TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಸಾಮಾಜಿಕ ಮತ್ತು ಸೈಕ್ಷಣಿಕ ಸಮೀಕ್ಷೆ ನಡೆಸಿ ಕೈ ಸುಟ್ಟುಕೊಂಡಿದೆ. ಈಗ ಮತ್ತೊಮ್ಮೆ ಸಾಮಾಜಿಕ ಮತ್ತು ಸೈಕ್ಷಣಿಕ ಸಮೀಕ್ಷೆ-2025 ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಜನರ ಬಾಯಲ್ಲಿ ಜಾತಿಗಣತಿ ಮಾಡುತ್ತಾರೆ ಎಂಬ ಮಾತು ಇದೆ. ಆದರೆ ಎಲ್ಲೂ ಇದು ‘ಜಾತಿಗಣತಿ’ ಎಂದು ಹೇಳಿಲ್ಲ,
ಕೆಳಕಂಡ ಅಂಶಗಳ ಬಗ್ಗೆ ಸರ್ಕಾರದ ಗಮನ ಸೆಳೆಯ ಬೇಕು ಎಂಬ ಅರಿವು ನನಗೆ ಮೂಡಿದೆ, ಇನ್ನೂ ಯಾವುದಾದರೂ ಅಂಶಗಳ ಬಗ್ಗೆ ಗೊಂದಲಗಳಿದ್ದರೆ, ಈಗಲೇ ಸರ್ಕಾರದ ಗಮನ ಸೆಳೆಯುವುದು ಸೂಕ್ತವಾಗಿದೆ. ಎಲ್ಲಾ ಮುಗಿದ ಮೇಲೆ ‘ರಾಜಕೀಯವಾಗಿ ಪರ ವಿರೋಧ ‘ಬರಬಾರದು. ಎಲ್ಲಾ ರಾಜಕೀಯ ಪಕ್ಷಗಳು ಈಗಲೇ ಧ್ವನಿ ಎತ್ತುವುದು ಒಳ್ಳೆಯದು.
‘ನಮ್ಮ ಸರ್ಕಾರ ಮಾಡುವ ಗಣತಿ ದೇಶಕ್ಕೆ ಮಾದರಿಯಾಗಬೇಕು’. ಎಲ್ಲರ ಹೊಣೆಗಾರಿಕೆಯೂ ಅಗತ್ಯವಾಗಿದೆ. ಸಲಹೆಗಳಿದ್ದಲ್ಲಿ ಹಂಚಿಕೊಳ್ಳಲು ಬಹಿರಂಗ ಮನವಿ. ಮುಂದಿನ ವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ನಿಮ್ಮ ಸಲಹೆಗಳನ್ನು ಮನವಿಯಲ್ಲಿ ಸೇರ್ಪಡೆ ಮಾಡಬಹುದಾಗಿದೆ.
1. ಹಾಗಾದರೆ ಈ ಸಮೀಕ್ಷೆಯೂ ಜಾತಿಗಣತಿಯಲ್ಲವೇ ?
2. ಕಾಲಂ 8 ರಲ್ಲಿ ಧರ್ಮದ ಅಡಿಯಲ್ಲಿ
1. ಹಿಂದು
2. ಇಸ್ಲಾಂ
3. ಕ್ರೈಸ್ತ
4. ಜೈನ್
5. ಸಿಖ್
6. ಭೌದ್ಧ
7. ಪಾರ್ಸಿ
8. ನಾಸ್ತಿಕ
9. ಗೊತ್ತಿಲ್ಲ
10. ತಿಳಿಸಲು ನಿರಾಕರಿಸುತ್ತಾರೆ.
11. ಇತರೆ
3. ಆಂಗ್ಲ ವರ್ಣಮಾಲೆ ಪ್ರಕಾರ ಜಾತಿ/ಉಪಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಇದರ ಜೊತೆಗೆ, ಧರ್ಮವಾರು ಜಾತಿ/ಉಪಜಾತಿ ಪಟ್ಟಿಗಳನ್ನು ವಿಂಗಡಣೆ ಮಾಡುವುದು ಸೂಕ್ತವಾಗಿದೆ. ಇಲ್ಲವಾದಲ್ಲಿ ಮತ್ತೆ ಗೊಂದಲಗಳು ಬರಬಹುದು. ಸಮೀಕ್ಷೆ ಮಾಡುವವರಿಗೂ ಮತ್ತು ಧರ್ಮ, ಜಾತಿ/ಉಪಜಾತಿ ಬಗ್ಗೆ ಹೇಳುವವರಿಗೂ ಗೊಂದಲಗಳು ಹುಡುಕಾಟ ತಪ್ಪಿಸಲು ಅನೂಕೂಲವಾಗಲಿದೆ ಎಂಬುದು ನನ್ನ ಅನಿಸಿಕೆ.
4. ದೇಶದಲ್ಲಿ ವಾಸವಿರುವ ಎಲ್ಲರೂ ಸಂವಿಧಾನದ ನಿಯಮದ ಪ್ರಕಾರ ನಡೆದುಕೊಳ್ಳಬೇಕು. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯುವವರು ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ. ಎಂಬುದು ಸರಿಯಿಲ್ಲ ಎಂಬುದು ನನ್ನ ಅನಿಸಿಕೆ.
5. ಇತರೆ ಧರ್ಮ ಯಾವುದಾದರೂ ಇದೆಯಾ ಅಥವಾ ಇತರೆ ಧರ್ಮದ ಬಗ್ಗೆ ಪ್ರತಿಪಾದನೆ ಮಾಡುತ್ತಿರುವ ಧರ್ಮಗಳ ಹೆಸರು ಇಲ್ಲಿ ಬರುವುದು ಸೂಕ್ತವಾಗಿದೆ. ಎಂಬುದು ನನ್ನ ಅನಿಸಿಕೆ.
6. ಕಾಲಂ ನಂಬರ್ 24 ರಲ್ಲಿ ಹುಟ್ಟಿದ ಜಿಲ್ಲೆ ಅಡಿಯಲ್ಲಿ ಜಿಲ್ಲೆಯ ಒಳಗೆ, ಹೊರಜಿಲ್ಲೆ, ಹೊರರಾಜ್ಯ ಇದೆ. ಇದರ ಜೊತೆಗೆ ಹೊರದೇಶವೂ ಇರಬೇಕು. ಎಷ್ಟೋ ಜನ ಅನಿವಾಸಿಗಳ ಮಕ್ಕಳು ಹೊರದೇಶದಲ್ಲಿ ಹುಟ್ಟಿರುತ್ತಾರೆ ಎಂಬುದು ನನ್ನ ಅನಿಸಿಕೆ.
7. ಕಾಲಂ 28 ರಲ್ಲಿನ ಉದ್ಯೋಗ ಕಾಲಂ ಅಡಿಯಲ್ಲಿ, ಕೋಡ್ ಸಂಖ್ಯೆ 28 ವೈಧ್ಯರು (ಆಯುರ್ವೇದ, ಯನಾನಿ, ಹೋಮಿಯೋ ಪತಿ, ಸಿದ್ಧ, ಇತ್ಯಾಧಿ) ಇಲ್ಲಿ ‘ಪಾರಂಪರಿಕ ವೈಧ್ಯ, ನಾಟಿ ವೈಧ್ಯ ಮತ್ತು ಹಕೀಮರು ‘ಎಂದು ಇರಬೇಕು. ಎಂಬುದು ನನ್ನ ಅನಿಸಿಕೆ.
8. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಪ್ರಕಾರ ದೇಶದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಾಸನ ಬದ್ಧವಾದ ‘ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ’ ರಚಿಸಿದ್ದಾರೆ.ಅದರಲ್ಲಿ ಪಾರಂಪರಿಕ ವೈಧ್ಯ, ನಾಟಿ ವೈಧ್ಯ ಮತ್ತು ಹಕೀಮರು ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಇಲ್ಲಿಯೂ ಅಗತ್ಯ ಇದೆ ಎಂಬುದು ನನ್ನ ಅನಿಸಿಕೆ.
9. ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗೆ ಅಡಿಯಲ್ಲಿ ‘ನಾಲೇಡ್ಜಬಲ್ ಪರ್ಸನ್’ಗಳನ್ನು ಸಲಹಾ ಸಮಿತಿ ಸದಸ್ಯರಾಗಿ ನೇಮಕ ಮಾಡಲು ಸೂಚಿಸಿರುತ್ತಾರೆ, 60 ಪ್ರಶ್ನಾವಳಿಗಳಲ್ಲಿ ಎಲ್ಲೂ ನಾಲೇಡ್ಜಬಲ್ ಪರ್ಸನ್‍ಗಳ ಬಗ್ಗೆ ಪ್ರಶ್ನಾವಳಿ ಕಾಣಿಸಲಿಲ್ಲ. ‘ಮುಂದಿನ ಯುಗ ಜ್ಞಾನದ ಯುಗ’ ಎಂದು ಹೇಳುತ್ತೇವೆ. ಆದರೇ ಜ್ಞಾನಿಗಳ, ಪರಿಣಿತರು,ಇನ್ನೋವೇಟರ್ಸ್, ಟ್ರೆಡಿಷನಲ್ ನಾಲೇಡ್ಜ್, ಸಂಶೋಧಕರು, ಸೋಶಿಯಲ್ ಇಂಜಿನಿಯರ್ಸ್, ವಿವಿಧ ಪ್ರಶಸ್ತಿಗಳನ್ನು ಪಡೆದಿರುವವರು, ಪಿಹೆಚ್‍ಡಿ ಮಾಡಿರುವವರು ಯಾವ ವಿಷಯದ ಮೇಲೆ ಸಂಶೋಧನೆ ಮಾಡಿದ್ದಾರೆ ಅಥವಾ ಮಾಡಲು ಬಯಸಿದ್ದಾರೆ, ರೈತರೇ ಮಾಡುತ್ತಿರುವ ಸಂಶೋಧನೆ ಇತ್ಯಾದಿ ಬಗ್ಗೆಯೂ ಸಮೀಕ್ಷೆ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ.
10. ಕಾಲಂ 34 ರಲ್ಲಿ ವಾರ್ಷಿಕ ಆದಾಯ ರೂ 20000 ಕ್ಕಿಂತ ಕಡಿಮೆ ಎಂದು ಇದೆ. ಕರ್ನಾಟಕ ರಾಜ್ಯದಲ್ಲಿ ಈ ಅಂಶದ ಅಗತ್ಯ ಇದೆಯೇ ಎಂಬುದು ನನ್ನ ಅನಿಸಿಕೆ.
11. ಧರ್ಮ, ಜಾತಿ, ಉಪಜಾತಿಗಳ ರಾಜ್ಯ ಮಟ್ಟದ ಸಂಘಟನೆಗಳಿಗೆ ಮಾನ್ಯತೆ ನೀಡಿ, ಅವರಿಗೂ ನಿಧಿಷ್ರ್ಠ ಹೊಣೆಗಾರಿಕೆ ನೀಡುವುದು ಸೂಕ್ತ ಎಂಬುದು ನನ್ನ ಅನಿಸಿಕೆ.
12. ಸಮೀಕ್ಷೆ ಮುಗಿದ ನಂತರ, ಕರಡು ಪ್ರತಿಯನ್ನು ಆಯಾ ಬ್ಲಾಕ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಇಂಟರ್ನ್ ಷಿಪ್, ಪ್ರಾಜೆಕ್ಟ್ ವರ್ಕ್, ಐಎಸ್‍ಆರ್ ವರ್ಕ್, ಆಕ್ಟಿವಿಟಿ ಪಾಯಿಂಟ್ಸ್ ಮೂಲಕ ಪರಿಶೀಲನೆ ಮಾಡಿಸುವುದು ಸೂಕ್ತವಾಗಿದೆ ಎಂಬುದು ನನ್ನ ಅನಿಸಿಕೆ.
13. ಆಯಾ ಬ್ಲಾಕ್ ವ್ಯಾಪ್ತಿಯ ವ್ಯಕ್ತಿ, ಕುಟುಂಬ ಮತ್ತು ಸರ್ವೇನಂಬರ್ ವಾರು ಸಮಗ್ರ ಅಭಿವೃದ್ದಿ ಬಗ್ಗೆ ಪಿಹೆಚ್‍ಡಿ ಮಾಡುವವರಿಗೂ ಅವಕಾಶ ಕಲ್ಪಿಸುವುದು ಸೂಕ್ತವಾಗಿದೆ, ಆಯಾ ಬ್ಲಾಕ್ ವ್ಯಾಪ್ತಿಯ ‘ವಿಷನ್ ಡಾಕ್ಯುಮೆಂಟ್ @ 2047’ ಗೆ ಪೂರಕವಾಗಲಿದೆ.
14. ನಂತರ ಆಯಾ ಬ್ಲಾಕ್ ಮಟ್ಟದ ಎಲ್ಲಾ ವರ್ಗದವನ್ನು ಒಳಗೊಂಡಂತೆ ‘ವಿಷನ್ ಗ್ರೂಪ್’ ರಚಿಸಿ, ಅವರ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ ಎಂಬುದು ನನ್ನ ಅನಿಸಿಕೆ.
15. ಸಮೀಕ್ಷಾ ಕೈಪಿಡಿ-2025 ರ ಅಂಶಗಳ ಬಗ್ಗೆ ಸಾರ್ವಜನಿಕರ ಚರ್ಚೆಯೂ ಅಗತ್ಯವಾಗಿದೆ. ರಾಜ್ಯದ ಎಲ್ಲಾ ‘224 ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ‘ ರಚಿಸಿ, ಕನಿಷ್ಠ ಮೂರು ಸಭೆಗಳನ್ನು (ಸಮೀಕ್ಷೆ ಆರಂಭದಲ್ಲಿ, ಸಮೀಕ್ಷೆ ಕರಡು ಪ್ರತಿ ಬಿಡುಗಡೆ ಮಾಡಿದ ನಂತರ ಮತ್ತು ಅಂತಿಮ ವರದಿ ಬಿಡುಗಡೆ ಮಾಡಿದ ನಂತರ) ಆಯೋಜಿಸಿಸುವುದು ಸೂಕ್ತವಾಗಿದೆ, ಇಲ್ಲಿ ರಹಸ್ಯ ಏನಿಲ್ಲ, ಎಲ್ಲವೂ ಪಾರದರ್ಶಕವಾಗಿ ಆಯಾ ಬ್ಲಾಕ್ ಮಟ್ಟದವರೊಂದಿಗೂ ಸಮಾಲೋಚನೆ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ.