TUMAKURU:SHAKTHI PEETA FOUNDATION
ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸ್ಯಾಕ್) ಯಲ್ಲಿ, ‘ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಶ್ರೀ ಅಶೋಕ್ ದಳವಾಯಿರವರ ಅಧ್ಯಕ್ಷತೆಯಲ್ಲಿ’, ರಾಜ್ಯದ 1120 ಕೃಷಿ ಆಶ್ರಮಗಳ ನಿಯೋಗದ ಸಮಾಲೋಚನೆ ಸಭೆ ದಿನಾಂಕ:03.10.2025 ರಂದು ನಡೆಯಿತು.
‘ಟ್ರೆಡಿಷನಲ್ ನಾಲೇಡ್ಜ್ ಕೃಷಿ ಮರು ಸ್ಥಾಪಿಸಲು’ ಕೇಂದ್ರ ಸರ್ಕಾದ ‘ಗತಿಶಕ್ತಿ ಯೋಜನೆ’ ಜಾರಿಗೊಳಿದ ಮಾದರಿಯಲ್ಲಿ, ರೈತರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ನಿಗಮಗಳು, ಬೋರ್ಡ್, ಕಾರ್ಪೋರೇಷನ್, ಎಸ್.ಪಿ.ವಿ ಗಳನ್ನು ಒಂದೇ ರೂಪ್ ನಡಿ ತಂದು ‘ರೈತ ಶಕ್ತಿ / ರೈತ ಗ್ಯಾರಂಟಿ’ ಯೋಜನೆ ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಯಿತು.

ಈ ಸಭೆಯಲ್ಲಿ ‘ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ. ಶ್ರೀಮತಿ ಎಸ್.ಎಂ. ರಾಜೇಶ್ವರಿರವರು’ ಅಧಿಕಾರಿ ಡಾ.ನಾಗನಗೌಡ ರೆಡ್ಡಿರವರು, ಕೃಷಿ ಆಶ್ರಮಗಳ ವಿಜಯನಗರ ಜಿಲ್ಲೆಯ ಡಾ.ನಾಗಭೂಷಣ್ ರವರು, ಬಳ್ಳಾರಿ ಜಿಲ್ಲೆಯ ಡಾ.ಜಗನ್ನಾಥ್ ರವರು, ಮಂಡ್ಯ ಜಿಲ್ಲೆಯ ಶ್ರೀ ಮಹೇಶ್ ಮಳವಳ್ಳಿ ರವರು, ಶ್ರೀ ವೆಂಕಟೇಶ್ ರವರು, ಉತ್ತರ ಕನ್ನಡ ಜಿಲ್ಲೆಯ ಶ್ರೀ ಮಹೇಶ್ ಕುಮಾರ್ ರವರು ಮತ್ತು ತುಮಕೂರು ಜಿಲ್ಲೆಯ ಕುಂದರನಹಳ್ಳಿ ರಮೇಶ್ ರವರು ಭಾಗವಹಿಸಿದ್ದರು.

ಪ್ರಾಯೋಗಿಕವಾಗಿ 1120 ಬೆಳೆಗಳ ಯಶಸ್ವೀ ನಂತರ ಭೂಮಿಯ ಮೇಲೆ ಹುಟ್ಟುವ ಎಲ್ಲಾ ಕಳೆ-ಬೆಳೆಗಳಿಗೂ ಇದೇ ಮಾದರಿ ವಿಸ್ತರಣೆ ಮಾಡಲು ಚರ್ಚೆ ನಡೆಯಿತು. ಸಾವಯವ ಮತ್ತು ರಾಸಾಯನಿಕ ಬೆಳೆಗಳ ಲೈವ್ ಅವಲೋಕನಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.
ದೇಶ ವಿದೇಶಗಳ ಮಾದರಿ, ಕೇಂದ್ರ ಸರ್ಕಾರದ ಡಬ್ಬಲ್ ದಿ ಫಾರ್ಮರ್ ಇನ್‍ಕಮ್ ವರದಿ, ರೈತರ ಜಮೀನನಲ್ಲಿ ಮತ್ತು ಸರ್ಕಾರಿ ಜಮೀನುಗಳಲ್ಲೂ ‘ಕೃಷಿ ಆಶ್ರಮ ಅಥವಾ ಸರ್ಕಾರ ಸೂಚಿಸುವ ಯಾವುದೇ ಹೆಸರಿನ ಯೋಜನೆ’ ರೂಪಿಸಲು ಸಹ ಚರ್ಚೆ ನಡೆಯಿತು.
ಸಭೆಯ ಚರ್ಚೆಯ ನಂತರ ನಾನು ಮಾಡಿರುವ ಪಟ್ಟಿ ಇದಾಗಿದೆ. ಸಂಬಂಧಿಸಿದ ಇಲಾಖೆಗಳ, ಕೃಷಿ ಆಶ್ರಮಗಳ ಜ್ಞಾನಿಗಳ ಸಲಹೆಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸ ಬಹುದಾಗಿದೆ.
1. ಕೇಂದ್ರ ಸರ್ಕಾರದ ‘ಗತಿಶಕ್ತಿ ಯೋಜನೆ’ ಜಾರಿಗೊಳಿದ ಮಾದರಿಯಲ್ಲಿ, ರೈತರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು, ನಿಗಮಗಳು, ಬೋರ್ಡ್, ಕಾರ್ಪೋರೇಷನ್, ಎಸ್.ಪಿ.ವಿ ಗಳನ್ನು ಒಂದೇ ರೂಪ್ ನಡಿ ತಂದು ‘ರೈತ ಶಕ್ತಿ / ರೈತ ಗ್ಯಾರಂಟಿ’ ಯೋಜನೆ ರೂಪಿಸಲು ಉನ್ನತ ಮಟ್ಟದ ಸಮಿತಿ ರಚಿಸುವುದು.
2. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ, ಹಳಿವಿನ ಹಂಚಿನಲ್ಲಿರುವ ಹಾಗೂ ರೈತರ ಆದಾಯ ಹೆಚ್ಚಿಸುವಂತಹ ತಲಾ 5 ಕಳೆ-ಬೆಳೆಗ¼ನ್ನು ಹವಾಮಾನ ಆಧಾರಿತ ಗುರುತಿಸಿ ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಒಂದೊಂದು ಬೆಳೆಯಂತೆ 1120 ಕಳೆ-ಬೆಳೆಗಳನ್ನು ಹಂಚಿಕೆ ಮಾಡುವುದು.
3. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ತಲಾ 5 ಗ್ರಾಮಪಂಚಾಯಿತಿಗಳ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ತಲಾ 30 ಜನರಿಗೆ ಕಡಿಮೆ ಇಲ್ಲದಂತೆ ನಾಲೇಡ್ಜಬಲ್ ಪರ್ಸನ್‍ಗಳ ಸಭೆ ಆಯೋಜಿಸಿ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಲು ಅನುಮತಿ ನೀಡುವುದು. ನಂಬರ್ ಒನ್ ಕರ್ನಾಟಕ ಘೋಷಣೆಯಡಿ, ಅವರವರ ವ್ಯಾಪ್ತಿಯ ಅಭಿವೃದ್ದಿ ಯೋಜನೆಗಳ ಬಗ್ಗೆಯೂ ಚಚರ್ರಸಲು ರೂಪುರೇಷೆ ನಿರ್ಧರಿಸಬೇಕಿದೆ. (ಗ್ರಾಮ ಪಂಚಾಯಿತಿ ರೂ 25000, ಪಟ್ಟಣ ಪಂಚಾಯಿತಿ ರೂ 30000, ಪುಸಭೆ ರೂ 35000, ನಗರಸಭೆ ರೂ 40000 ಮತ್ತು ಮಹಾನಗರ ಪಾಲಿಕೆಗಳು ರೂ 50000 ವಾರ್ಷಿಕ ಒಂದೊಂದು ಕಾರ್ಯಕ್ರಮಕ್ಕೆ ಅನುದಾನ ಮಂಜೂರು ಮಾಡುವುದು.
4. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ತಲಾ 5 ಗ್ರಾಮಪಂಚಾಯಿತಿಗಳ ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಲ್ಲಿರುವ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್‍ಗಳ ಸಭೆ ಆಯೋಜಿಸಿ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಲು ಅನುಮತಿ ನೀಡುವುದು. ಶಾಲಾ ಕಾಲೇಜುಗಳು ಒಂದೊಂದು ಕಾರ್ಯಕ್ರಮಕ್ಕೆ ರೂ 5000 ಅಥವಾ ಒಬ್ಬೊಬ್ಬ ವಿದ್ಯಾರ್ಥಿಗೆ ರೂ 300 ನಿಗಧಿ ಪಡಿಸುವುದು.
5. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಭೇಟಿ ನೀಡುವ ಅಥವಾ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ನೀಡುವ ಸಂಪನ್ಮೂಲ ವ್ಯಕ್ತಿಗಳಿಗೆ ರೂ 3000 ಸಂಭಾವನೆ ನಿಗಧಿ ಪಡಿಸುವುದು.
6. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ತಲಾ 5 ಗ್ರಾಮಪಂಚಾಯಿತಿಗಳ ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮೌಲ್ಯವರ್ಧಿತ ಉತ್ಪನ್ನಗಳ ಉದ್ಧಿಮೆದಾರರ ಸಭೆ ಆಯೋಜಿಸಿ ಪ್ರಗತಿ ಬಗ್ಗೆ ಸಮಾಲೋಚನೆ ನಡೆಸಲು ಅನುಮತಿ ನೀಡುವುದು.
7. ಹಳ್ಳಿಯಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ, ನಿರ್ಧಿಷ್ಟ ಬೆಳೆಯ ನಾಲೇಡ್ಜ್ ಬ್ಯಾಂಕ್ (ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿ) ಸ್ಥಾಪಿಸಲು ಒಂದು ವಿಶ್ವ ವಿದ್ಯಾನಿಲಯದ ಜೊತೆ ಒಡಂಬಡಿಕೆ ಮಾಡಿಸುವುದು.
8. ರಾಜ್ಯದ್ಯಾಂತ 1120 ಬೆಳೆ-ಕಳೆಗಳ ಹೊಣೆಗಾರಿಕೆ ಪಡೆಯುವ ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಒಂದೇ ಮಾದರಿಯ ಬಹುಪಯೋಗಿ ಕಟ್ಟಡವನ್ನು ನಿರ್ಮಾಣ ಮಾಡುವುದು.
9. ರೈತರೆ ಅವರಿಗೆ ಸೂಕ್ತ ಎನಿಸಿದ ಒಬ್ಬ ಡಾಕ್ಟರೇಟ್ ವ್ಯಕ್ತಿ ಮತ್ತು ಕಳೆ-ಬೆಳೆಗೆ ಸಂಭಂದಿಸಿದ ಒಬ್ಬ ಅಧಿಕಾರಿಯನ್ನು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿಕೊಳ್ಳುವುದು.
10. ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ ಅವರವರ ವ್ಯಾಪ್ತಿಯ ಅಥವಾ ಹೆಚ್ಚುವರಿ 224 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡುವುದು. ವಿಶ್ವ ವಿದ್ಯಾನಿಲಯಗಳುÀ ಹತ್ತಿರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್, ಐಎಸ್‍ಆರ್, ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್ಸ್, ಪಿಹೆಚ್‍ಡಿ, ಎನ್.ಎಸ್.ಎಸ್ ಸೇವೆಗಳಿಗೆ ನಿರ್ಧಿಷ್ಟ ರೈತರಿಗೆ ನಿಗಧಿ ಪಡಿಸುವುದು.
11. ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಆರ್ ಸೆಟ್ಟಿಗಳಿಗೂ ಕೃಷಿ ಆಶ್ರಮಗಳ ವ್ಯಾಪ್ತಿ ಹಂಚುವುದು.
12. ರೈತ ಬೆಳೆ ಬೆಳೆಯುವುದು, ಮೌಲ್ಯವರ್ಧನೆ ಮಾಡುವುದು, ಮ್ಯೂಸಿಯಂ ಸ್ಥಾಪಿಸುವುದು, ಸಂಶೋಧನೆ ಮಾಡುವುದು, ಸ್ಟಾರ್ಟ್ ಅಫ್ ಸ್ಥಾಪಿಸುವುÀದು. ಕ್ಲಸ್ಟರ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು (ಇಲಾಖಾವಾರು ಎಲ್ಲಾ ಯೋಜನೆಗಳ ಪಟ್ಟಿ ಮಾಡಬೇಕಿದೆ) ವಿಶೇಷ ಆಧ್ಯತೆ ಮೇಲೆ ಮಂಜೂರು ಮಾಡುವುದು. ಜೊತೆಗೆ ಹಂತ ಹಂತವಾಗಿ ರೈತರಿಗೆ ಉಧ್ಯಮಿ, ಸ್ಟಾರ್ಟ್ ಅಫ್, ವಿಜ್ಞಾನಿ, ಡಾಕ್ಟರೇಟ್ ಪದವಿ ನೀಡಲು ಸಿಲಬಸ್ ಸಿದ್ಧಪಡಿಸುವುದು.
13. ಸಾವಯವ ಮತ್ತು ರಾಸಾಯನಿಕ ಕೃಷಿಗಳ ಖರ್ಚು ವೆಚ್ಚಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಮ್.ಎಸ್.ಪಿ ಆಧಾರಿತ ಮಾದರಿಯಲ್ಲಿ ನಿಖರವಾದ ಲೈವ್ ಡಾಟಾದೊಂದಿಗೆ ವಿಶ್ಲೇಷಣೆ ಮಾಡುವುದು.
14. ಕೇಂದ್ರ ಸರ್ಕಾರ ರಾಸಾಯಿನಿಕ ಗೊಬ್ಬರಗಳ ಮತ್ತು ಔಷಧಗಳಿಗೆ ನೀಡುವ ಸಹಾಯಧನದ ಮಾದರಿಯಲ್ಲಿ ಸಾವಯವ ಕೃಷಿ ಮಾಡುವವರಿಗೆ ಎಕರೆವಾರು, ಬೆಳೆವಾರು ಇಂತಿಷ್ಟು ಎಂದು ನಿಗಧಿ ಮಾಡಿ ಸಹಾಯಧನ ನೀಡುವುದು.
15. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಒಂದೊಂದು ಸಿ.ಎಸ್.ಆರ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಲು ಅವಕಾಶ ಕಲ್ಪಿಸುವುದು.
16. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳನ್ನು ಅಗ್ರಿಟೂರಿಸಂ ಘೋಷಣೆ ಮಾಡಿ, ಬ್ಯಾಂಕ್ ಸಾಲ ಮತ್ತು ಪ್ರವಾಸೋಧ್ಯಮ ಇಲಾಖೆ ಸಹಾಯಧನ ನೀಡುವುದು.
17. ಆಯಾ ಸರ್ವೀಸ್ ಏರಿಯಾ ಬ್ಯಾಂಕ್‍ಗಳು ಎ.ಐ.ಎಫ್ – ಅಗ್ರಿ ಕಲ್ಚರ್ ಇನ್‍ಪ್ರಾ ಸ್ಟ್ರಚ್ಚರ್ ಫಂಡ್ ಯೋಜನೆಯಡಿ ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಸಾಲ ಮಂಜೂರು ಮಾಡುವುದು. ಕಿಸಾನ್ ಕಾರ್ಡ್ ಗಳನ್ನು ನೀಡುವುದು, ಓಡಿ ಅಕೌಂಟ್ ಮಂಜೂರು ಮಾಡುವುದು.
18. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಸಂಭಂದಿಸಿದ ಇಲಾಖಾ ಅಧಿಕಾರಿಗಳು ಕರೆ ಮೇರೆಗೆ ಭೇಟಿ ನೀಡಿ ರೇಕಾರ್ಡ್ ಮಾಡುವುದು.
19. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಆಯಾ ವ್ಯಾಪ್ತಿಯ ಶಾಸಕರು, ಸಂಸದರ ಅನುದಾನದಡಿ ಗ್ರಂಥಾಲಯ ಕಟ್ಟಡಕ್ಕೆ ಅನುದಾನ ನೀಡುವುದು.
20. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ನಬಾರ್ಡ್ ಮತ್ತು ಕಲ್ಚರ್ ಇಲಾಖೆ ಕಳೆ-ಬೆಳೆವಾರು ಮ್ಯೂಸಿಯಂ ಸ್ಥಾಪಿಸಲು ಅನುದಾನ ನೀಡುವುದು.
21. ಒಬ್ಬೊಬ್ಬ ಆಸಕ್ತ ರೈತರಿಗೆ/ಕೃಷಿ ಆಶ್ರಮಗಳಿಗೆ ಆಯಾ ವ್ಯಾಪ್ತಿಯ ಸಹಕಾರ ಸಂಘಗಳು ಮ್ಯೂಸಿಯಂ ಸ್ಥಾಪಿಸಲು ಧರ್ಮ ನಿಧಿ ನೀಡುವುದು.
22. ಎಂಪಿಸಿಎಸ್ ಮಾದರಿಯಲ್ಲಿ ಫಾರ್‍ವರ್ಡ್ ಮತ್ತು ಬ್ಯಾಕ್‍ವರ್ಡ್ ಲಿಂಕೇಜ್ ವ್ಯವಸ್ಥೆ ಮಾಡಲು ಅವಕಾಶ ಕಲ್ಪಿಸುವುದು.
23. ಬೆಂಗಳೂರಿನ ವನಲೋಕ ಫೌಂಡೇಷನ್ ಸಹಭಾಗಿತ್ವದಲ್ಲಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೋಕಿನ, ಬಗ್ಗನಡು ಕಾವಲ್‍ನಲ್ಲಿ 1120 ಕಳೆ-ಬೆಳೆ ಲೈವ್ ಪ್ರಾತ್ಯಾಕ್ಷಿಕೆಗಳ ರಾಜ್ಯ ಮಟ್ಟದ ಮಾದರಿ ಕ್ಯಾಂಪಸ್ ನಿರ್ಮಾಣ ಮಾಡಲು ವಿಶೇಷ ಅನುದಾನ ನೀಡುವುದು.
24. ಬೆಂಗಳೂರಿನ ವನಲೋಕ ಫೌಂಡೇಷನ್ ಸಹಭಾಗಿತ್ವದಲ್ಲಿ, ತುಮಕೂರು ನಗರದಲ್ಲಿ 1120 ಕಳೆ-ಬೆಳೆ ರಾಜ್ಯ ಮಟ್ಟದ ಮಾನಿಟರಿಂಗ್ ಸೆಲ್ ಸ್ಥಾಪಿಸಲು ವಿಶೇಷ ಅನುದಾನ ನೀಡುವುದು.
25. ಬೆಂಗಳೂರಿನ ವನಲೋಕ ಫೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು ಜಿಲ್ಲೆಯ ವಸಂತನರಸಾಪುರದ, ತುಮಕೂರು ಇಂಡಸ್ಟ್ರಿಯಲ್ ನೋಡ್‍ನಲ್ಲಿ 1120 ಕಳೆ-ಬೆಳೆ ರಾಜ್ಯ ಮಟ್ಟದ ಮ್ಯೂಸಿಯಂ ಸ್ಥಾಪಿಸಲು ವಿಶೇಷ ಅನುದಾನ ನೀಡುವುದು.
26. ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ರಾಜ್ಯ ಮಟ್ಟದ ಕಚೇರಿ ಆರಂಭಿಸಲು ವಿಶೇಷ ಅನುದಾನ ನೀಡುವುದು.
27. ಸ್ಟಾಟ್‍ಅಫ್ ತುಮಕೂರು ಸಹಭಾಗಿತ್ವದಲ್ಲಿ 1120 ಕಳೆ-ಬೆಳೆ ರಾಜ್ಯ ಮಟ್ಟದ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ವಿಶೇಷ ಅನುದಾನ ನೀಡುವುದು.
28. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳನ್ನು ಗುರುತಿಸಿ, ಜಿಐಎಸ್ ಲೇಯರ್ ಮಾಡಲು ವಿಶೇಷ ಅನುದಾನ ನೀಡುವುದು.
29. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳನ್ನು ಸ್ಥಾಪಿಸಲು ಅವರವರ ಗ್ರಾಮದ ಎನ್.ಆರ್.ಐ ಗಳಿಂದ ಸಹಾಯ ಪಡೆಯಲು ರೂಪುರೇಷೆ ನಿರ್ಧರಿಸುವುದು.
30. ರಾಜ್ಯ ಮಟ್ಟದ ಕಚೇರಿ ನಿರ್ವಹಣೆಗಾಗಿ ಸಲಹಾಗಾರರಿಂದ, ಸಂಪನ್ಮೂಲ ವ್ಯಕ್ತಿಗಳಿಂದ, ಉದ್ಧಿಮೆದಾರರಿಂದ, ಅರ್ಹಪಲಾನುಭವಿಗಳಿಂದ ಸರ್ವೀಸ್ ಚಾರ್ಜು ಸಂಗ್ರಹ ಮಾಡಲು, ರಾಜ್ಯ ಮಟ್ಟದ ಸಮಿತಿಗೆ ಅನುಮತಿ ನೀಡುವುದು.
31. ವಿಶೇಷ ಆಧ್ಯತೆ ಮೇರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ ರೈತರ ಸಂಶೋಧನೆಗಳಿಗಾಗಿ ಅನುದಾನ ಮಂಜೂರು ಮಾಡುವುದು.
32. ವಿಶೇಷ ಆಧ್ಯತೆ ಮೇರೆಗೆ ರೈತರ ಎಲ್ಲಾ ಸಂಶೋಧನೆಗಳಿಗೆ ಸಂಭಂಧಿಸಿದ ಪ್ರಾಧಿಕಾರದಿಂದ ಅನುಮೋದನೆ ನೀಡುವುದು.
33. ವಿಶೇಷ ಆಧ್ಯತೆ ಮೇರೆಗೆ ರೈತರ ಎಲ್ಲಾ ಸಂಶೋಧನೆಗಳಿಗೆ ಸಂಭಂಧಿಸಿದ ಪ್ರಾಧಿಕಾರದಿಂದ ಪೇಟೆಂಟ್ ನೀಡುವುದು.
34. ರಾಜ್ಯದ ಎಲ್ಲಾ 224 ವಿಧಾನಸಭಾ ಸದಸ್ಯರ, 75 ಜನ ವಿಧಾನಸಭಾ ಸದಸ್ಯರ, 28 ಜನ ಲೋಕಸಭಾ ಸದಸ್ಯರ, 14 ಜನ ರಾಜ್ಯಸಭಾ ಸದಸ್ಯರ ಮತ್ತು 2 ದೆಹಲಿ ಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಅವರವರ ವ್ಯಾಪ್ತಿಯ, ಸಲಹಾ ಸಮಿತಿಗಳನ್ನು ರಚಿಸಿ ವಾರ್ಷಿಕ ಕನಿಷ್ಠ ಪಕ್ಷ ಒಂದೊಂದು ಸಭೆ ಆಯೋಜಿಸುವುದು.
35. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳಿಗೆ ರ್ಯಾಂಕಿಂಗ್ ನೀಡಲು ರೂಪುರೇಷೆ ನಿರ್ಧರಿಸುವುದು.
36. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳಿಗೆ ಅವಾರ್ಡ್ ನೀಡಲು ರೂಪುರೇಷೆ ನಿರ್ಧರಿಸುವುದು.
37. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳಿಗೆ ತರಬೇತಿ ನೀಡಲು ರೂಪುರೇಷೆ ನಿರ್ಧರಿಸುವುದು.
38. 1120 ಕಳೆ-ಬೆಳೆಗಳ ಆಸಕ್ತ ರೈತರ/ಕೃಷಿ ಆಶ್ರಮಗಳ ಮೂಲಕ, ಆಯಾ ವ್ಯಾಪ್ತಿಯ ಗ್ರಾಮ/ಬಡಾವಣೆಗಳ ವ್ಯಾಪ್ತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕನಿಷ್ಠ 5 ಉತ್ತಮ ಆಮ್ಲಜನಕ ಗಿಡಗಳನ್ನು ಒಂದೇ ದಿವಸ ಹಾಕಿ ಯಾವುದಾದರೂ ವಿಶ್ವ ಮಟ್ಟದ ರೆಕಾರ್ಡ್ ಮಾಡಲು ಯೋಜನೆ ರೂಪಿಸುವುದು.
39. ರೈತ ಶಕ್ತಿ/ರೈತ ಗ್ಯಾರಂಟಿ ನಿಧಿ ಸ್ಥಾಪಿಸುವುದು.
40. ರೈತ ಶಕ್ತಿ/ರೈತ ಗ್ಯಾರಂಟಿ ಯೋಜನೆಯ ವ್ಯಾಪ್ತಿಯ ಎಲ್ಲಾ ಇಲಾಖೆಗಳ, ಜ್ಞಾನಿಗಳ ಮತ್ತು ಕೃಷಿ ಆಶ್ರಮಗಳ ಕಾರ್ಯಾಗಾರ ನಡೆಸುವ ಮೂಲಕ, ಪಟ್ಟಿಯಲ್ಲಿರುವ ಪ್ರತಿಯೊಂದು ಅಂಶಗಳ ಬಗ್ಗೆ ಚರ್ಚೆ ನಡೆಸಿ, ಅಗತ್ಯ ಅಂಶಗಳನ್ನು ಸೇರ್ಪಡೆ ಮಾಡುವುದು, ಅನಗತ್ಯ ಅಂಶಗಳನ್ನು ಕೈಬಿಡಬಹುದಾಗಿದೆ.
ವಿಶೇಷ ಸೂಚನೆ
• ಕೃಷಿ ಆಶ್ರಮಗಳ ವಿವರ ಮತ್ತು ಯೋಜನೆಗಳ ಮಾಹಿತಿಯನ್ನು ಡಾ.ನಾಗಭೂಷಣ್ ರವರು ಮತ್ತು ಅವರ ತಂಡ ಸಿದ್ಧಪಡಿಸುತ್ತಿದ್ದಾರೆ. ಶೀಘ್ರದಲ್ಲಿ ಸಲ್ಲಿಸಲಾಗುವುದು.
• ಇಲಾಖಾವಾರು 1120 ಪ್ರಭೇಧಗಳ ಪಟ್ಟಿಯನ್ನು ಡಾ.ಜಗನ್ನಾಥ್ ರಾವ್‍ರವರು ಮತ್ತು ಅವರ ತಂಡ ಸಿದ್ಧಪಡಿಸುತ್ತಿದ್ದಾರೆ. ಶೀಘ್ರದಲ್ಲಿ ಸಲ್ಲಿಸಲಾಗುವುದು.
• ತುಮಕೂರಿನ ಶಕ್ತಿಪೀಠ ಫೌಂಡೇಷನ್ ಗ್ರಾಮ ಪಂಚಾಯಿತಿಯಿಂದ – ವಿಶ್ವ ಸಂಸ್ಥೆವರೆಗೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ವ್ಯವಹರಿಸುವ ಹೊಣೆಗಾರಿಕೆಯೊಂದಿಗೆ, ರಾಜ್ಯದ ಎಲ್ಲಾ ಕೃಷಿ ಆಶ್ರಮಗಳ ಪರವಾಗಿ ಈ ಮನವಿಯನ್ನು ಸಲ್ಲಿಸಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)