13th October 2025
Share

TUMAKURU:SHAKTHI PEETA FOUNDATION

ಮಹಾರಾಷ್ಟ್ರದ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ್ಯಾಂತ  ‘ಕೃಷಿ ಆಶ್ರಮಗಳ ಮೌನಕ್ರಾಂತಿ / ಆಂದೋಲನ’ ನಡೆಯುತ್ತಿದೆ. ಇದೊಂದು ನಿಜಕ್ಕೂ ಅಧ್ಭುತ ಯೋಜನೆ. ಉತ್ತಮ ಆರೋಗ್ಯ, ಪಂಚಭೂತಗಳ ರಕ್ಷಣೆ, ಸಾವಯವ ಆಹಾರ, ಪರಿಸರ ಅಭಿವೃದ್ಧಿಯೇ ಮೂಲ ಮಂತ್ರವಾಗಿದೆ.

ಕೃಷಿ ಆಶ್ರಮಗಳ ಹರಿಕಾರರಾಗಿ ಶ್ರೀ ಡಾ.ಬಿ.ಎಂ.ನಾಗಭೂಷಣ್. ಶ್ರೀ ಡಾ.ಜಗನ್ನಾಥ್ ರಾವ್, ಶ್ರೀ ಮಾರುತಿ ರಾವ್ ಸೇರಿದಂತೆ 215 ಕೃಷಿ ಆಶ್ರಮಗಳ ಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಶೀಘ್ರವಾಗಿ 215 ರ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.

ನಾನು ನಂಬರ್ ಒನ್ ಕರ್ನಾಟಕ @ 2047’ ಘೋಷಣೆಯಡಿ, ನಮ್ಮ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಬೇಕು, ಎಲ್ಲಾ ಶಾಸಕರೂ ಮತ್ತು ಸಂಸದರೂ ನಿರಂತರವಾಗಿ ಶ್ರಮಿಸಲು ಸಾವಿರಾರು ಜನ ಜ್ಞಾನಿಗಳು ಕೈಜೋಡಿಸಬೇಕು ಎಂಬ ಹಂಬಲದಿಂದ ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿದ್ದೇನೆ

ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಮೂಲಕ ನನ್ನ ಕನಸಿನ ಪರಿಕಲ್ಪನೆಗೆ ಚಾಲನೆ ನೀಡಲಾಗಿದೆ. ನನ್ನ ಪರಿಕಲ್ಪನೆ ಕೃಷಿ ಆಶ್ರಮಕ್ಕೊಂದು ಕಳೆ-ಬೆಳೆ’ ಈ ಮೂಲಕ ನಾಡಿನ ರೈತರ ಸಂಪರ್ಕದೊಂದಿಗೆ, ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಮೂಲಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ಜನ ಜಾಗೃತಿ ಮೂಡಿಸುವುದು ನನ್ನ ಗುರಿ.

ರಾಜ್ಯದ 224 ವಿಧಾನಸಭಾ ಕೇತ್ರಗಳಲ್ಲೂ ಕನಿಷ್ಠ ತಲಾ 5 ಕೃಷಿ ಆಶ್ರಮಗಳನ್ನು ಆರಂಭಿಸಬೇಕು. ನಂತರ ಪ್ರತಿಯೊಂದು ಗ್ರಾಮ/ಬಡಾವಣೆಗೂ ಡಾಟಾ ಮಿತ್ರರ ಮೂಲಕ ವಿಸ್ತರಣೆ ಮಾಡಬೇಕು, ಎಂಬ ಉದ್ದೇಶದಿಂದ 1120 ಕೃಷಿ ಆಶ್ರಮಗಳನ್ನು ಆರಂಭಿಸಲು ಡಾ.ನಾಗಭೂಷಣ್ ರವರ ತಂಡ ಒಪ್ಪಿದೆ.

ನನ್ನ ಕನಸಿನ ಯೋಜನೆಗಳಿಗೆ 1120 ಕೃಷಿ ಆಶ್ರಮಗಳು, ನಂಬರ್ ಒನ್ ಕರ್ನಾಟಕ @ 2047 ಘೋಷಣೆಗೆ ಒಂದು ರೀತಿ ‘ವಿಸ್ತರಣಾ ಕಚೇರಿ’ ಮಾಡಬೇಕು ಎಂಬುದು ನನ್ನ ಆಲೋಚನೆ. ಇದು ರಾಜ್ಯ ಸರ್ಕಾರದ ಸಚಿವ ಸಂಪುದಲ್ಲಿ ನಿರ್ಣಯವಾಗಬೇಕಾಗಿದೆ.ಕೇಂದ್ರ ಸರ್ಕಾರದ ಅನುಮೋದನೆ ಪಡೆಯುವ ಆಲೋಚನೆಯೂ ಇದೆ.

ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ, ವಿವಿಧ ಅಧ್ಯಯನ ಕೇಂದ್ರವಾರು 224 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿ, ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳು ಶ್ರಮಿಸಲು ಚಿಂತನೆ ಇದೆ.

ಈ ಎಲ್ಲಾ ಸಭೆಗಳು ಕೃಷಿ ಆಶ್ರಮಗಳಲ್ಲಿ ನಡೆದರೆ, ಪ್ರಚಾರ ಮತ್ತು ಶ್ರಮದಾನ’ ಎರಡು ರೀತಿ ಅನೂಕೂಲವಾಗಲಿದೆ. ವಿದ್ಯಾರ್ಥಿಗಳಿಗೂ ಸಹ ಕೃಷಿಯಲ್ಲಿ ಆಸಕ್ತಿ ಬರಲಿದೆ ಎಂಬುದು ನಮ್ಮೆಲ್ಲರ ಅನಿಸಿಕೆ.

ಶಕ್ತಿಪೀಠ ಫೌಂಡೇಷನ್ ಪ್ರಯತ್ನ

1.            ತುಮಕೂರು ನಗರದ ಶಕ್ತಿಭವನದಲ್ಲಿ ರಾಜ್ಯ ಮಟ್ಟದ ಕಚೇರಿ ಆರಂಭಿಸಲು ಸಿದ್ಧತೆ ನಡೆಸಿದೆ.

2.            ತುಮಕೂರಿನಲ್ಲಿ ಶಕ್ತಿಭವನದಲ್ಲಿ ರಾಜ್ಯ ಮಟ್ಟದ ನಾಲೇಡ್ಜ್ ಬ್ಯಾಂಕ್ ಆರಂಭಿಸಲು ಸಿದ್ಧತೆ ನಡೆಸಿದೆ.

3.            ತುಮಕೂರು ಇಂಡಸ್ಟ್ರಿಯಲ್ ನೋಡ್‍ನಲ್ಲಿ, ಶಕ್ತಿಪೀಠ ಡಾಟಾ ಪಾರ್ಕ್ ಯೋಜನೆಯಡಿ ರಾಜ್ಯ ಮಟ್ಟದ ಮ್ಯೂಸಿಯಂ ಆರಂಭಿಸಲು ಸಿದ್ಧತೆ ನಡೆಸಿದೆ.

4.            ಚಿತ್ರದುರ್ಗ ಜಿಲ್ಲೆಯ ಬಗ್ಗನಡು ಕಾವಲ್‍ನಲ್ಲಿ ಶಕ್ತಿಪೀಠ ಕ್ಯಾಂಪಸ್‍ನಲ್ಲಿ 1120 ಕಳೆ-ಬೆಳೆಗಳ ಲೈವ್ ಪ್ರಾತ್ಯಾಕ್ಷಿಕೆ ಆರಂಭಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರಿನ ವನಲೋಕ ಫೌಂಡೇಷನ್ ಮತ್ತು ಸ್ಟಾರ್ಟ್ ಅಫ್ ತುಮಕೂರು ಮೇಲ್ಕಂಡ ನಾಲ್ಕು ವಿಭಾಗಗಳನ್ನು ನಿರ್ವಹಣೆ ಮಾಡಲು ಎಂ.ಓ.ಯು ಮಾಡಿಕೊಳ್ಳುವ ಹಂತದಲ್ಲಿ ಚರ್ಚೆ ನಡೆಯುತ್ತಿದೆ.

ಲಾಭ ಬಂದರೆ ಮಾತ್ರ ಲೋಕೋಪಯೋಗಿ ಇಲಾಖೆ ನಿಗಧಿ ಪಡಿಸುವ ಬಾಡಿಗೆ ನೀಡುವುದು ಮತ್ತು ಸರ್ಕಾರಗಳ ಅನುದಾನ ದೊರಕಿಸುವ ಭರವಸೆಯೊಂದಿಗೆ, ಎಲ್ಲಾ ಸರ್ವಿಸ್ ಶುಲ್ಕವನ್ನು ಶಕ್ತಿಪೀಠ ಫೌಂಡೇಷನ್ ಮೂಲಕ, ಪಾರದರ್ಶಕವಾಗಿ  ಕೃಷಿ ಆಶ್ರಮಗಳ ಅಭಿವೃದ್ಧಿಗೆ ಬಳಸಲು ಚಿಂತನೆ ನಡೆಸಲಾಗಿದೆ.’

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಮೂಲಕ, ‘ಪ್ರತಿಯೊಂದು ಬೆಳೆಗೆ ವೈಜ್ಞಾನಿಕ ನೀರಿನ ಬಳಕೆ ಮತ್ತು ಆಯಾ ವ್ಯಾಪ್ತಿಯ ನೀರಾವರಿ ಅಧ್ಯಯನವನ್ನೂ ನಡೆಸಲು ಉದ್ದೇಶಿಸಿರುವುದರಿಂದ’, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಸವಲತ್ತನ್ನು ನೇರವಾಗಿ ಡಿಬಿಟಿ ಮೂಲಕ ಕೃಷಿ ಆಶ್ರಮಗಳಿಗೆ ದೊರಕಿಸಲು ಚಿಂತನೆ ಇದೆ.

ಕರ್ನಾಟಕ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಆರಂಭವಾಗುವ ಕರ್ನಾಟಕ ರಾಜ್ಯ ರೀಸರ್ಚ್ ಪೌಂಡೇಷನ್ ಮೂಲಕ, ಆಯಾ ಇಲಾಖೆಗಳ ಅನುದಾನದ ಅಡಿಯಲ್ಲಿ, ರೈತರಿಗೆ ಅಗತ್ಯವಿರುವ ಸೌಲಭ್ಯ/ಅನುದಾನಗಳನ್ನು ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನ ನಡೆಯುತ್ತಿದೆ. ಸಚಿವ ಬೋಸ್‍ರಾಜ್‍ರವರ ಕಾಲಿಗೆ ಬಿದ್ದಾದರೂ’ ಯೋಜನೆಗೆ ಶೀಘ್ರವಾಗಿ ಚಾಲನೆ ಮಾಡಿಸಲು ಮುಂದಾಗಿದ್ದೇನೆ.

ಪ್ರಥಮ ಬೆಳೆ.

1120 ಕಳೆ-ಬೆಳೆಗಳ ಪೈಕಿ ಮೊಟ್ಟಮೊದಲನೆಯದಾಗಿ, ನುಗ್ಗೆ ಕೃಷಿ ಆಶ್ರಮ, ಬೆಂಗಳೂರು ಉತ್ತರ ಲೋಕಸಭಾ ಕೇತ್ರದ ವ್ಯಾಪ್ತಿಯ, ಯಲಹಂಕ ವಿಧಾನಸಭಾ ಕೇತ್ರದ, ಕೆ.ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯ, ಕುಂಬಳಗೋಡು ಸಮೀಪದ ಗೋಣಿಪುರ ಗ್ರಾಮದ ಶ್ರೀ ಮಧುರನಾಥ್ ಮತ್ತು ಅವರ ತಂಡದ ನೇತೃತ್ವದಲ್ಲಿ, ದಿನಾಂಕ:25.10.2025 ರಂದು ಭೂಮಿ ಪೂಜೆ ಮಾಡಲು ದಿನಾಂಕ:06.07.2025 ರಂದು ಬೆಂಗಳೂರಿನ ವನಲೋಕದಲ್ಲಿ ನಡೆದ ಕೃಷಿ ಆಶ್ರಮಗಳ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ನಿಖರವಾದ ಮಾಹಿತಿಯನ್ನು ಅವರೇ ನೀಡಲಿದ್ದಾರೆ.

ಶ್ರೀ ಮಧುಕರ್‍ರವರು, ಶ್ರೀ ಶಿವಕುಮಾರ್‍ರವರ ತಂಡ ನುಗ್ಗೆ ಬೆಳೆಯುವ ರೈತರು, ನುಗ್ಗೆ ಉಧ್ಯಮಿ, ನುಗ್ಗೆ, ಸಂಶೋಧಕ, ನುಗ್ಗೆ ವಿಜ್ಞಾನಿ, ನುಗ್ಗೆ ಸ್ಟಾರ್ಟ್‍ಅಫ್‍ದಾರ, ನುಗ್ಗೆ ಡಾಕ್ಟರೇಟ್ ಪಡೆಯುವವರೆಗೂ ಶ್ರಮಿಸಲು ಸಜ್ಜಾಗುತ್ತಿದ್ದಾರೆ.

ನುಗ್ಗೆ ನಾಲೇಡ್ಜ್ ಬ್ಯಾಂಕ್, ನುಗ್ಗೆ ಮೌಲ್ಯವರ್ಧೀತ ಉತ್ಪನ್ನಗಳ ಯಂತ್ರೋಪಕರಣಗಳ ಸಂಶೋಧನೆ,  ನುಗ್ಗೆ ಮ್ಯೂಸಿಯಂ, ನುಗ್ಗೆ ಕ್ಲಸ್ಟರ್, ನುಗ್ಗೆ ಆರ್ ಅಂಡ್ ಡಿ, ನುಗ್ಗೆ ಸೀಡ್ ಬ್ಯಾಂಕ್, ನುಗ್ಗೆಗೆ ಬಳಸುವ ಸಾವಯವ ಗೊಬ್ಬರ, ಕ್ರಿಮಿನಾಷಕ, ನರ್ಸರಿಯನ್ನು ಆರಂಭಿಸಲು ಮುಂದಾಗಿದ್ದಾರೆ. ಇದೊಂದು ನುಗ್ಗೆ ಲೋಕ ?

ಆರಂಭಕ್ಕೂ ಮುನ್ನ ಎಂ.ಓ.ಯು ಅಗತ್ಯ.

1.            ಕೃಷಿ ಆಶ್ರಮಗಳ ಪಾತ್ರದ ಬಗ್ಗೆ ಹರಿಕಾರರಾದ ಡಾ.ನಾಗಭೂಷಣ್ ರವರು ರೂಪುರೇಷೆ ಸಿದ್ಧತೆ ನಡೆಸುತ್ತಿದ್ದಾರೆ.

2.            ಈ ಎಲ್ಲಾ ಯೋಜನೆಗಳಿಗೆ ತಾಂತ್ರಿಕ  ಸಲಹೆಗಳನ್ನು ನೀಡಲು ಡಾ.ಜಗನ್ನಾಥ್ ರವರು ಮುಂದೆ ಬಂದಿದ್ದಾರೆ.

3.            ಈ ಎಲ್ಲಾ ಯೋಜನೆಗಳಿಗೆ ಮಾರುಕಟ್ಟೆ ಸಲಹೆಗಳನ್ನು ನೀಡಲು ಡಾ.ಸಂತೋóಷ್ ರವರು ಮುಂದೆ ಬಂದಿದ್ದಾರೆ.

4.            ಈ ಎಲ್ಲಾ ಯೋಜನೆಗಳಲ್ಲಿ ಸಾಧ್ಯತೆ ಇರುವ ಸ್ಟಾರ್ಟ್ ಅಫ್ ಆರಂಭಿಸಲು   ಸಲಹೆಗಳನ್ನು ನೀಡಲು ಸುಹೃತ್ ರವರು  ಮುಂದೆ ಬಂದಿದ್ದಾರೆ.

5.            ಈ ಎಲ್ಲಾ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಶಕ್ತಿಪೀಠ ಫೌಂಡೇಷನ್  ಸಲಹೆಗಳನ್ನು ನೀಡಲು   ಮುಂದೆ ಬಂದಿದೆ.

ಶುಲ್ಕ ರಹಿತ/ ಸಹಿತ ಇದೇ ರೀತಿ ವಿವಿಧ ರೀತಿಯ ಸಲಹೆಗಳನ್ನು ಮತ್ತು ಸೇವೆ ಮಾಡಲು ಆಸಕ್ತಿ ಇರುವವರು ಮಧುಕರ್ ರವರನ್ನು ಸಂಪರ್ಕಿಸ ಬಹುದು.

ಅಗತ್ಯವಿದ್ದಲ್ಲಿ, ಆಸಕ್ತ ವ್ಯಕ್ತಿಗಳ, ಸಂಸ್ಥೆಗಳ ಜೊತೆ ವಿಷಯಾಧರಿತ ಎಂ.ಓ.ಯು ಮಾಡಿಕೊಂಡು ನಂತರ ಕನ್ನೇರಿ ಶ್ರೀಗಳ ಆಶೀರ್ವಾದ ಪಡೆದು ಮುಂದುವರೆಯಲು ಸಲಹೆ ನೀಡಲಾಗಿದೆ.

ಅವರಿಷ್ಟದಂತೆ ನಡೆಸಲು ಅವರು ಸ್ವತಂತ್ರರು