿ ಪರ ರೈತರು ಈಗಾಗಲೇ ಸುಮಾರು 35000 ಮೌಲ್ಯ ವರ್ಧಿತ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಉಳಿದ ರೈತರ  ಭವಿಷ್ಯ ರೂಪಿಸಲು ಸಂಘಸಂಸ್ಥೆಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಬ್ಯಾಂಕ್ ಅಡಳಿತ ಮಂಡಳಿಗೆ ಸಲಹೆ ನೀಡಿದರು. ನನ್ನ ಉಳಿದ 2 ವರ್ಷದ ಅವಧಿಯ ಪ್ರಮುಖ ಗುರಿಗಳಲ್ಲಿ ಇದು ಒಂದೂ, ಎಂದು ಭಾವನಾತ್ಮಕವಾಗಿ ಹೇಳಿದರು.

ನಬಾರ್ಡ್  ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು, ಆರ್.ಬಿ.ಐ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಗುಪ್ತರವರು,ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಭವೆಂದ್ರಕುಮಾರ್ ರವರು ಸೇರಿದಂತೆ ಬಹುತೇಕ ಬ್ಯಾಂಕ್ ಅಧಿಕಾರಿಗಳು ಇದ್ದರು.

1008 ಕೃಷಿ ಆಶ್ರಮಗಳು ಅಗ್ರಿಟೂರಿಸಂ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಡಿ, ಅನುದಾನ ಪಡೆಯುವ ಮೂಲP, ರಾಜ್ಯದ್ಯಾಂತ 344 ಕೃಷಿ ಆಶ್ರಮಗಳನ್ನು ಬಹುಪಯೋಗಿ ಪ್ರವಾಸಿ ಕೇಂದ್ರಗಳಾಗಿ ಸ್ಥಾಪಿಸಿ, ಅರ್ಹರಿಗೆ ಪ್ರಾತ್ಯಾಕ್ಷಿಕೆಗಳೊಂದಿಗೆ ತರಬೇತಿ ನೀಡಲು ಚಿಂತನೆ ಆರಂಭಿಸಿದ್ದವು.

ಈ ಎರಡು ಘಟನೆಗಳ ಹಿನ್ನಲೆಯಲ್ಲಿ ಬ್ಯಾಂಕಿಗೆ ಮನವಿ ಸಲ್ಲಿಸಲಾಗಿದೆ.

ಆಸಕ್ತರು ಸೂಕ್ತ ಸಲಹೆ ನೀಡಲು ಮುಕ್ತ ಆಹ್ವಾನ.