TUMAKURU:SHAKTHI PEETA FOUNDATION
ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯÀ ಹಿಂದುಳಿದ ಆಯೋಗ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕೈಪಿಡಿ – 2025’ ಬಿಡುಗಡೆ ಮಾಡಿದೆ. ಇದರಲ್ಲಿ ಇನ್ನೂ ಆನೇಕ ಅಂಶಗಳನ್ನು ಸೇರ್ಪಡೆ ಮಾಡಬೇಕು ಎಂಬ ಅನಿಸಿಕೆ ನನ್ನದಾಗಿದೆ.
‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪಕ್ಕಾ ವರದಿ ತಯಾರಿಸಲು ಸಲಹೆ ನೀಡಲಾಗಿತ್ತು. ಸರ್ಕಾರ ಮತ್ತೆ ಸಮೀಕ್ಷೆ ನಡೆಸಲು ಮುಂದಾಗಿ ರುವುದು ಮೆಚ್ಚವಂತದ್ದು.
‘ನಂಬರ್ ಒನ್ ಕರ್ನಾಟಕ @ 2047’ ಘೋಷಣೆ ಮಾಡಬೇಕಾದರೆ, ರಾಜ್ಯದಲ್ಲಿ ಇರುವ ಎಲ್ಲಾ ಧರ್ಮ, ಜಾತಿ, ಉಪಜಾತಿಯವರು, ಅವರ ಜಾತಿಯ, ಉಪಜಾತಿಯ ಕಡುಬಡವರನ್ನು ಗುರುತಿಸಿ, ಬಡತನ ವರ್ಗದಿಂದ ಮೇಲಕ್ಕೆ ಎತ್ತಲು ಶ್ರಮಿಸಬೇಕಿದೆ. ‘ಮೊಸಳೆ ಕಣ್ಣಿರು ಹಾಕಿ, ಬಡವರ ಮೇಲೆ ಸವಾರಿ ಮಾಡುವವರಿಗೆ ಇತಿಶ್ರೀ ಹಾಡಲೇ ಬೇಕಿದೆ’.
ನಾನೊಬ್ಬನೆ ಸಲಹೆ ನೀಡುವುದಕ್ಕೆ ಬದಲಾಗಿ ಆಸಕ್ತರ ಒಂದು ವಾಟ್ಸ್ ಅಫ್ ಗುಂಪು ರಚಿಸಿಕೊಂಡು, ಎಲ್ಲರ ಅಭಿಪ್ರಾಯಗಳನ್ನು ಗಣನೆಗೆ ತೆಗೆದು ಕೊಂಡು, ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದೇನೆ. ನನ್ನ ವಾಟ್ಸ್ ಅಫ್ ಸ್ಟೇಟಸ್ ನಲ್ಲಿ ಗ್ರೂಪ್ ಇನ್‍ವೈಟ್ ಲಿಂಕ್ ಹಾಕಲಾಗಿದೆ. ಇಷ್ಟ ಇರುವವರು ನಮ್ಮೊಂದಿಗೆ ಸೇರಬಹುದು.
ಇಲ್ಲಿ ರಾಜಕೀಯ ಇಲ್ಲ, ‘ದೇಶದ ದೊರೆ – ಪ್ರಧಾನಿ ಶ್ರೀ ನರೇಂದ್ರಮೋದಿಯವರು, ರಾಜ್ಯದ ದೊರೆ – ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಶ್ರೀ ಡಿ.ಕೆ.ಶಿವಕುಮಾರ್ ರವರು’ ಪಕ್ಷಕ್ಕೂ ನಮಗೂ ಸಂಭಂದವಿಲ್ಲ. ವಸ್ತು ನಿಷ್ಠ ಸಲಹೆಗಳನ್ನು ಸರ್ಕಾರಕ್ಕೆ ನೀಡೋಣ, ಅವರು ಒಪ್ಪದಿದ್ದರೆ ನ್ಯಾಯಾಲಯದಲ್ಲಿ ಪಿ.ಐ.ಎಲ್ ಹಾಕೋಣ ಎಲ್ಲಾ ವರ್ಗದವರು ಒಪ್ಪುವ ಸಮೀಕ್ಷೆ ಇದಾಗಬೇಕು.
‘ಲೆಪ್ಟಿಸ್ಟ್, ರೈಟಿಸ್ಟ್, ನ್ಯೂಟ್ರಲಿಸ್ಟ್’ ಎಲ್ಲರ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳೋಣ, ಯಾವುದೇ ಮಾಧ್ಯಮದಲ್ಲಿ ಪ್ರತಿಯೊಬ್ಬರೂ ನೀಡಿದ ಹೇಳಿಕೆಗಳನ್ನು ಈ ಗ್ರೂಪ್‍ಗೆ ಹಾಕಿ.ನಿಮ್ಮ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ, ಒಂದು ವೇಳೆ ಗ್ರೂಪ್‍ನಲ್ಲಿ ಹೇಳಲು ನಿಮಗೆ ಹಿಂಜರಿಕೆ ಆದರೇ ವೈಯಕ್ತಿಕವಾಗಿ ನನಗೆ ಹಂಚಿಕೊಳ್ಳಿ.