TUMAKURU:SHAKTHIPEETA FOUNDATION
ಇದೂವರೆಗೂ ಕೃಷಿ ಆಶ್ರಮಗಳ ಸಂಘಟನೆ ನೊಂದಣಿಯಾಗಿಲ್ಲ, ಈಗ ಕಂಪನಿ ಆಕ್ಟ್ ಅಥವಾ ಸೋಸೈಟಿ ಆಕ್ಟ್ ಅಥವಾ ಟ್ರಸ್ಟ್ ಆಕ್ಟ್ ಅಥವಾ ಸಹಕಾರ ತತ್ವದಡಿ ನೊಂದಣಿಗೆ ಚರ್ಚೆ ಆರಂಭವಾಗಿದೆ. ಕೃಷಿ ಆಶ್ರಮಗಳ ಹರಿಕಾರರಾದ ಡಾ.ನಾಗಭೂಷಣ್ ರವರು ಕನ್ನೇರಿ ಶ್ರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ, ಆರಂಭದಿ0ದ ಶ್ರಮಿಸಿರುವ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕೃಷಿ ಆಶ್ರಮಗಳ ಸಭೆ ಕರೆದು ಅಂತಿಮ ರೂಪು ರೇಷೆ ಬಗ್ಗೆ ಚರ್ಚಿಸಲು ಸಿದ್ಧತೆ ನಡೆಸುತ್ತಿದ್ದಾರೆ.
‘ಕೃಷಿ ಆಶ್ರಮ’ಗಳ ನೇತಾರರನ್ನು ‘ರೈತ ವಿಜ್ಞಾನಿ’ ಗಳೆಂದು ಸರ್ಕಾರ ಗುರುತಿಸಿ, ಗುರುತಿನ ಪತ್ರ ನೀಡುವ ಮೂಲಕ ಬೆನ್ನು ತಟ್ಟುವಂತಹ ಕೆಲಸ ಮಾಡುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಗೂಗಲ್ ಮುಖಾಂತರ ನೊಂದಣೆ ಮಾಡಿಕೊಂಡಿರುವ ಪ್ರತಿಯೊಂದು ಕೃಷಿ ಆಶ್ರಮಗಳು ತಮ್ಮ ಸಲಹೆ, ಅಭಿಪ್ರಾಯ, ಮಾರ್ಗದರ್ಶನ ನೀಡುವುದು ಸೂಕ್ತವಾಗಿದೆ.
ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳ ಗುರಿ, 2047 ರ ವೇಳೆಗೆ ಈ ಕೆಳಕಂಡ ಮಟ್ಟದಲ್ಲಿ ಕೃಷಿ ಆಶ್ರಮಗಳನ್ನು ಸ್ಥಾಪಿಸಿ, ಸಾವಯವ ಕೃಷಿ, ಅಗ್ರಿಟೂರಿಸಂ, ರೈತೋಧ್ಯಮಿ ಜೊತೆಗೆ, ಆಯಾ ವ್ಯಾಪ್ತಿಯ ಅಭಿವೃದ್ಧಿಯ ಸಂಶೋಧನೆಗೂ, ಕೃಷಿ ಆಶ್ರಮಗಳು ಸಂಚಾಲಕತ್ವ ವಹಿಸುವಂತಾಗಬೇಕು. ‘ನಂಬರ್ ಒನ್ ಕರ್ನಾಟಕ @ 2047’ ಜನಜಾಗೃತಿಗೆ, ‘80% ಇರುವ ದೇಶದ ಬೆನ್ನುಲೆಬು ಆಗಿರುವ ರೈತರೇ ನಾಯಕತ್ವ’ ವಹಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಂತದಲ್ಲಿ ಸಮಾಲೋಚನೆ ಆರಂಭವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
1. ಗ್ರಾಮ ಮಟ್ಟದ ಕೃಷಿ ಆಶ್ರಮ
2. ನಗರ ಪ್ರದೇಶಗಳಲ್ಲಿ ಬಡಾವಣೆ ಮಟ್ಟದ ಕೃಷಿ ಆಶ್ರಮ
3. ಗ್ರಾಮ ಪಂಚಾಯಿತಿ ಮಟ್ಟದ ಕೃಷಿ ಆಶ್ರಮ
4. ಪಟ್ಟಣ ಪಂಚಾಯಿತಿ ಮಟ್ಟದ ಕೃಷಿ ಆಶ್ರಮ
5. ಪುರಸಭೆ ಮಟ್ಟದ ಕೃಷಿ ಆಶ್ರಮ
6. ನಗರಸಭೆ ಮಟ್ಟದ ಕೃಷಿ ಆಶ್ರಮ
7. ಕಾರ್ಪೋರೇಷನ್ ಮಟ್ಟದ ಕೃಷಿ ಆಶ್ರಮ
8. ಹೋಬಳಿ ಮಟ್ಟದ ಕೃಷಿ ಆಶ್ರಮ
9. ತಾಲ್ಲೋಕು ಮಟ್ಟದ ಕೃಷಿ ಆಶ್ರಮ
10. ಜಿಲ್ಲಾ ಮಟ್ಟದ ಕೃಷಿ ಆಶ್ರಮ
11. ರಾಜ್ಯ ಮಟ್ಟದ ಕೃಷಿ ಆಶ್ರಮ
12. ಭಾರತ ದೇಶದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಟ್ಟದ ಕೃಷಿ ಆಶ್ರಮ
13. ಪ್ರಪಂಚದ ದೇಶಗಳ ಮಟ್ಟದ ಕೃಷಿ ಆಶ್ರಮ
14. ಅತಳ, ವಿತಳ, ಪಾತಾಳ ಸೇರಿದಂತೆ 14 ಲೋಕಗಳ ಮಟ್ಟದ ಕೃಷಿ ಆಶ್ರಮ ?
15. ನವಗ್ರಹಗಳ ಮಟ್ಟದ ಕೃಷಿ ಆಶ್ರಮ ?
16. ವಿಧಾನಸಭೆ ಮಟ್ಟದ ಕೃಷಿ ಆಶ್ರಮ
17. ವಿಧಾನ ಪರಿಷತ್ ಮಟ್ಟದ ಕೃಷಿ ಆಶ್ರಮ
18. ಲೋಕಸಭಾ ಮಟ್ಟದ ಕೃಷಿ ಆಶ್ರಮ
19. ರಾಜ್ಯಸಭಾ ಮಟ್ಟದ ಕೃಷಿ ಆಶ್ರಮ
20. ದೆಹಲಿ ವಿಶೇಷ ಪ್ರತಿನಿಧಿ ಮಟ್ಟದ ಕೃಷಿ ಆಶ್ರಮ
21. ಕರ್ನಾಟಕ ರಾಜ್ಯದಲ್ಲಿ ವಾಸವಿರುವ ಎಲ್ಲಾ ಧರ್ಮ, ಜಾತಿ, ಉಪಜಾತಿವಾರು ಕೃಷಿ ಆಶ್ರಮ.