13th October 2025
Share

TUMAKURU:SHAKTHI PEETA FOUNDATION

ರಾಜ್ಯ ಸರ್ಕಾರದ ಮಾಜಿ ಕೃಷಿ ಸಚಿವರಾದ ದಿ.ಸಾಗರನಹಳ್ಳಿ ರೇವಣ್ಣನವರು, ನನ್ನ ತಾತನ ತಂಗಿ ಮಗ, ಅಂದರೆ ನಮ್ಮ ಕುಟುಂಬದ ಮೊಮ್ಮಗ. ಅವರ ತಾಯಿಯ ತವರು ಮನೆ, ಕುಂದರನಹಳ್ಳಿಯ ನಮ್ಮ  ಮನೆ. ಕಾವಲರ ವಂಶಸ್ಥರ ಕುಟುಂಬ.

ತುಮಕೂರು ಕೇತ್ರದ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಆಗಾಗ ನನ್ನ ಉದ್ದೇಶಿಸಿ ಹೇಳುವ ಮಾತು, ಕುಂದರನಹಳ್ಳಿ ರಮೇಶ್  ಸಾಗರನಹಳ್ಳಿ ರೇವಣ್ಣನವರ ವಂಶಸ್ಥರು, ಅದಕ್ಕೆ ಕೋಪ ಜಾಸ್ತಿ ಎನ್ನುತ್ತಾರೆ. ನಾನು ಅವರಿಗೆ ಹೇಳುವುದು ನಾನು ಸಾಗರನಹಳ್ಳಿ ರೇವಣ್ಣನವರ ವಂಶಸ್ಥನಲ್ಲ, ರೇವಣ್ಣನವರು ನಮ್ಮ ವಂಶಸ್ಥರು ಎಂದಾಗ ಅವರ ಅದು ಸರಿ, ರೇವಣ್ಣನವರು ನಿಮ್ಮ ಮನೆ ಮೊಮ್ಮಗ ಅಲ್ವಾ ಎಂದು ನಗುತ್ತಾರೆ.

ರೇವಣ್ಣನವರು ಮಾಜಿ ಮುಖ್ಯಮಂತ್ರಿಯವರಾದ ದಿ.ರಾಮಕೃಷ್ಣಹೆಗ್ಗಡೆಯವರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದವರು. ಅವರು ಮೂಲತಃ ಕೃಷಿಕರು ಹೌದು. ಅತ್ಯಂತ ಪ್ರಾಮಾಣಿಕ ವ್ಯಕ್ತಿ, ನನಗಿÀಂತ ಸಾವಿರ ಪಟ್ಟು ಕೋಪ.

ನಾನು ಕೃಷಿ ಆಶ್ರಮಗಳ ಅಭಿಯಾನದಲ್ಲಿ ಪಾಲ್ಗೊಂಡ ನಂತರ, ನಮ್ಮ ಕಾವಲರ ಮನೆತನದ ಕೆಲವರು ಸಲಹೆ ನೀಡುತ್ತಿರುವುದು ‘ಸಾಗರನಹಳ್ಳಿ ರೇವಣ್ಣ ಫೌಂಡೇಷನ್’ ಸ್ಥಾಪಿಸಿ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ, ‘ಕೃಷಿ ಆಶ್ರಮಗಳ ತಜ್ಞ’ರಿಗೆ ಅವರ ಹೆಸರಿನಲ್ಲಿ ‘ಕೃಷಿ ಪ್ರಶಸ್ತಿ’ ನೀಡಲು ಸಲಹೆ ನೀಡುತ್ತಿದ್ದಾರೆ.

ನಾನು ಈ ಬಗ್ಗೆ ರೇವಣ್ಣನವರ ಮಗಳ ಮಗ ಹಾಗೂ ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಹೆಬ್ಬಾಕ ರವಿರವರೊಂದಿಗೆ ಚರ್ಚಿಸಿದ್ದೇನೆ. ಈ ಬಗ್ಗೆ ಅವರು ಕುಟುಂಬದವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ‘ಐಟಿ-ಬಿಟಿ ಹಬ್’ ಆದರೇ, ತುಮಕೂರು ಜಿಲ್ಲೆ ‘ಕೃಷಿ ಹಬ್’ ಆಗಬೇಕು ಎನ್ನುವುದು ನನ್ನ ಪರಿಕಲ್ಪನೆ, ಜಿಲ್ಲೆಯಲ್ಲಿ ಇನ್ನೂ ಹಲವರು ಮಾಜಿ ಕೃಷಿ ಸಚಿವರು ಇದ್ದಾರೆ. ಅವರೆಲ್ಲರ ಮಾಹಿತಿ ಕಲೆ ಹಾಕಿ, ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ, ಕೃಷಿ ಪ್ರಶಸ್ತಿ ಬಗ್ಗೆ, ಒಂದು ರೂಪು ರೇಷೆ ನಿರ್ಧರಿಸಲಾಗುವುದು.

ಆಸಕ್ತರು ಸೂಕ್ತ ಸಲಹೆ ನೀಡಲು ಬಹಿರಂಗ ಮನವಿ.