TUMAKURU:SHAKTHI PEETA FOUNDATION


‘ಕೃಷಿ ಆಶ್ರಮ’ ರಾಜ್ಯದ ಎಲ್ಲೆಡೆ ಸದ್ಧು ಮಾಡುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ವ್ಯಾಪಿಸಲು ಸಜ್ಜಾಗುತ್ತಿದೆ. ಪ್ರಗತಿ ಪರ ರೈತರ, ಸಾವಯವ ಕೃಷಿಕರ, ರೈತ ಜ್ಞಾನಿಗಳ, ರೈತ ಯುವ ವಿಜ್ಞಾನಿಗಳ, ಪಾರಂಪರಿಕ ವೈಧ್ಯರ, ನಾಟಿ ವೈದ್ಯರ, ಹಕೀಮರ, ಪರಿಸರ ಪ್ರೇಮಿಗಳ, ಪಂಚಭೂತಗಳ ರಕ್ಷಣೆಗೆ ಪಣತೊಟ್ಟಿರುವ, ಅಭಿವೃದ್ಧಿಯಲ್ಲಿ ಮತ್ತು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಪ್ರತಿ ಪಾದಿಸುವ ಹಾಗೂ ವಿವಿಧ ವಿಷಯಗಳ ಜ್ಞಾನಿಗಳ ಒಂದು ಸಂಗಮ.
‘1120 ಕಳೆ- ಬೆಳೆಗಳ ಉತ್ಸವ ಒಂದು ಐತಿಹಾಸಿಕ’ ಆಂದೋಲನವಾಗಲಿದೆ. ಜಾಗತಿಕ ಮಟ್ಟದಲ್ಲಿ ಸುದ್ಧಿಮಾಡುವ ಕಾಲ ಬರಲಿದೆ. ‘ಪಾರದರ್ಶಕತೆಯೇ ನಮ್ಮ ಮೂಲ ಮಂತ್ರ’. ಪ್ರತಿ ಸಭೆ ಮುಗಿದ ತಕ್ಷಣ ಯಾರೇ, ಯಾವುದೇ ಹಣ ಖರ್ಚು-ವೆಚ್ಚ ಮಾಡಲಿ ‘ಲೆಕ್ಕ ಕೊಡುವ ಪರಿಪಾಠ’ ಆರಂಭವಾಗಲಿ.
‘ಕೃಷಿ ಚಟುವಟಿಕೆ ಐಟಿ-ಬಿಟಿ ಗಿಂತ ವಿಭಿನ್ನ’ ಎಂದು ಪರಿಚಯಿಸುವುದೇ ಈ ಆಂದೋಲನದ ಗುರಿಯಾಗ ಬೇಕಿದೆ. ದೇಶದ, ರಾಜ್ಯದ ಅಭಿವೃದ್ಧಿಗೆ ‘ಕೃಷಿ ಜಿಡಿಪಿ ಗುಟುರು’ ಹಾಕಬೇಕಿದೆ.
ಈ ಆಹ್ವಾನ ಪತ್ರಿಕೆ 1120 ಸಭೆಗಳಿಗೂ ಒಂದೇ ಮಾದರಿಯಾಗಿರುತ್ತದೆ. ನಿಮ್ಮ ಐಡಿಯಾ ಕೊಡಿ, ಮುಂದಿನ ಸಭೆಯ ವೇಳೆಗೆ ಸರಿಪಡಿಸೊಣ ? ಈಗ ಅಲ್ಪ-ಸ್ವಲ್ಪ ಬದಲಾವಣೆ ಮಾಡ ಬೇಕು ಎನಿಸುತ್ತಿದೆ. ಆದರೇ ‘ಕೋರ್ ಕಮಿಟಿ ನಿರ್ಣಯ’ ಅಂತಿಮವಾಗಲಿದೆ.