13th October 2025
Share

TUMAKURU:SHAKTHIPEETA FOUNDATION

  ಶಿವಮೊಗ್ಗ ಲೋಕಸಭಾ ಕ್ಷೇತ್ರದ, ಸಾಗರ ವಿಧಾನಸಭಾ ಕ್ಷೇತ್ರದ, ಮಂಚಾಲೆ ಶ್ರೀ ಪ್ರಕಾಶ್ ರಾವ್ ಕಾಡು ತೋಟದಲ್ಲಿ, ವನಭೋಜನ ಸೇವನೆಯೊಂದಿಗೆ ಜ್ಞಾನ ದಾಸೋಹ ಬಹಳ ಉತ್ತಮವಾಗಿತ್ತು.

ಅವರ ಮಾಡಿರುವ ತೋಟ ಮತ್ತು ಅವರು ಉಣಬಡಿಸಿದ ಊಟ ಎರಡರ  ಸಂಶೋಧನಾ ವರಧಿ ಸಿದ್ಧಪಡಿಸಬೇಕಿದೆ. ನಾಲ್ಕು ಲೈನ್ ಬರೆಯುವ ಹಾಗೆ ಇಲ್ಲ. ಅವರ ಆತಿಥ್ಯದ ಬಗ್ಗೆ ವರ್ಣಿಸಲು ಪದಗಳೇ ಇಲ್ಲ. ನಿಜಕ್ಕೂ ಅವರ ಕುಟುಂಬದ ಸಂಸ್ಕಾರಕ್ಕೆ ಬೆಲೆ ಕಟ್ಟಲು ಸಾದ್ಯಾವಿಲ್ಲ.

ಸಭೆಯಲ್ಲಿನ ಪ್ರಮುಖ ಅಂಶಗಳು. 

1.            ಸಾಧನೆ ಮಾಡಿರುವ ರೈತರನ್ನು ಹುಡುಕಿ ರೈತ ವಿಜ್ಞಾನಿ/ ರೈತ ಡಾಕ್ಟರೇಟ್ ಅನ್ನು ಕೊಡಿಸಲು  ಶ್ರೀ ಪ್ರಕಾಶ್ ರಾವ್ ಮಂಚಾಲೆ ರವರ ವರಧಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದು. ಇದೇ ಮಾದರಿಯಲ್ಲಿ ರಾಜ್ಯಧ್ಯಾಂತ ಸಾಧನೆ ಮಾಡಿರುವ ರೈತರ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಗಳಿಗೆ ಶಿಪಾರಸ್ಸು ಮಾಡಲು ಒಂದು ಉನ್ನತ ಮಟ್ಟದ ಸಮಿತಿ ರಚಿಸುವುದು.

2.            ಡಾ.ಚಂದ್ರಶೇಖರ್ ಬಿರಾದರ್ ರವರು ತಿಳಿಸಿದ, ರೈತ ವಿಜ್ಞಾನಿ ರಾಜಸ್ಥಾನ ಮಾದರಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಅಧ್ಯಯನ ಪ್ರವಾಸ ಕೈಗೊಳ್ಳುವುದು.

3.            1120 ಕಳೆ-ಬೆಳೆಗಳ ಕರಡು ಪಟ್ಟಿಯನ್ನು ದಿನಾಂಕ:25.10.2025 ರಂದು ಕುಂಬಳಗೋಡುವಿನಲ್ಲಿ ನಡೆಯುವ ನುಗ್ಗೆ ಲೋಕದ ಸಭೆಯಲ್ಲಿ ಬಿಡುಗಡೆ ಮಾಡುವುದು.

4.            224 ವಿಧಾನಸಭಾ ಕ್ಷೇತ್ರವಾರು ಕೃಷಿ ಆಶ್ರಮಗಳ ಜಿ.ಐ.ಎಸ್ ಲೇಯರ್ ಅನ್ನು ರಚಿಸಲು ಅರ್ಹ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು.

5.            ಶ್ರೀ ಪ್ರಕಾಶ್ ರಾವ್ ಮಂಚಾಲೆ ರವರ ಕಾಡುತೋಟದ ಸಭೆಯನ್ನು, ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಚಿಸುತ್ತಿರುವ, ವಿಧಾನಸಭಾ ಕ್ಷೇತ್ರವಾರು ತಲಾ 5 ಕೃಷಿ ಆಶ್ರಮಗಳ/ ಕಳೆ-ಬೆಳೆವಾರು,  1120 ಸಭೆಗಳ  ಪೂರ್ವಭಾವಿ ಸಭೆಯಾಗಿ ಘೋಷಣೆ ಮಾಡುವುದು.

ದಿನಾಂಕ:13.10.2025 ರಂದು ಬೆಂಗಳೂರಿನ ವನಲೋಕದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಭೆಯಲ್ಲಿ ಬಗ್ಗೆ ಸಮಾಲೋಚನೆ ನಡೆಸಿ, ನಿರ್ಣಯ ಮಾಡುವುದು ಸೂಕ್ತವಾಗಿದೆ.

ಸಭೆಯ ಆಯೋಜಕರು ರಾಜ್ಯದ್ಯಾಂತ ಭಾಗವಹಿಸಿದವರ ಪಟ್ಟಿಯ ಜೊತೆಗೆ ಅವರ ಅನಿಸಿಕೆಗಳನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ.