ದಿನಾಂಕ:04.09.2025 ರಿಂದ 07.09.2025 ರವರೆಗೆ ನಾಲ್ಕು ದಿವಸಗಳ ಕಾಲ ಬೆಳಗಾಂ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ 5 ಜಿಲ್ಲೆಗಳ ಕೃಷಿ ಆಶ್ರಮಗಳ ಪ್ರಮುಖರ ಮತ್ತು ಕೃಷಿ ಆಶ್ರಮಗಳನ್ನು ಆರಂಭಿಸಲು ಪ್ರೋತ್ಸಾಹಿಸುವ, ವಿಧಾನಸಭಾ ಕ್ಷೇತ್ರವಾರು ಸಂಚಾಲಕರನ್ನು ಖುದ್ದು ಭೇಟಿಯಾಗುವ ಮಹತ್ವದ ನಿರ್ಧಾರವನ್ನು, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಪ್ರಮುಖರು ಕೈಗೊಂಡಿದ್ದಾರೆ.
ಇದೊಂದು ಪಾರದರ್ಶಕ ಆಂದೋಲನ, ‘ಸಾವಯವ ಕೃಷಿ’ ಮಾಡುತ್ತಿರುವವರು, ಮಾಡಲು ಆಸಕ್ತಿ ಇರುವವರು, ಯಾರು ಬೇಕಾದರೂ ಕೈಜೋಡಿಸಬಹುದು. ಕನಿಷ್ಠ ಒಂದು ಗುಂಟೆಯಲ್ಲಿ, ಮನೆಯ ತಾರಸಿಯಲ್ಲಿ, ಹಿತ್ತಲಿನಲ್ಲಿ, ಮನೆ ಮುಂದೆ ಹೀಗೆ ಎಷ್ಟೇ ಜಾಗದಲ್ಲಿ, ತಾವು ಮಾಡುತ್ತಿರುವ ಕೃಷಿ ಚಟುವಟಿಕೆಗಳನ್ನು ಹಲವಾರು ಜನರು ಬಂದು ನೋಡುವಂತಿರ ಬೇಕು.
ಯಾವುದಾರೂ ‘ಒಂದು ಕಳೆ-ಬೆಳೆ ಬಗ್ಗೆ ನಾಲೇಡ್ಜ್ ಬ್ಯಾಂಕ್’ ಸ್ಥಾಪಿಸಲು ಆಸಕ್ತಿ ಇರುವವರನ್ನು ಗುರುತಿಸಬೇಕು. ಪಂಚಭೂತಗಳ ಸಂರಕ್ಷಣೆ ಮಾಡುತ್ತಿರಬೇಕು, ಜೊತೆಗೆ ತಮ್ಮ ತಮ್ಮ, ಪ್ರಧೇಶಗಳ ಅಭಿವೃದ್ಧಿ ಯೋಜನೆಗಳಿಗೆ ಶ್ರಮಿಸುತ್ತಿರುªವರÀ, ಸಂಶೋಧಕರು, ಜ್ಞಾನಿಗಳು, ಇನ್ನೊವೇಟರ್ಸ್, ಹೀಗೆ ವಿವಿಧ ವರ್ಗದ ನಾಲೇಡ್ಜಬಲ್ ಪರ್ಸನ್‍ಗಳನ್ನು ಗುರುತಿಸಿ ಮಾಹಿತಿ ನೀಡಲು ಆಸಕ್ತಿ ಹೊಂದಿರಬೇಕು.
ಯಾವುದೇ ಮಾದರಿಯ ರೈತ, ರೈತ ಉಧ್ಯಮಿ/ಮೌಲ್ಯವರ್ಧನೆ, ಬೆಳೆವಾರು ಸ್ಟಾರ್ಟ್ ಅಫ್, ಬೆಳೆಗಳ ಸಂಶೋಧಕ, ವಿಜ್ಞಾನಿ, ಡಾಕ್ಟರೇಟ್ ಪಡೆಯುವ ಆಸಕ್ತಿ ಇರುವವರು ಕೈಜೊಡಿಸುವುದು ಅಗತ್ಯವಾಗಿದೆ.
‘ನಂಬರ್ ಒನ್ ಕರ್ನಾಟಕ – ನಾಲೇಡ್ಜ್ ಬ್ಯಾಂಕ್’ ಗೆ ಶ್ರಮಿಸುವ ಮನಸ್ಸಿರುವವರು, ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಘೋಷಣೆಯಡಿ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳಿಗೂ ನದಿ ನೀರು ಅಲೋಕೇಷನ್‍ಗೆ ಶ್ರಮಿಸಲು ಆಸಕ್ತಿ ಇರುವ ನೀರಾವರಿ ಸಂಶೋಧಕರು, ಹೋರಾಟಗಾರರು ಜೊತೆಗೂಡ ಬಹುದಾಗಿದೆ.
ತುಮಕೂರಿನ ಶಕ್ತಿಭವನದಿಂದ ಅಧ್ಯಯನ ಪ್ರವಾಸ ಆರಂಭವಾಗಲಿದೆ. ಪ್ರವಾಸ ಮಾರ್ಗದಲ್ಲಿರುವ ಕೃಷಿ ಆಶ್ರಮಗಳು ಟೀ, ಉಪಹಾರ, ಊಟ ಮತ್ತು ರಾತ್ರಿ ತಂಗಲು ವ್ಯವಸ್ಥೆ ಮಾಡಿರುವವರು ಹಾಗೂ ಮಾಡಲು ಬಯಸುವವರು ಕೆಳಕಂಡವರನ್ನು ಸಂಪರ್ಕಿಸ ಬಹುದು.
ಈ ಐದು ಜಿಲ್ಲೆಗಳ ಆಸಕ್ತರು ವಿವಿಧ ಸ್ಥಳಗಳಲ್ಲಿ, ನಡೆಯುವ ಸಭೆಗಳಿಗೆ ಖುದ್ದಾಗಿ ಆಗಮಿಸಿ ‘ಮುಖಾ-ಮುಖಿ ಸಮಾಲೋಚನೆ’ ನಡೆಸಲು ಬಹಿರಂಗ ಮನವಿ ಮಾಡಿದ್ದಾರೆ. ಕೆಳಕಂಡವರಿಗೆ ನೇರವಾಗಿ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
1. ಡಾ.ಬಿ.ಎಂ.ನಾಗಭೂಷಣ್‍ರವರು.
2. ಡಾ.ಜಗನ್ನಾಥ್‍ರಾವ್‍ರವರು.
3. ಮಾರುತಿ ರಾವ್ ರವರು
4. ಎನ್.ಶಿವಣ್ಣನವರು.
5. ಸುಹೃತ್ ಉಜ್ಜನಿರವರು.
– ಕುಂದರನಹಳ್ಳಿ ರಮೇಶ್