23rd August 2025
Share

TUMAKURU:SHAKTHI PEETA FOUNDATION

  ಕರ್ನಾಟಕ ರಾಜ್ಯ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪಿಸುವ ಮೂಲಕ, ‘ಮಾನವೀಯತೆ’ ಯನ್ನು ತಳಪಾಯ ಮಾಡಿಕೊಂಡು, ವಿಜ್ಞಾನ, ತಂತ್ರಜ್ಞಾನ, ಮೂಡನಂಬಿಕೆ/ಮೌಡ್ಯ, ಇತಿಹಾಸ, ಪುರಾಣ, ಧರ್ಮ, ಜಾತಿ/ಉಪಜಾತಿ, ನಂಬಿಕೆÀ, ಅಭಿವೃದ್ಧಿ ಸಂಶೋಧನೆ’ಗಳ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ, 2047 ರೊಳಗೆ ನಂಬರ್ ಒನ್ ಕರ್ನಾಟಕ ರಾಜ್ಯವಾಗಿ ಮಾಡುವ ಪರಿಕಲ್ಪನೆ ನಮ್ಮದಾಗಿದೆ.

 ರಾಜ್ಯ ಸರ್ಕಾರದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಕಡತವನ್ನು ಅನುಸರಣೆ ಮಾಡಲಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಶೀಘ್ರವಾಗಿ ಪಲಿತಾಂಶ ದೊರೆಯುವ ಭರವಸೆ ಇದೆ.

 ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳು, ವಿಷಮುಕ್ತ  ಪಂಚಭೂತಗಳ ಗುರಿಯೊಂದಿಗೆ, ನಂಬರ್ ಒನ್ ಕರ್ನಾಟಕ @ 2047 ನ ‘ಶಿಲ್ಪಿ’ಗಳ ರೀತಿ ಕಾರ್ಯನಿರ್ವಹಿಸುವ ಗುರಿಯೂ ನಮ್ಮದಾಗಿದೆ.

ಹೌದು ಪ್ರತಿಯೊಂದು ಕೃಷಿ ಆಶ್ರಮಗಳ ಜ್ಞಾನಿಗಳು, ವಿಶ್ವ ವಿದ್ಯಾನಿಲಯ, ಶಾಲಾ ಕಾಲೇಜುಗಳಲ್ಲಿ, ತಿಂಗಳಿಗೆ 4 ರಂತೆ, ವಾರ್ಷಿಕ 48 ಉಪನ್ಯಾಸ ಮಾಡುವ ಜೊತೆಗೆ, ತಮ್ಮ ತಮ್ಮ ಕೃಷಿ ಆಶ್ರಮಗಳಲ್ಲಿ, ವಾರ್ಷಿಕವಾಗಿ ಕನಿಷ್ಠ 365 ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ‘ಜ್ಞಾನ’ ಹಂಚುವ ಕೆಲಸ ಮಾಡುವ ಆಲೋಚನೆಗಳು ಕೃಷಿ ಆಶ್ರಮಗಳ ಜ್ಞಾನಿಗಳ ಅನಿಸಿಕೆಯಾಗಿದೆ.

  ಈ ಉಪನ್ಯಾಸಗಳಲ್ಲಿ, ಪ್ರತಿಯೊಂದು ಅಂಶಗಳ ನಾಲೇಡ್ಜ್‍ಬಲ್ ಪರ್ಸನ್/ಗ್ರಾಸ್ ರೂಟ್ ಲೆವೆಲ್ ಇನ್ನೋವೇಟರ್ಸ್ ಗಳನ್ನು ಹುಡುಕಿ, ನಾಲೇಡ್ಜ್ ಬ್ಯಾಂಕ್ @ 2047’ ನಲ್ಲಿ ಹಾಗೂ ಎಲ್ಲಾ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ಗಳಲ್ಲಿ ಸೇರ್ಪಡೆ ಮಾಡಿ, ನಿರಂತರವಾಗಿ ಮಾನಿಟರ್’ ಮಾಡುವ ಕೆಲಸವೂ ಆಗಬೇಕಿದೆ.

1947 ರಿಂದ ಇದೂವರೆಗೂ, ಪ್ರತಿಯೊಂದು ವಿಚಾರಗಳ ಮೇಲೆ ಮಾಡಿರುವ ಸಂಶೋಧÀನೆಗಳು, ಪ್ರಕಟಣೆಗಳು, ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿ(ವಿಡಿಯೋ ರೆಕಾರ್ಡಿಂಗ್) ಮೂಲಕ, ಜ್ಞಾನಿಗಳ ಮ್ಯೂಸಿಯಂ’ ಮಾಡುವ ಮೂಲಕ, ರಾಜ್ಯದ ಪ್ರತಿಯೊಬ್ಬ  ವಿದ್ಯಾರ್ಥಿಗೂ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿಗಳು ಒಂದೇ ಕಡೆ ಲಭ್ಯವಾಗಬೇಕು.

ವಿದ್ಯಾರ್ಥಿಗಳು ಎಂದರೆ, ಶಾಲಾ ಕಾಲೇಜುಗಳಲ್ಲಿ ಓದುವವರು ಮಾತ್ರವಲ್ಲ, ಇನ್ನೂ ಏನಾದರೂ ಹೊಸದನ್ನು ಮಾಡಬೇಕು ಎಂಬ ಹಂಬಲ ಇರುವ, ಶತಾಯುಷಿಗಳಾದರೂ ವಿದ್ಯಾರ್ಥಿಗಳೇ, ಇಂತಹವರ ಹುಡುಕಾಟವೂ ಕೃಷಿ ಆಶ್ರಮಗಳ ಹೊಣೆಗಾರಿಕೆ ಆಗಬೇಕು.

  ಪ್ರಪಂಚದ ಎಲ್ಲಾ ದೇಶಗಳ, ಭಾರತ ದೇಶದ ಎಲ್ಲಾ ರಾಜ್ಯಗಳ, ಕರ್ನಾಟಕ ರಾಜ್ಯದ ಎಲ್ಲಾ ಗ್ರಾಮ/ಬಡಾವಣೆಗಳ ಆಸಕ್ತ ಜನ, ನೆಮ್ಮದಿಗಾಗಿ, ಒಳ್ಳೆಯ ಆಹಾರಕ್ಕಾಗಿ, ಉತ್ತಮ ಜ್ಞಾನಾರ್ಜನೆಗಾಗಿ ಕೃಷಿ ಆಶ್ರಮಗಳಿಗೆ, ಖುಷಿಯಿಂದ ಬರುವಂತಾಗಬೇಕು. ಇದರಿಂದ ಕೃಷಿ ಆಶ್ರಮಗಳ ಆದಾಯವೂ ವೃದ್ಧಿಯಾಗಬೇಕು. ವಿಶ್ವಕ್ಕೆ ಮಾದರಿಯೂ ಆಗಬೇಕು.

ಇದು ಶಕ್ತಿಪೀಠ ಕ್ಯಾಂಪಸ್ ಗುರಿಯಾಗಿದೆ. ಈ ಬಹುಪಯೋಗಿ ಕ್ಯಾಂಪಸ್ ನಿರ್ಮಾಣ, ಕೃಷಿ ಆಶ್ರಮಗಳ ಮಾರ್ಗದರ್ಶನದಲ್ಲಿ, ಒಬ್ಬೊಬ್ಬ ಪರಿಣಿತರ ಒಂದೊಂದು ಬೆಸ್ಟ್ ಪ್ರಾಕ್ಟೀಸಸ್’ ಯೋಜನೆಯ ಕಣಜವಾಗಬೇಕು ಎಂಬ ಆಸೆ ನನ್ನದಾಗಿದೆ.

ದಿನಾಂಕ:01.08.2025 ರಂದು  ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆಯುವ ಸಭೆಗೆ ಭಾಗವಹಿಸಿ, ತಮ್ಮ ತಮ್ಮ ಕೃಷಿ ಆಶ್ರಮಗಳಲ್ಲಿ, ಒಂದೊಂದು ಬೆಳೆಯ ಮ್ಯೂಸಿಯಂ ಸ್ಥಾಪಿಸುವ ಗಿಡ/ಬೆಳೆಗಳನ್ನು ಹಾಕುವ ಮೂಲಕ, ಚಾಲನೆ ನೀಡಲು ಮನವಿ ಮಾಡಲಾಗಿದೆ. ಸಭೆಗೆ ಬರುವವರು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು. ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರೊಂದಿಗೆ ಚರ್ಚೆ ಮಾಡಿ ಸಭೆಯ ರೂಪುರೇಷೆಗಳನ್ನು ಪ್ರಕಟಿಸಲಾಗುವುದು.

ಕರ್ನಾಟಕ ರಾಜ್ಯದ 31 ಜಿಲ್ಲೆಗಳಿಗೂ, ಭಾರತ ದೇಶದ 36 ರಾಜ್ಯಗಳಿಗೂ ಪ್ರತ್ಯೇಕವಾಗಿ ವಿಭಾಗಗಳನ್ನು ಮಾಡಲಾಗಿದೆ. ಮಳೆಯ ಅಡಚಣೆಯಿಂದ 1000 ಪ್ರಭೇಧಗಳನ್ನು ಹಾಕುವ ಗುಂಡಿಗಳನ್ನು ತೆಗೆಸುವ ಕೆಲಸ ಪೂರ್ಣವಾಗಿಲ್ಲ, ಈಗ ಇರುವ 400 ಪ್ರಭೇಧಗಳ ಜೊತೆಗೆ ಇನ್ನೂ 600 ಕ್ಕೂ ಹೆಚ್ಚು ಪ್ರಭೇಧಗಳ ಗಿಡ ಹಾಕಲು, 1000 ಗುಂಡಿಗಳನ್ನು ತೆಗೆಸಲಾಗಿದೆ, ಗುಂಡಿಗಳಿಗೆ, ಹಸಿ ಬೇವಿನ/ಹೊಂಗೆಯ ಸೊಪ್ಪು, ತೆಂಗಿನ ಮರದ ತ್ಯಾಜ್ಯಗಳನ್ನು ತುಂಬಲಾಗಿದೆ.

ಮಣ್ಣು ಮತ್ತು ಗೊಬ್ಬರ ಹಾಕಲು ಮಳೆ ಅಡಚಣೆಯಾಗಿದೆ. ಗಿಡಗಳನ್ನು ಸಂಗ್ರಹ ಮಾಡುವ ಕೆಲಸ ಇನ್ನೂ ಆರಂಭವಾಗಿಲ್ಲ. ಆದರೂ ನರ್ಸರಿಗಳಲ್ಲಿ ಗಿಡಗಳನ್ನು ಮೀಸಲಿಡಲು ಅಗತ್ಯ ಕ್ರಮಗಳನ್ನು ಮಾಡಲಾಗಿದೆ.

ಯಾವ ಪ್ರಭೇಧಗಳ ಗಿಡಗಳನ್ನು, ಯಾವ ದಿಕ್ಕಿನಲ್ಲಿ ಹಾಕಬೇಕು, ಯಾವ ಧರ್ಮದವರು/ಜಾತಿ/ಉಪಜಾತಿಯವರು ಯಾವ ಜಾತಿ ಗಿಡ ಪೂಜಿಸುತ್ತಾರೆ, ದೇವರ ವನ, ದೇವರ ಬನ, ಧಾರ್ಮಿಕ ಗಿಡಗಳು ಯಾವು ಎಂಬ ಬಗ್ಗೆಯೂ  ಪಕ್ಕಾ ಮಾಹಿತಿ ಲಭ್ಯವಾಗಿಲ್ಲ. ಅಧ್ಯಯನ ಮುಂದುವರೆದಿದೆ, ಜ್ಞಾನಿಗಳ ಹಡುಕಾಟವೂ ನಡೆಯುತ್ತಿದೆ.

ಸಂಶೋಧನೆಯ ಹಿನ್ನಲೆಯಲ್ಲಿ, ಸುಮಾರು 52 ಜಾತಿಯ ಗಿಡಗಳನ್ನು, 52 ಕ್ಲಸ್ಟರ್ ಮಾದರಿಯಲ್ಲಿ ಹಾಕುವ ಆಲೋಚನೆಗೆ, ಯಾವ ಗಿಡಳನ್ನು ಆಯ್ಕೆ ಮಾಡಬೇಕು, ಎಂಬ ಬಗ್ಗೆಯೂ ಚಚೆರ್À ಆರಂಭವಾಗಿದೆ.

 ಶಕ್ತಿಪೀಠ ಕ್ಯಾಂಪಸ್‍ನಲ್ಲಿ ನಿರ್ಮಾಣ ಮಾಡಲು ಉದ್ದೇಶಿರುವ, ಪ್ರತಿಯೊಂದು ಯೋಜನೆಗೂ, ಇಲಾಖೆಯ ಮಾರ್ಗದರ್ಶನ ಪಡೆಯಲು ಮನವಿ ಮಾಡಲಾಗಿದೆ. ಮನವಿಯ ಕಡತದ ಅನುಸರಣೆಯೂ ನಡೆಯುತ್ತಿದೆ.