17th September 2025
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025  ರ ಕೈಪಿಡಿಯಲ್ಲಿ ಅನುಬಂಧ 2 ರಲ್ಲಿ ಕಾಲಂ 2ಎ ನಲ್ಲಿ  ಉದ್ಯೋಗದಲ್ಲಿ

1.            ಸರ್ಕಾರಿ

2.            ಖಾಸಗಿ

3.            ವ್ಯಾಪಾರ

4.            ಸ್ವಂತ ಉದ್ಯೋಗ

5.            ಕೃಷಿ ಮತ್ತು ಸಂಬಂಧಿತ

6.            ಕೂಲಿ

ವಿಭಾಗಗಳಾಗಿ ವಿಂಗಡಿಸಿದ್ದಾರೆ. ಇದೂವರೆಗೂ ಸ್ವಯಂ ಉದ್ಯೋಗಿಗಳೆಂದರೆ ಕೈಗಾರಿಕೆ, ವ್ಯಾಪಾರ ಮತ್ತು ಸೇವೆ ಎಂದು ಗುರುತಿಸಲಾಗಿದೆ. ಇಲ್ಲಿಯೂ ಸಹ ವ್ಯಾಪಾರ ಮತ್ತು ಸ್ವಯಂ ಉದ್ಯೋಗ ಎರಡು ಕಾಲಂಗಳನ್ನು ಒಗ್ಗೂಡಿಸಿ ಸ್ವಯಂ ಉದ್ಯೋಗ ಮಾಡಿ, ಅದgಡಿಯÀಲ್ಲಿ

1.            ಕೈಗಾರಿಕೆ

2.            ವ್ಯಾಪಾರ

3.            ಸೇವೆ

ಸೇರ್ಪಡೆ ಮಾಡಲಿ ಎಂಬುದು ಹಲವಾರು ಜನರ ಅಭಿಪ್ರಾಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಇರುವ 7 ಕೋಟಿ ಜನರು  ಒಂದಲ್ಲ ಒಂದು ಉದ್ಯೋಗ ದಾಖಲಿಸಬೇಕಾಗುತ್ತದೆ.

ಮತ್ತೆ ಕಾಲಂ  26, ಕಾಲಂ  27, ಕಾಲಂ  28 ಕಾಲಂ  29 ಕಾಲಂ  30 ಮತ್ತು ಕಾಲಂ  33 ವಿವರವಾದ ಮಾಹಿತಿ ನೀಡಿದ್ದಾರೆ.

ಇಲ್ಲಿ ಯಾವುದೇ ಕಾಲಂನಲ್ಲೂ ನಾಟಿ ವೈದ್ಯ, ಪಾರಂಪರಿಕ ವೈದ್ಯ, ಹಕೀಮರುಗಳ  ಬಗ್ಗೆ ಒಂದು ಪದವೂ ಇಲ್ಲ, ಈ ಬಗ್ಗೆ ರಾಜ್ಯದ್ಯಾಂತ ಹಲವಾರು ಜನರು ನನ್ನೊಂದಿಗೆ ಚರ್ಚಿಸಿದ್ದಾರೆ.

ರಾಜ್ಯದ್ಯಲ್ಲಿ ಸ್ವಪ್ರತಿಷ್ಠೆಯಿಂದ ಹರಿದು ಹಂಚಿ ಹೋಗಿರುವ ನಾಟಿ ವೈದ್ಯ, ಪಾರಂಪರಿಕ ವೈದ್ಯ, ಹಕೀಮರ ಸಂಘಟನೆಗಳು, ಎಲ್ಲಾ ಕಹಿಘಟನೆಗಳನ್ನು ಮರೆತು, ಒಗ್ಗಟ್ಟಾಗಿ ಸರ್ಕಾರದ ಗಮನ ಸೆಳೆಯಬೇಕಿದೆ.

ದಿನಾಂಕ:18.09.2025 ರಂದು ಬೆಂಗಳೂರಿನ ವನಲೋಕದಲ್ಲಿ ಮದ್ಯಾಹ್ನ 2 ಗಂಟೆಗೆ ನಡೆಯುವ ರಾಜ್ಯದ ಕೃಷಿ ಆಶ್ರಮಗಳ ಕೋರ್ ಕಮೀಟಿ ಸಭೆಯಲ್ಲಿ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಆಸಕ್ತರು ತಮ್ಮ ಸಲಹೆಗಳನ್ನು ನೀಡಲು ಬಹಿರಂಗ ಮನವಿ ಮಾಡಲಾಗಿದೆ.