13th September 2025
Share

TUMAKURU:SHAKTHI PEETA FOUNDATION

ಮೊಹಮ್ಮದ್ ತಬ್ರೇಜ್ ಅಲಂ ಷರೀಫ್ ಇವರು, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿ, ಅಧಿಕಾರ ವಹಿಸಿಕೊಂಡ 100 ದಿವಸದೊಳಗೆ, ಮುಂದಿನ 5 ವರ್ಷಗಳ ಅವಧಿಯ  ಒಂದು ರೋಡ್ ಮ್ಯಾಪ್ ಸಿದ್ಧಪಡಿಸಿಕೊಳ್ಳಲು ಸ್ವತಃ ಅವರೇ ಕಾಲಮಿತಿ ಹಾಕಿಕೊಂಡಿದ್ದಾರೆ. ಇವರು ಒಂದು ಕಂಪನಿಯ ಸಿ.ಇ.ತgಕಾರ್ಯನಿರ್ವಹಿಸುತ್ತಿದ್ದಾರೆ.

ಇಂದಿಗೆ 95-97 ದಿವಸಗಳು ಆಗಿರಬಹುದು, ನಿಖರವಾಗಿ ಗೊತ್ತಿಲ್ಲ, ಆದರೇ ಅವರ ರೋಡ್ ಮ್ಯಾಪ್ ಸಿದ್ಧವಾಗಿದೆ. ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆಯವರಿಗೆ ಸರ್ಕಾರದ ಆದೇಶಕ್ಕಾಗಿ ಸಲ್ಲಿಸಲಿದ್ದಾರೆ.

ಇವರು ಅಚಾನಕ್ ಆಗಿ ಒಂದು ಸರ್ಕಾರಿ ಸಭೆಯಲ್ಲಿ ನನಗೆ ಪರಿಚಯವಾದವರು. ಅವರು ಆಡಿದ ಮಾತುಗಳು ನನಗೆ ಮೆಚ್ಚುಗೆಯಾದವೂ, ಅಂದಿನಿಂದ ಮೂರು ಭಾರಿ ಅವರ ಕಚೇರಿಗೆ ಭೇಟಿ ನೀಡಿದ್ದೇನೆ.

ನಾನೊಬ್ಬ ಆಶಾವಾದಿ, ಅವರು ನನಗಿಂತ ನೂರು ಪಟ್ಟು ಹೆಚ್ಚಿನ ಆಶಾವಾದಿ, ಏಕೆಂದರೆ ಅವರ ಅಧಿಕಾರಕ್ಕೆ ಕಾಲಮಿತಿ ಇದೆ. ನನಗೆ ಯಮನೇ ಕಾಲಮಿತಿ ನಿಗಧಿ ಮಾಡಬೇಕು. ಅಲ್ಲಿಯವರೆಗೂ ನನ್ನ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಪಾತ್ರಗಳು ಬದಲಾವಣೆಯಾಗುತ್ತಿವೆ ಅಷ್ಟೆ.

ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ, ತುಮಕೂರು ಮಾಜಿ ಲೊಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ನನ್ನ ಕನಸಿನ ಘೋಷಣೆ.

ಪಶ್ಚಿಮ ಘಟ್ಟಗಳಿಗೂ ಈ ಘೋಷಣೆಗೂ ಅವಿನಾವ ಭಾವ ಸಂಭಂದ. ಜೊತೆಗೆ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಲಾ 5 ರಂತೆ 1120 ಕೃಷಿ ಆಶ್ರಮಗಳನ್ನು ರೈತರಿಂದ ಆರಂಭಿಸಿ, ಅವುಗಳನ್ನು ವಿಶ್ವಕ್ಕೆ ಪರಿಚಯಿಸಲು, ವಿದ್ಯಾರ್ಥಿಗಳ ನೇತೃತ್ವದಲ್ಲಿ  ನಂಬರ್ ಒನ್ ಕರ್ನಾಟಕ @ 2047 ಶ್ರಮಿಸುವ ಚಿಂತನೆ ನನ್ನದಾಗಿದೆ.

ಕೃಷಿ ಆಶ್ರಮಗಳು ಮತ್ತು ಕೃಷಿ ಗುರುಕುಲದ ಜನ ಜಾಗೃತಿ ಹೊಣೆಗಾರಿಕೆಯನ್ನು ಡಾ.ನಾಗಭೂಷಣ್ ರವರು ಪಡೆದರೆ, 1120 ಕಳೆ-ಬೆಳೆಗಳ ಕೃಷಿ ಮಾಡುವ ರೈತ, ರೈತೋಧ್ಯಮಿ/ಮೌಲ್ಯವರ್ಧನೆ, ರೈತರಿಂದ ಸಂಶೋಧನೆ, ರೈತನೇ ವಿಜ್ಞಾನಿ, ರೈತನಿಗೆ ಡಾಕ್ಟರೇಟ್ ಪಡೆಯುವ   ಜನ ಜಾಗೃತಿ ಹೊಣೆಗಾರಿಕೆಯನ್ನು ಡಾ.ಜಗನಾಥ್ ರಾವ್ ಪಡೆದರೆ, ಕೃಷಿ ಆಶ್ರಮಗಳಲ್ಲಿ ಅಗ್ರಿಟೂರಿಸಂ ಜನ ಜಾಗೃತಿ ಹೊಣೆಗಾರಿಕೆಯನ್ನು ಡಾ. ಸಂತೋóಷ್ ರವರು ಪಡೆಯಲು ಮುಂದೆ ಬಂದಿದ್ದಾರೆ.

ಶಕ್ತಿಪೀಠ ಫೌಂಡೇಷನ್ ಇವುಗಳ ಮಾನಿಟರಿಂಗ್ ಮಾಡುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಹೊಣೆಗಾರಿಕೆಯನ್ನು ಪಡೆಯಲು ಯೋಚಿಸುತ್ತಿದೆ. ಈ ಎಲ್ಲಾ ಅಂಶಗಳಿಗೂ ಪಶ್ಚಿಮ ಘಟ್ಟಗಳ ಮ್ಯೂಸಿಯಂ ಗೂ ಬಹಳ ಸಂಭಂದವಿದೆ.

ಈ ಹಿನ್ನಲೆಯಲ್ಲಿ ಮೊಹಮ್ಮದ್ ತಬ್ರೇಜ್ ಅಲಂ ಷರೀಫ್ ರವರ ಕನಸಿಗೆ, ನಾವುಗಳು ಅಂದರೆ ಮೊದಲನೇ ಹಂತದಲ್ಲಿ ಉದ್ದೇಶಿತ 1120 ಕೃಷಿ ಆಶ್ರಮಗಳು, ನಂತರ ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆ ವ್ಯಾಪ್ತಿಯ ಸುಮಾರು 30000 ಕೃಷಿ ಆಶ್ರಮಗಳು ಕೈಜೋಡಿಸಲು ಮುಂದಾಗಲು ಯೋಚಿಸುತ್ತಿದ್ದೇವೆ.

ದೇಶದ ಎಲ್ಲಾ ರಾಜ್ಯಗಳ ಹಾಗೂ ವಿಶ್ವದ ಎಲ್ಲಾ ದೇಶಗಳ ಪರಿಸರ, ಕಲೆ, ಸಂಸ್ಕøತಿ, ಕೃಷಿ, ನೀರಾವರಿ, ಅಭಿವೃದ್ಧಿ ಹೀಗೆ ಎಲ್ಲಾ ವಿಷಯಗಳ ಹೋಲಿಕೆಗಳಿಗೂ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿನ ಪಶ್ಚಿಮ ಘಟ್ಟಗಳ ಮ್ಯೂಸಿಯಂ’ ಈ ಎಲ್ಲಾ ವಿಷಯಗಳ ತವರು ಮನೆಯಾಗಲಿದೆ. ‘ಇದರ ಗೌರ್ವನಿಂಗ್ ಸಮಿತಿಗೆ ಮಾನ್ಯ ಮುಖ್ಯ ಮಂತ್ರಿಗಳು ಅಧ್ಯಕ್ಷರಾಗಿ, ಸಲಹಾ ಸಮಿತಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗ ಬೇಕು ಎನ್ನುವುದು  ನನ್ನ ಅನಿಸಿಕೆಯಾಗಿದೆ.’

ಉದ್ದೇಶಿತ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’,  ಈ ಎಲ್ಲಾ ವಿಚಾರಗಳ ನಾಲೇಡ್ಜ್ ಬ್ಯಾಂಕ್ ‘ ಆರಂಭಿಸಲಿದೆ. ಇಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದ/ಬಡಾವಣೆಯಿಂದ ಆರಂಭಿಸಿ ವಿಶ್ವ ಸಂಸ್ಥೆವರೆಗೂ ಜ್ಞಾನಿಗಳು ಇರಲಿದ್ದಾರೆ.

 ಯಾವುದೇ ವಯಸ್ಸಿನ ಮಿತಿ ಇಲ್ಲ, ವಿದ್ಯಾರ್ಹತೆಯ ಅಗತ್ಯವಿಲ್ಲ, ಜ್ಞಾನಕ್ಕೆ ಮಾತ್ರ ಇಲ್ಲಿ ಸ್ಥಳ, ಮುಂದಿನ ಯುಗ ಜ್ಞಾನಿಗಳ ಯುಗ’ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಶ್ರೀ ಎನ್.ಎಸ್.ಬೋಸರಾಜ್ ರವರು ಮತ್ತು ಅವರ ತಂಡ ವಿಶಿಷ್ಟ ಪರಿಕಲ್ಪನೆಯೊಂದಿಗೆ ಹಳ್ಳಿಯತ್ತ ಸಾಗಲು ರೂಪುರೇಷೆ ಸಿದ್ಧಪಡಿಸುತ್ತಿದೆ. ಇದು ಕೃಷಿಕರಿಗೆ ವರದಾನವಾಗಲಿದೆ. ಕರ್ನಾಟಕ ರಾಜ್ಯ ಸರ್ಕಾರದ ಈ ಆಂದೋಲನ ‘ವಿಶ್ವದ ಗಮನ ಸೆಳೆ’ಯಲಿದೆ.

ಪಶ್ಚಿಮ ಘಟ್ಟಗಳ ಜೊತೆಗೆ ಪೂರ್ವದ ಬೆಟ್ಟ ಗುಡ್ಡಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕಿದೆ.   ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ವ್ಯಾಪ್ತಿ, 10 ಜಿಲ್ಲೆಗಳಿಗೆ ಸೀಮೀತವಾಗದೇ ರಾಜ್ಯವ್ಯಾಪ್ತಿಗೆ ವಿಸ್ತರಣೆಯಾಗ ಬೇಕಿದೆ. 

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2047 ಕ್ಕೆ ವಿಶ್ವಗುರು/ಅಭಿವೃದ್ದಿ ಹೊಂದಿದ ಭಾರತದ ಕನಸು ಕಂಡರೆ, ನಮ್ಮ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು, 2045 ವೇಳೆಗೆ ಕರ್ನಾಟಕ ರಾಜ್ಯವನ್ನು ನಂಬರ್ ಒನ್ ಮಾಡಬೇಕು ಎಂಬ ಅನಿಸಿಕೆಯನ್ನು ಮಾನ್ಯ ಮುಖ್ಯ ಮಂತ್ರಿಯವರ ಬಳಿ ಚರ್ಚಿಸುತ್ತಿದ್ದಾರಂತೆ. ಇದು ಮೋದಿಯವರಿಗೂ ಖುಷಿ ಆಗಲಿದೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಪ್ರಧಾನಿಯವರ ಬಳಿ ಅಭಿವೃದ್ಧಿ ವಿಚಾರ ಮಾಡುತ್ತಿದ್ದ ದೃಷ್ಯ ಮತ್ತು ಮಾನ್ಯ ಮುಖ್ಯಮಂತ್ರಿಯವರಾದ ಸಿದ್ಧರಾಮಯಯನವರು ಮೆಟ್ರೋದಲ್ಲಿ ಮೋದಿಯÀಯರೊಂದಿಗೆ ಹಂಚಿಕೊಂಡ ಗಳಿಗೆ ಇದಕ್ಕೆ ಸಾಕ್ಷಿ. ನಿಜಕ್ಕೂ ಇದೊಂದು ದೊಡ್ಡ ಹೆಜ್ಜೆ.

ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ, ನಿಗಮ, ಬೋರ್ಡ್,  ಕಾರ್ಪೋರೇಷನ್ ಹೀಗೆ ಪ್ರತಿಯೊಂದು ಕಚೇರಿಯಲ್ಲಿ ನಮ್ಮ ಪರಿಕಲ್ಪನೆಗೆ ಬೆಂಬಲ ನೀಡುವಂತಹ, ಜವಾನನಿಂದ ಆರಂಭಿಸಿ ಇಲಾಖೆಯ ಪ್ರಮುಖರವರೆಗೂ ಒಂದು ವೇದಿಕೆಯಲ್ಲಿ ತರುವ ನನ್ನ ಕನಸಿನ ಪರಿಕಲ್ಪನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಅವರೆಲ್ಲರೂ ಪಶ್ಚಿಮಘಟ್ಟಗಳ ಮ್ಯೂಸಿಯಂ ನಾಲೇಡ್ಜ್ ಬ್ಯಾಂಕ್’ ಅಡಿಯಲ್ಲಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಸರ್ಕಾರಿ ಆದೇಶ ಪಡೆಯಲು ಯೋಚಿಸುತ್ತಿದ್ದೇವೆ. ಈಗ ಹೆಸರು ಬಹಿರಂಗ ಪಡಿಸದ ಮೂರು ಮಂದಿ ಮಹಿಳಾ ಅಧಿಕಾರಿಗಳು ಈ ಬಗ್ಗೆ ಒಂದು ಅಧ್ಯಯನ ವರಧಿ ನೀಡಲಿದ್ದಾರೆ.

ಜ್ಞಾನ ದಾನಿಗಳು ಜ್ಞಾನ ದಾನ’ ಮಾಡಲು ಬಹಿರಂಗ ಮನವಿ.