ತುಮಕೂರು ಜಿಲ್ಲೆ ಕೃಷಿ ಹಬ್ ಆದರೇ, ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ತಲಾ 5 ರಂತೆ, ರಚಿಸುತ್ತಿರುವ 1120 ಕೃಷಿ ಆಶ್ರಮಗಳು ಪೋಕ್ಸ್ ಆಗಲಿ ಎಂಬುದು ನನ್ನ ಬಯಕೆ. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್‍ರವರು, ತುಮಕೂರು ಜಿಲ್ಲಾಧಿಕಾರಿಗಳಿಗೆ, ಶಕ್ತಿಪೀಠ ಫೌಂಡೇಷನ್ ಮನವಿಯನ್ನು ರವಾನಿಸಿ ವರದಿ ನೀಡಲು ಸೂಚಿಸಿದ್ದಾರೆ.
ನಾನು ಈಗಾಗಲೇ ಈ ಬಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರಿಗೆ, ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದೇನೆ, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡುವುದರ ಜೊತೆಗೆ, ದೂರವಾಣಿ ಮೂಲಕ ಸಮಾಲೋಚನೆ ನಡೆಸಲಾಗಿದೆ. ಅವರು ಸಹ ಸ್ಪಂಧಿಸಿದ್ದಾರೆ.
ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರªರು, ತುಮಕೂರು ಗ್ರಾಮಾಂತರದ ಶಾಸಕರಾದ ಶ್ರೀ ಬಿ.ಸುರೇಶ್ ಗೌಡರವರೊಂದಿಗೆ ಖುದ್ಧಾಗಿ ಸಮಾಲೋಚನೆ ನಡೆಸಿದ್ದೇನೆ. ತುಮಕೂರು ಜಿಲ್ಲೆಯ ಉಳಿದ ಸಂಸದರ ಮತ್ತು ಶಾಸಕರ ಜೊತೆ ಪರಿಕಲ್ಪನಾ ವರದಿಯೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ.
ಪರಿಕಲ್ಪನಾ ವರದಿಯನ್ನು, ತುಮಕೂರು ವಿಶ್ವವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನದ ಪೀಠದ ಮೂಲಕ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ.
‘ದಿನಾಂಕ:12.10.2025 ರಿಂದ 21.10.2025 ರವರೆಗೆ ಸುಮಾರು 9 ದಿವಸಗಳ ಕಾಲ ಆಂದೋಲನ ರೂಪದಲ್ಲಿ ಪ್ರಸ್ತಾವನೆ ಸಿದ್ಧತೆ ನಡೆಯುತ್ತಿದೆ. ವಿಸಿಯವರಾದ ಶ್ರೀ ಎಂ.ವೆಂಕಟೇಶ್ವರಲುರವರು ಸಂಪೂರ್ಣವಾಗಿ ಸ್ಪಂಧಿಸುತ್ತಿದ್ದಾರೆ.’
ಆಸಕ್ತರ ಒಂದು ತಂಡ ಹಣ ಬಂದಾಗ, ಸಲಹಾ ಶುಲ್ಕವನ್ನು ನೀಡುವ ಷರತ್ತಿನೊಂದಿಗೆ ಸೇವೆ ಸಲ್ಲಿಸಲು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಸಹ ವಿದ್ಯಾರ್ಥಿಗಳ ಜ್ಞಾನದ ನೆರವು ನೀಡಲು ಮುಂದೆ ಬಂದಿದ್ದಾರೆ. ಪ್ರಾಜೆಕ್ಟ್ ವರ್ಕ್ ಅಥವಾ ಪಿ.ಹೆಚ್.ಡಿ ಅಥವಾ ಆಕ್ಟಿವಿಟಿ ಪಾಯಿಂಟ್ ವರ್ಕ್ ಆಗಿ ಮಾಡಬಹುದಾಗಿದೆ.
ರಾಜ್ಯದ ಯಾರೇ ಆಸಕ್ತ ಕೃಷಿ ಆಶ್ರಮಗಳ ತಜ್ಞರು ಮತ್ತು ಹರಿಕಾರರು ಕೈಜೋಡಿಸಲು ಬಹಿರಂಗ ಮನವಿ ಮಾಡಲಾಗಿದೆ. ತುಮಕೂರಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯೊಂದಿಗೆ, ಊಟ ಉಪಚಾರವನ್ನು ಉಚಿತವಾಗಿ ನೀಡಲು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಅವರು ಒಬ್ಬ ಕೃಷಿಕರಾಗಿ ಮುಂದೆ ಬಂದಿದ್ದಾರೆ. ನಿಮ್ಮೂರಿನಿಂದ ಬರುವ ಮತ್ತು ಹೋಗುವ ವೆಚ್ಚವನ್ನು ನೀವೇ ಭರಸಿಕೊಳ್ಳಬೇಕು. ಆಸಕ್ತರು ಸಂಪರ್ಕಿಸಬಹುದಾಗಿದೆ.
ಕೃಷಿ ಆಶ್ರಮಗಳ ಕೋರ್ ಕಮಿಟಿಯಲ್ಲಿ ಸಮಾಲೋಚನೆ ನಡೆಸಲಾಗಿದೆ, ಡಾ,ಬಿ.ಎಂ.ನಾಗಭೂಷಣ್ ರವರು, ಡಾ.ಜಗನ್ನಾಥ್‍ರವರು, ಡಾ.ಸಂತೋóಷ್‍ರವರು ಎಂ.ಓ.ಯು ಸಿದ್ಧಗೊಳಿಸಿದ ನಂತರ ಹೊಣೆಗಾರಿಕೆ ಪತ್ರವನ್ನು ನೀಡಲಾಗುವುದು.
ಪೈಲಟ್ ವಿಧಾನಸಭಾ ಕ್ಷೇತ್ರವಾಗಿ ವಿಜಯನಗರ ಜಿಲ್ಲೆಯ, ಕೂಡ್ಲಗಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಹುಲಿಕೆರೆ ಗ್ರಾಮದ ಬೆಲವತ್ತ ಹಣ್ಣಿನ ತಜ್ಞರಾದ ಶ್ರೀ ವಿಶ್ವೇಶ್ವರ ಸಜ್ಜನ್ ರವರು ಸಮಾಲೋಚನೆ ನಡೆಸಿದ್ದಾರೆ.
ಅಲ್ಲಿನ ಶಾಸಕರಾದ ಶ್ರೀ ಡಾ.ಶ್ರಿನಿವಾಸ್‍ರವರು ಸಹ ನನ್ನ ಆತ್ಮೀಯರು ಹಾಗೂ ರಾಜ್ಯದ ಬಹುತೇಕ ಮಧ್ಯಭಾಗದಲ್ಲಿ ಅವರ ವಿಧಾನಸಭಾ ಕ್ಷೇತ್ರ ಬರಲಿದೆ. ಮುಂದಿನ ಕೋರ್ ಕಮಿಟಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.