TUMAKURU:SHAKTHI PEETA FOUNDATION
ಮಹಾರಾಷ್ಟ್ರದ ಕನ್ನೇರಿ ಶ್ರಿಗಳ ಪರಮಭಕ್ತರು ಹಾಗೂ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ, ಅವರ ಬೆಂಗಳೂರು ಕಚೇರಿಗೆ ಆಹ್ವಾನಿಸಿದರು. ಅಲ್ಲಿ ಕೃಷಿ ಆಶ್ರಮಗಳ ಬಗ್ಗೆ, ‘ಕನ್ನೇರಿ ಶ್ರೀಗಳ ಎಕೆ-47 ಮಾದರಿಯ ರೈತ ಉಪನ್ಯಾಸಗಳ’ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಯಿತು.
ಅವರು ಒಂದು ಮಹತ್ವದ ನಿರ್ಧಾರ ಪ್ರಕಟಿಸಿದರು, ರಾಜ್ಯದ ವ್ಯಾಪ್ತಿಯಲ್ಲಿ ಅಥವಾ ಒಂದು ಜಿಲ್ಲೆಯ ವ್ಯಾಪ್ತಿಯಲ್ಲಿ ಅಥವಾ ಒಂದು ವಿಧಾನಸಭಾ ಕ್ಷೇತ್ರದಲ್ಲಿ, 108 ಜನ ಅತ್ಯಂತ ಕಡು ಬಡವರು, ಭೂ ರಹಿತರುÀ, ನಿರ್ಗತಿಕರು ಅಥವಾ ಅನೂಕೂಲಸ್ಥರು ಯುವ ರೈತ ವಿಜ್ಞಾನಿಗಳಾಗಲು, ರೈತ ಡಾಕ್ಟರೇಟ್ ಪಡೆಯಲು ಆಸಕ್ತಿ ಇರುವವರನ್ನು ಕೃಷಿ ಆಶ್ರಮ ಯೋಜನೆಯಡಿ, ದತ್ತು ಪಡೆದು ಎ-ಟು ಝಡ್ ಮೂಲಭೂತ ಸೌಕರ್ಯ ಕಲ್ಪಿಸಿ, ನಿರಂತರವಾಗಿ ಮಾನಿಟರಿಂಗ್ ಮಾಡಿ, ಒಂದು ವಿಶ್ವ ದಾಖಲೆಯಾಗುವಂತಹ ಯೋಜನೆ ಕೈಗೊಳ್ಳ ಬೇಕೆಂದಿದ್ದೇನೆ.
‘ಕೃಷಿ ಆಶ್ರಮಗಳ ಜ್ಞಾನಿಗಳ ಮೂಲಕ, ಒಂದು ರೂಪುರೇಷೆ ಕೊಡಿ ಎಂಬ ಅವರ ನಿಖರವಾದ ಮಾತು ನನ್ನನ್ನು ಮೂಕ ವಿಸ್ಮೀತನನ್ನಾಗಿ ಮಾಡಿಸಿದೆ’
ಅವರಿಗೆ ನಾನೊಂದು ಸಲಹೆ ನೀಡಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ಜನರಂತೆ 1120 ಕೃಷಿ ಆಶ್ರಮಗಳನ್ನು ಆರಂಭಿಸಲು ಆಸಕ್ತಿ ಇರುವ ರೈತರ ಜಿ.ಐ.ಎಸ್ ಲೇಯರ್ ಮಾಡುವ ಜೊತೆಗೆ, ನಮ್ಮ ತಂಡ ಖದ್ಧಾಗಿ ಸ್ಥಳ ಪರಿಶೀಲನೆ ಮಾಡಿ ಅಧ್ಯಯನ ವರದಿ ಸಲ್ಲಿಸಲು ಅಗತ್ಯವಿರುವ ಕನಿಷ್ಠ ರೂ 35 ಲಕ್ಷ ಅಥವಾ ಆಕ್ಚುಯಲ್ ಖರ್ಚುವೆಚ್ಚಗಳ ಅನುದಾನವನ್ನು, ಯಾವುದಾದರೂ ಸಿ.ಎಸ್.ಆರ್ ಫಂಡ್ ಮೂಲಕ ಕೊಡಿಸಿ, ಅಗತ್ಯವಿದ್ದಲ್ಲಿ ನಿಮ್ಮ ಕನಸಿನ 108 ಜನರ ತಂಡದ ಪಟ್ಟಿ ನೀಡುತ್ತೇವೆ ಹಾಗೂ ಮಾನಿಟರಿಂಗ್ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ, ಎಂಬ ಮಾತು ಆಡಿ ಎದ್ದು ಬಂದಿದ್ದೇನೆ.
ನಿವೇನಂತಿರಾ,
ಆ ಪುಣ್ಯಾತ್ಮರ ಹೆಸರನ್ನು ಕನ್ನೇರಿ ಶ್ರೀಗಳ ಮೂಲಕ ಪ್ರಕಟಿಸಲು ಆಲೋಚನೆ ಮಾಡಿದ್ದೇನೆ.