TUMAKURU:SHAKTHI PEETA FOUNDATION
ರಾಜ್ಯಾದ್ಯಾಂತ ರಚಿಸುತ್ತಿರುವ 1120 ಕೃಷಿ ಆಶ್ರಮಗಳು, ತಲಾ ಒಂದೊಂದು ಕಳೆ-ಬೆಳೆ ಆಯ್ಕೆ ಮಾಡಿಕೊಂಡು, ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳ ಉದ್ಯಮ, ಸಂಶೋಧನೆ, ಸ್ಟಾರ್ಟ್ ಅಫ್, ನಾಲೇಡ್ಜ್ ಬ್ಯಾಂಕ್, ಮ್ಯೂಸಿಯಂ, ಕ್ಲಸ್ಟರ್, ರೈತ ವಿಜ್ಞಾನಿ, ರೈತ ಡಾಕ್ಟರೇಟ್ ಪಡೆಯುವವರೆಗೂ ರೈತರು ಶ್ರಮಿಸಲು ಸಜ್ಜಾಗುತ್ತಿದ್ದಾರೆ.
ಪೈಲಟ್ ಯೋಜನೆಯಾಗಿ ನುಗ್ಗೆ ಬೆಳೆ ಆಯ್ಕೆ ಮಾಡಿಕೊಂಡು, ಸಾಧಕ-ಬಾಧಕಗಳನ್ನು ನೋಡಲು ವನಲೋಕ ಫೌಂಡೇಷನ್‍ನಲ್ಲಿ ನಡೆದ ಕೃಷಿ ಆಶ್ರಮಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕೃಷಿ ಆಶ್ರಮಗಳ ಹರಿಕಾರರಾದ ವಿಜಯನಗರ ಜಿಲ್ಲೆಯ ಡಾ.ಬಿ.ಎಂ. ನಾಗಭೂಷಣ್ ರವರು ವಾಟ್ಸ್ ಅಫ್ ಗ್ರೂಪ್ ರಚಿಸಿ, ರಾಜ್ಯಾಧ್ಯಾಂತ ನುಗ್ಗೆ ಬೆಳೆಗಾರರನ್ನು ಸಂಘಟಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಡಾ.ಜಗನ್ನಾಥ್ ರವರು ನುಗ್ಗೆ ಬೆಳೆಯ ನಾಲೇಡ್ಜ್ ಬ್ಯಾಂಕ್ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ. ಬೀದರ್ ಜಿಲ್ಲೆಯ ಡಾ. ಸಂತೋಷ್ ರವರು ಮಾರುಕಟ್ಟೆ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಡಾ.ರೂಪರವರು ಪ್ರಾಜೆಕ್ಟ್ ನಿರ್ದೆಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ನುಗ್ಗೆ ರೈತೋಧ್ಯಮಿಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಶಿವಕುಮಾರ್‍ರವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂಬಳಗೋಡು ಶ್ರೀ ಮಧುರನಾಥ್ ರವರು ನುಗ್ಗೆ ಬೆಳೆ ಹೊಣೆಗಾರಿಕೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಸುಹೃತ್ ರವರು ನುಗ್ಗೆ ಬೆಳೆಯ ಸ್ಟಾರ್ಟ್ ಅಫ್ ಅವಕಾಶಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ರೈತರಿಗೆ ನುಗ್ಗೆ ಬೆಳೆಯ ಬಗ್ಗೆ ಸಲಹಾಗಾರರಾಗಿ ಸೇವೆ ಸಲ್ಲಿಸುವ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನು ಸಹ ಮಾಡುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನುಗ್ಗೆ ಬೆಳೆ ರೈತರಿಗೆ ಏನೇನು ಸೌಲಭ್ಯ ದೊರಕಿಸ ಬಹುದು ಎಂಬ ಬಗ್ಗೆ ಶಕ್ತಿಪೀಠ ಫೌಂಡೇಷನ್ ಸರ್ಕಾರಗಳೊಂದಿಗೆ ಪತ್ರ ವ್ಯವಹಾರ ಆರಂಭಿಸಿದೆ.

ಆಸಕ್ತರು ಪ್ರತಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ವನಲೋಕ ಫೌಂಡೇಷನ್ ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ ಜ್ಞಾನ ಹಂಚಿಕೊಳ್ಳಬಹುದು.