TUMAKURU:SHAKTHIPEETA FOUNDATION
ಕೃಷಿ ಆಶ್ರಮಗಳ ನಿಯೋಗದೊಂದಿಗೆ ಸಮಾಲೋಚನೆ ನಡೆಸಲು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್. ಎಸ್. ಬೋಸರಾಜ್ ರವರು ಒಪ್ಪಿಗೆ ಸೂಚಿಸಿದ್ದಾರೆ. ದಿನಾಂಕ:22.07.2025 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಕೆಳಕಂಡ 5 ಅಂಶಗಳ ಬಗ್ಗೆ ಪಿಪಿಟಿ ಸಿದ್ಧಪಡಿಸಿ, ಸಚಿವರು ನಿಗಧಿಪಡಿಸಿದ ದಿನದಂದು ಪ್ರದರ್ಶನ ಮಾಡಲು ಕೃಷಿ ಆಶ್ರಮಗಳ ಪರಿಣಿತರು ಮುಂದಾಗಿದ್ದಾರೆ. ಸಚಿವರನ್ನು ಭೇಟಿಯಾಗುವ ಮುನ್ನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧಿಕಾರಿಗಳು ಹಾಗೂ ಅಧ್ಯಕ್ಷರೊಂದಿಗೆ ನಿಯಾಮುನುಸಾರ ಪ್ರಸ್ತಾವನೆಗಳ ಬಗ್ಗೆ ಸಮಾಲೋಚನೆ ನಡೆಸುವುದು ಸೂಕ್ತವಾಗಿದೆ.
ಕೃಷಿ ಆಶ್ರಮಗಳು ಮತ್ತು ಗ್ರಾಸ್ ರೂಟ್ ಲೆವೆಲ್ ಇನ್ನೋವೇಟರ್ಸ್ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂಪರ್ಕ ಬೆಳೆಯಲು ಇದು ಪ್ರಥಮ ಮೆಟ್ಟಿಲಾಗಲಿದೆ.
ಆಸಕ್ತರು ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರನ್ನು ಸಂಪರ್ಕಿಸಿ ತಮ್ಮ ಅಭಿಪ್ರಾಯಗಳ ಬಗ್ಗೆ ಚರ್ಚಿಸ ಬಹುದಾಗಿದೆ.
ಡಾ.ಬಿ.ಎಂ.ನಾಗಭೂಷಣ್‍ರವರು, ಡಾ.ಜಗನ್ನಾಥ್‍ರವರು, ಡಾ.ಸಂತೋóಷ್‍ರವರು, ಡಾ. ರೂಪರವರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಸಚಿವರ ಬಳಿ ನಿಯೋಗ ಹೋಗಲು ನಿರ್ಣಯಕೈಗೊಳ್ಳಲಾಗಿತ್ತು.

ಕ್ರಮಾಂಕ:ವಿತ/1/25 ದಿನಾಂಕ:19.07.2025
ಗೆ.
ಶ್ರೀ ಎನ್. ಎಸ್. ಬೋಸರಾಜ್ ರವರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು.
ವಿಕಾಸ ಸೌಧ, ಬೆಂಗಳೂರು.
ಮಾನ್ಯರೇ
ವಿಷಯ: ವಿಜ್ಞಾನ ಮತ್ತು ತಂತ್ರಜ್ಞಾನದ ಯೋಜನೆಗಳ ಬಗ್ಗೆ ಚರ್ಚಿಸಲು ಕೃಷಿ ಆಶ್ರಮಗಳ ನಿಯೋಗಕ್ಕೆ ಸಮಯ ನೀಡುವ ಬಗ್ಗೆ.
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ, ಪ್ರತಿಯೊಂದು ಗ್ರಾಮ/ಬಡಾವಣೆಗಳ ಮಟ್ಟದಲ್ಲಿ, ವಯಸ್ಸಿನ ಮತ್ತು ವಿದ್ಯಾರ್ಹತೆಯ ಮಿತಿ ಇಲ್ಲದೆ, ಪ್ರತಿಭೆಗಳನ್ನು ಗುರುತಿಸಿ, ಬಹುಮಾನ ಮತ್ತು ಪ್ರಶಸ್ತಿ ನೀಡಲು ಬೃಹತ್ ಆಂದೋಲನ ಕೈಗೊಳ್ಳಲು, ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳು ಮುಂದೆ ಬಂದಿವೆ.
‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ’ ಯ ನೇತೃತ್ವದಲ್ಲಿ, ರಾಜ್ಯದ ವಿಶ್ವ ವಿದ್ಯಾನಿಲಯ ಗಳ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳಲ್ಲಿ ಕೆಳಕಂಡ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು, 1947 ರಿಂದ ಇದೂವರೆಗೂ ಸಂಶೋಧನೆ ಮಾಡಿರುವವರನ್ನು ಗುರುತಿಸಿ, ಅವರನ್ನು ನಾಲೇಡ್ಜ್ ಬ್ಯಾಂಕ್ @2047 ನಲ್ಲಿ ಸೇರ್ಪಡೆ ಮಾಡಲು. ಸಂಶೋಧನೆ ಮ್ಯೂಸಿಯಂ ಸ್ಥಾಪಿಸಲು, ಕೃಷಿ ಆಶ್ರಮಗಳು ಆಲೋಚನೆ ನಡೆಸುತ್ತಿವೆ.
1. ಭೂಮಿಯ ಮೇಲೆ ಹುಟ್ಟುವ ಕಳೆ-ಬೆಳೆಗಳ ಹಾಗೂ ಕೆಳಕಂಡ ವಿವಿಧ ವಿಷಯಗಳ ಪ್ರಬಂಧ ಬರೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಬಹುಮಾನ ಮತ್ತು ಪ್ರಶಸ್ತಿ ನೀಡಲು ಬೃಹತ್ ಆಂದೋಲನ ಕೈಗೊಳ್ಳುವ ಬಗ್ಗೆ.
2. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳಿಗೆ, ಪಾರಂಪರಿಕ ವೈಧ್ಯರು, ನಾಟಿ ವೈಧ್ಯರು, ಹಕೀಮರ ಜೊತೆಗೆ ನಾಲೇಡ್ಜಬಲ್ ಪರ್ಸನ್‍ಗಳನ್ನು ಸೇರ್ಪಡೆ ಮಾಡುವ ಬಗ್ಗೆ.
3. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮಾರ್ಗದರ್ಶಿಯಲ್ಲಿರುವ, ಈ ಕೆಳಕಂq ಅಂಶಗಳ ಜ್ಞಾನಿಗಳನ್ನು ನಾಲೇಡ್ಜಬಲ್ ಪರ್ಸನ್ ವ್ಯಾಪ್ತಿಗೆ ತರುವ ಮೂಲಕ, ಅವರೆಲ್ಲರನ್ನೂ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳಿಗೆ ಸದಸ್ಯರನ್ನಾಗಿ ಮಾಡಿ, ನಂಬರ್ ಒನ್ ಕರ್ನಾಟಕ @ 2047 ಗೆ ಶ್ರಮಿಸಲು ಆಂದೋಲನ ಕೈಗೊಳ್ಳಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಿ, ನಿರಂತರವಾಗಿ 2047 ರವರೆಗೂ ಮಾನಿಟರಿಂಗ್ ಮಾಡುವ ಬಗ್ಗೆ.
1. ಕೃಷಿ ವಿಜ್ಞಾನ
2. ಪ್ರಾಣಿ ವಿಜ್ಞಾನ
3. ಬಯೋಕೆಮಿಸ್ಟ್ರಿ
4. ಬಯೋಫಿಸಿಕ್ಸ್
5. ಬಯೋಟೆಕ್ನಾಲಜಿ
6. ರಾಸಾಯನಿಕ ವಿಜ್ಞಾನ
7. ಭೂ ವಿಜ್ಞಾನ
8. ಎಂಜಿನಿಯರಿಂಗ್ ವಿಜ್ಞಾನ
9. ಎಂಜಿನಿಯರಿಂಗ್ ತಂತ್ರಜ್ಞಾನ
10. ಗಣಿತ ವಿಜ್ಞಾನ
11. ವೈಧ್ಯಕೀಯ ವಿಧಿವಿಜ್ಞಾನ
12. ಭೌತಿಕ ವಿಜ್ಞಾನ
13. ಸಸ್ಯ ವಿಜ್ಞಾನ
14. ವಿಜ್ಞಾನ ಮತ್ತು ಸೋಸೈಟಿ
15. ಸಮಾಜ ವಿಜ್ಞಾನ
4. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮಾರ್ಗದರ್ಶಿ ಸೂತ್ರಕ್ಕೆ, ಕೆಳಕಂಡ ಅಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡುವ ಬಗ್ಗೆ.
1. ಪರಿಸರ ವಿಜ್ಞಾನ
2. ಪಾರಂಪರಿಕ ವಿಜ್ಞಾನ
3. ಇತಿಹಾಸ ವಿಜ್ಞಾನ
4. ಅಭಿವೃದ್ಧಿ ವಿಜ್ಞಾನ
5. ಪ್ರವಾಸೋಧ್ಯಮ ವಿಜ್ಞಾನ
6. ಧರ್ಮ ವಿಜ್ಞಾನ
7. ಆಯುಷ್ ವಿಜ್ಞಾನ
8. ಸಾಮಾಜಿಕ ನ್ಯಾಯ ವಿಜ್ಞಾನ
9. ಸಮಾನತೆ ವಿಜ್ಞಾನ
10. ಸಾವಯವ ಕೃಷಿ ವಿಜ್ಞಾನ
5. ಅಗ್ರಿ ಟೂರಿಸಂ ಮತ್ತು ಕೃಷಿ ವಿಜ್ಞಾನಿಗಳ ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ.
ಈ ಹಿನ್ನಲೆಯಲ್ಲಿ ಮೇಲ್ಕಂಡ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲು, ತಮಗೆ ಸೂಕ್ತವಾದ ದಿನಾಂಕ ಮತ್ತು ಸಮಯ ನಿಗಧಿಗೊಳಿಸಲು ಈ ಮೂಲಕ ಕೋರಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)