13th October 2025
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಎಸ್.ಆರ್.ಉಮಾಶಂಕರ್ ರವರು ಕೇಂದ್ರಿಯ ವಿದ್ಯಾಯಲಯಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡುವ ಮೂಲಕ ಅಮಲಾಪುರ, ಎಲ್ಲಾಪುರ, ಅರಕೆರೆ, ಅಜ್ಜಪ್ಪನಹಳ್ಳಿ ನಾಲ್ಕು ಗ್ರಾಮಕ್ಕೆ ಸೇರಿದ ಗುಡ್ಡಕ್ಕೆ ‘ಗುರುಬಲ’ ಬಂದಿತ್ತು.

ಉಪಪ್ರದೇಶಿಕ ವಿಜ್ಞಾನ ಕೇಂದ್ರಕ್ಕೆ 6 ಎಕರೆ 10 ಗುಂಟೆ ಜಮಿನು ನಿಗಧಿ ಪಡಿಸಲಾಗಿತ್ತು. ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಮ್ಮ ಅಭಿವೃದ್ಧಿ ತಂಡ, ಕಳೆದ 2012 ವರ್ಷಗಳಿಂದ ವಿಜ್ಞಾನಗುಡ್ಡ’ ಕನಸು ಕಾಣಲಾಗಿತ್ತು. ನೂರಾರು ಅಡಚಣೆಗಳಿಂದ ನನೆಗುದಿಗೆ ಬಿದ್ದಿದ್ದು ಇತಿಹಾಸ.

ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಡಾ.ಸಿ.ಸೋಮಶೇಖರ್ ರವರು ಕೇಂದ್ರೀಯ ವಿದ್ಯಾಲಯದ ಸುತ್ತ-ಮುತ್ತಲಿನ ಜಮೀನನ್ನು ಅಭಿವೃದ್ಧಿ ಪಡಿಸಲು ಒಂದು ಒಳ್ಳೆಯ ಯೋಜನೆ ರೂಪಿಸಲು ನನ್ನೊಂದಿಗೆ ಸಮಾಲೋಚನೆ ನಡೆಸಿದ್ದು ‘ವಿಜ್ಞಾನಗುಡ್ಡ’ಕ್ಕೆ ಮುನ್ನುಡಿ ಬರೆಯಲಾಗಿತ್ತು.

ತುಮಕೂರು ಜಿಲ್ಲಾಧಿಕಾರಿಯಾಗಿದ್ದ ರಾಜು ರವರು ವಿಜ್ಞಾನಗುಡ್ಡ’ಕ್ಕೆ ಅಧಿಕೃತಕವಾಗಿ ಚಾಲನೆ ನೀಡಿದರು. ತುಮಕೂರು ಉಪವಿಭಾಧಿಕಾರಿಯಾಗಿದ್ದ ಶ್ರೀ ನಕುಲ್ ರವರು ಗುಡ್ಡಹತ್ತಿ ಸುತ್ತಾಡಿ ನಕ್ಷೆ ಸಿದ್ಧಪಡಿಸಿದ್ದರು. ನಿರ್ಮಿತ ಕೇಂದ್ರಕ್ಕೂ ಜಮೀನು ಮಂಜೂರು ಮಾಡಿದ್ದರು.

ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದಾಗ ಶ್ರೀ ಸಿದ್ಧರಾಮಯ್ಯನವರು ಕಾಯರ್ ಪಾರ್ಕ್‍ಗೆ ರೂ 2 ಕೋಟಿ ಅನುದಾನವನ್ನು ಮೀಸಲಿಡುವ ಮೂಲಕ ವಿಜ್ಞಾನ ಗುಡ್ಡದಲ್ಲಿ ಸರ್ಕಾರಿ ಯೋಜನೆಗೆ ಚಾಲನೆ ನೀಡಿದ್ದರು.

ನಂತರ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಸತ್ಯಮೂರ್ತಿಯವರು ಬಂದಾಗ ಹೆಚ್.ಎ.ಎಲ್ ಜಮೀನು ವಿಚಾರದಲ್ಲಿ ನನಗೂ ಅವರಿಗೂ ನಡೆದ ಮಾತುಕತೆಯಿಂದ ನನ್ನ ಮೇಲೆ ಬೇಸರಗೊಂಡು ವಿಜ್ಞಾನ ಗುಡ್ಡಕ್ಕೆ ಮಂಗಳ’ ಹಾಡಿದರು.

ಬಸವರಾಜ್ ರವರ ಅವಧಿಯಲ್ಲಿ, ಕೇಂದ್ರ ಸಚಿವ ಶ್ರೀ ಕೆ.ಹೆಚ್.ಮುನಿಯಪ್ಪನವರನ್ನು ಕೇಂದ್ರೀಯ ವಿದ್ಯಾಲಯದ ಉದ್ಗಾಟನೆಗೆ ಕರೆಸಿದ್ದಾಗ, ಸಮಾರಂಭದಲ್ಲಿ ಈಗಿನ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ಶ್ರೀ ವಿ.ಸೋಮಣ್ಣವರು ಹಾಜರಿದ್ದರು. ಬಸವರಾಜ್‍ರವರು ಮನವಿ ಮಾಡಿದ ಹಿನ್ನಲೆಯುಲ್ಲಿ 100 ಕೋಟಿ ವೆಚ್ಚದ ಎಂ.ಎಸ್.ಎಂ.ಇ ಟೆಕ್ನಾಲಾಜಿ ಸೆಂಟರ್ ಮಂಜೂರು ಮಾಡಿದ್ದರು.  15 ಎಕರೆ ಜಮೀನು ಮಂಜೂರು ಹಂತದಲ್ಲಿ ಇದ್ದಾಗ,  ಶ್ರೀ ಎಸ್.ಪಿ.ಮುದ್ದಹನುಮೇಗೌಡರು ಲೋಕಸಭಾ ಸದಸ್ಯರಾದಾಗ ಶ್ರೀ ಸತ್ಯಮೂರ್ತಿಯವರು 15 ಎಕರೆ ಜಮೀನು ಮಂಜೂರು ಮಾಡಿದ್ದರು.

ಬಸವರಾಜ್ ರವರ ಮನವಿ ಮೇರೆಗೆ, ಮಾಜಿ ಮುಖ್ಯಮಂತ್ರಿಯವರಾಗಿದ್ದ ಶ್ರೀ ಜಗದೀಶ್ ಶೆಟ್ಟರ್ ರವರು ವಿಜ್ಞಾನ ಗುಡ್ಡದ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದರು.

ಗುಡ್ಡದ ಸುತ್ತಲೂ ರಿಂಗ್ ರಸ್ತೆ ಮಾಡಲು ಆಗಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಶ್ರೀ ಹೆಚ್.ಕೆ.ಪಾಟೀಲ್ ರವರು, ಬಸವರಾಜ್ ರವರ ಮನವಿ ಮೇರೆಗೆ ಆದೇಶ ಮಾಡಿದ್ದರು.

ಬಸವರಾಜ್ ರವರ ಅವಧಿಯಲ್ಲಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್ ಎಕ್ಟ್‍ಟೆನ್ಷನ್ ಸೆಂಟರ್ ಗೆ ಸುಮಾರು 40 ಎಕರೆ ಜಮೀನು ಪ್ರಸ್ತಾವನೆಯನ್ನು ಶ್ರೀ ನಕುಲ್ ರವರು  ಸಿದ್ಧಪಡಿಸಿದ್ದರು.  ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ.ಪಿ.ಮೋಹನ್‍ರಾಜು ರವರು ವಸತಿ ರಹಿತರ ನಿವೇಶಗಳಿಗೆ ಜಮೀನು ಹಂಚಿಕೆ ಮಾಡಿದ್ದಾರೆ.

ನಂತರ ತುಮಕೂರು ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ರಾಕೇಶ್ ಕುಮಾರ್ ರವರು ಜಿ.ಎಸ್.ಬಸವರಾಜ್ ರವರು ಮಂಜೂರು ಮಾಡಿಸಿದ್ದ ಇ.ಎಸ್.ಐ ಆಸ್ಪತ್ರೆಗೆ 9 ಎಕರೆ ಜಮೀನು ಮತ್ತು ಮುಖ್ಯಮಂತ್ರಿಯವರಾಗಿದ್ದ ಶ್ರೀ ಬಸವರಾಜ್ ಬೊಮ್ಮಾಯಿರವರು ತುಮಕೂರಿಗೆ ಬಂದಿದ್ದಾಗ, ಜೊತೆಯಲ್ಲಿ ಇದ್ದ ಆರೋಗ್ಯ ಸಚಿವರಾದ ಶ್ರೀ ಸುಧಾಕರ್ ರವರು ಸೇರಿ, ತುಮಕೂರಿಗೆ ಜಯದೇವ ಹೃದಯ ಆಸ್ಪತ್ರೆ ಘಟಕ ಮಂಜೂರು ಮಾಡುವುದಾಗಿ ಘೋಷಣೆ ಮಾಡಿದ್ದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಗೂ 6 ಎಕರೆ ಜಮೀನು ಮಂಜೂರು ಮಾಡಿದ್ದರು.

ಬಹುತೇಕ ಎಲ್ಲಾ ಯೋಜನೆಗಳಿಗೂ ಕ್ರಷರ್ ಲಾಭಿಯಿಂದ ಗ್ರಹಣ ಬಡಿದಿತ್ತು, ತುಮಕೂರು ವಿಶ್ವ ವಿದ್ಯಾನಿಲಯದ ವಿ.ಸಿ.ಯವರಾದ ಶ್ರೀ ಎಂ.ವೆಂಕಟೇಶ್ವರಲುರವರು ನಾನು ಮಾತನಾಡುವಾಗ, ವಿ.ವಿ.ಸಿಟಿ ಕ್ಯಾಂಪಸ್ ಅನ್ನು ನ್ಯಾಯಾಲಯಕ್ಕೆ ಕೇಳುತ್ತಿದ್ದಾರೆ.

ಬೇರೆ ಕಡೆ ಸರ್ಕಾರಿ ಜಮೀನು ಇದ್ದರೆ ನ್ಯಾಯಾಲಯಕ್ಕೆ ಜಮೀನು ಕೊಡಬಹುದಲ್ಲಾ ಎಂದಾಗ ನಾನು ಸುಮಾರು 4-5 ಕಡೆ ಸರ್ಕಾರಿ ಜಮೀನಿನ ಮಾಹಿತಿಯನ್ನು ಅವರಿಗೆ ನೀಡಿದೆ. ಅವರು ನ್ಯಾಯಾಧೀಶರಿಗೆ ಸರ್ಕಾರಿ ಜಮೀನುಗಳ ಮಾಹಿತಿ ನೀಡಿದ್ದರು.

 ವಕೀಲರಾದ ಶ್ರೀ ಸಿ.ಕೆ.ಮಹೇಂದ್ರರವರು ಸಹ ನ್ಯಾಯಾಲಯದ ಜಮೀನು ಬಗ್ಗೆ ನನ್ನೊಂದಿಗೆ ಸಮಾಲೋಚನೆ ನಡೆಸಿದರು, ಅವರಿಗೂ ಸಹ ಸರ್ಕಾರಿ ಜಮೀನುಗಳ ಮಾಹಿತಿ ನೀಡಿದೆ. ಅವರು ಸಹ ಬೇತಾಳವಾಗಿ ನನಗೆ ಕಾಡಿದರು.

ಪ್ರಜಾಪ್ರಗತಿ ಸಂಪಾದಕರಾದ ಶ್ರೀ ನಾಗಣ್ಣನವರೊಂದಿಗೂ ಸಮಾಲೋಚನೆ ಮಾಡಲಾಗಿತ್ತು. ಸಾ.ಚಿ.ರಾಜಕುಮಾರ್ ರವರು ಸರಣಿ ಸುದ್ದಿಗಳನ್ನು ಬರೆಯುವ ಮೂಲಕ ಬಹುತೇಕ ಎಲ್ಲಾ ರಾಜಕಾರಣಿಗಳ ಅನಿಸಿಕೆಗಳನ್ನು ಬರೆಯುವ ಮೂಲಕ ಜಾಗೃತಿ ಮೂಡಿಸಿದ್ದರು. ಬಹುತೇಕ ಎಲ್ಲಾ ಮಾಧ್ಯಮ ಮಿತ್ರರರು ಬೆಂಬಲಿಸಿದ್ದರು.

ನಂತರ ಮತ್ತೆ ಶುರುವಾಯಿತು ವಿಜ್ಞಾನಗುಡ್ಡದ ಜಮೀನಿಗೆ ಗುರುಬಲ, ಕರ್ನಾಟಕ ರಾಜ್ಯದ ಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಪತ್ರ ಬರೆದು ಮನವಿ ಮಾಡಿದೆ. ಅಂದಿನಿಂದ ಇಲ್ಲಿಯವರೆಗೂ ಕಡತದ ಅನುಸರಣೆಯನ್ನು ನಿರಂತರವಾಗಿ ಮಾಡಿದೆ. ಪ್ರತಿಯೊಂದು ಮಾಹಿತಿಯನ್ನು ವಿಸಿಯವರಿಗೆ ಅಫ್‍ಡೇಟ್ ಮಾಡುತ್ತಾ ಬಂದೆ.

ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಕಾನೂನು ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು , ಕಂದಾಯ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ಶ್ರೀ ವಿ.ಸೋಮಣ್ಣವರು, ಮಾಜಿ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಸುರೇಶ್ ಗೌಡರು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು.

ಮುಖ್ಯ ಕಾರ್ಯದರ್ಶಿರವರಿಗೂ, ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೂ, ತುಮಕೂರು ಜಿಲ್ಲಾಧಿಕಾರಿ ಶ್ರೀಮತಿ ಶುಭಕಲ್ಯಾಣ್ ರವರು, ತುಮಕೂರು ಉಪವಿಭಾಗಾಧಿಕಾರಿ ಶ್ರೀಮತಿ ನಹಿದಾ ಝಮ್, ಝಮ್ ರವರು, ತುಮಕೂರು ತಹಶೀಲ್ಧಾರ್ ಶ್ರೀಮತಿ ರಾಜೇಶ್ವರಿರವರು ಮತ್ತು ಶ್ರಮಿಸಿದ ಅವರ ತಂಡಕ್ಕೂ ಅಭಿನಂದನೆಗಳು.

ಉಪಲೋಕಾಯುಕ್ತರು, ನ್ಯಾಯಾಧೀಶರು, ತುಮಕೂರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಪಾತ್ರ ನಿಜಕ್ಕೂ ಶ್ಲಾಘನೀಯ.

ವಿಜ್ಞಾನ ಗುಡ್ಡಕ್ಕೆ ಹತ್ತಿರದ ಕ್ರಷರ್ ಮಾಲೀಕರಾದ ಶ್ರೀ ದಿಲೀಪ್ ಕುಮಾರ್ ಜೊತೆ ಸಮಾಲೋಚನೆ ನಡೆಸಿದೆ, ಕೇಂದ್ರೀಯ ವಿದ್ಯಾಲಯದ ಹಿಂದಿನ ಗುಡ್ಡದಲ್ಲಿ ನೀವೂ ಏನೇ ಮಾಡಿದರು, ಜಿಲ್ಲೆಯ 84 ಕ್ರಷರ್ ಗಳು ಸಹ ಕೈಜೋಡಿಸುತ್ತೇವೆ. ಆದರೇ ಹೊಸಹಳ್ಳಿ ಗುಡ್ಡದ ಕಡೆ ನಿಮ್ಮ ದೃಷ್ಠಿ ಬದಾಲಾಯಿಸಿ ಎಂಬ ಅನಿಸಿಕೆ ವ್ಯಕ್ತ ಪಡಿಸಿದ್ದರು. ಸಾಕ್ಷಿಯಾಗಿ ತುಮಕೂರು ಡೈರಿ ಮಾಜಿ ಅಧ್ಯಕ್ಷರಾದ ಗೋಪಾಲಪುರದ  ಶ್ರೀ ಚಂದ್ರಶೇಖರ್ ರವರು ಇದ್ದರು.

ಈಗ ಕಾನೂನು ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ. ಮುಂದೆ ಕೇಂದ್ರೀಯ ವಿದ್ಯಾನಿಲಯದ ಹಿಂದಿನ ಗುಡ್ಡದ ಸುತ್ತ ಇರುವ ಸರ್ಕಾರಿ ಜಮೀನು ಮತ್ತು ಗುಡ್ಡದ ಮೇಲೆ ಇರುವ 20 ಎಕರೆ ಸಮತಟ್ಟು ಜಮೀನಿನನಲ್ಲಿ ತುಮಕೂರು ವಿಶ್ವ ವಿದ್ಯಾನಿಲಯದ ಮೂಲಕ ವಿಜ್ಞಾನ ಗುಡ್ಡದ’ ಮುಂದಿನ ಉದ್ದೇಶಗಳಿಗೆ ಶ್ರಮಿಸುವುದೋ ಅಥವಾ ಲಾ ಮ್ಯೂಸಿಯಂ’ ಮಾಡುವ ಮೂಲಕ, ‘ನ್ಯಾಯಾಲಯದ ಗುಡ್ಡ’ ಮಾಡುವುದೋ ಕಾದು ನೋಡಬೇಕಿದೆ.  

ಇನ್ನೂ ಅನೇಕ ಯೋಜನೆಗಳಿಗೆ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿದೆ ಎಂಬ ಸುದ್ದಿ ಇದೆ. ನನಗೆ ಅದರ ಮಾಹಿತಿ ಇಲ್ಲ. ಈಗ ಮತ್ತೆ ಸರ್ಕಾರಿ ಜಮೀನುಗಳ ಸಂಶೋಧನೆ ಆರಂಭವಾಗಿದೆ.  ಸಚಿವರುಗಳಾದ ಪರಮೇಶ್ವರ್‍ರವರು ಮತ್ತು ಸೋಮಣ್ಣನವರು ಮನಸ್ಸು ಮಾಡಿದರೆ ಅಂತರರಾಷ್ಟ್ರೀಯ ಮಟ್ಟದ ಅಗ್ರಿಹಬ್’ ತುಮಕೂರು ಸುತ್ತ ಮುತ್ತ ರಾರಾಜಿಸಲಿದೆ. ಇಬ್ಬರಿಗೂ ಮನವಿ ಮಾಡಲಾಗಿದೆ.

 ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಸುರೇಶ್ ಗೌಡರವರು ಮತ್ತು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಈ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ಶಾಸಕರೊಂದಿಗೂ ಸಮಾಲೋಚನೆ ನಡೆಸ ಬೇಕಿದೆ.

ಮುಖ್ಯ ಕಾರ್ಯದರ್ಶಿಯವರು, ಅಂತರರಾಷ್ಟ್ರೀಯ ಮಟ್ಟದ ಅಗ್ರಿಹಬ್’ ನಿರ್ಮಾಣ ಮಾಡುವ ಬಗ್ಗೆ, ವರದಿ ನೀಡಲು ಈಗಾಗಲೇ ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳು ಸಹ, ಒಂದೊಂದು ಕಳೆ-ಬೆಳೆ ಸಂಶೋಧನೆ ಹೊಣೆಗಾರಿಕೆ ಪಡೆಯುವ ಮೂಲಕ ಸಹಕರಿಸುವುದು ಅಗತ್ಯವಾಗಿದೆ.

–              ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ.