TUMAKURU:SHAKTHI PEETA FOUNDATION
ದಿನಾಂಕ:27.10.2025 ರಂದು ತುರುವೇಕೆರೆಯಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನೇತೃತ್ವದಲ್ಲಿ ನಡೆದ, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕೃಷಿ ಆಶ್ರಮ ಉದ್ಗಾಟನಾ ಸಮಾರಂಭದಲ್ಲಿ ಕೆಳಕಂಡ 3 ಪ್ರಮುಖ ವಿಷಯಗಳ ಬಗ್ಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಶ್ರೀ ಎಮ್.ಟಿ.ಕೃಷ್ಣಪ್ಪನವರ ಜೊತೆ ಸಮಾಲೋಚನೆ ನಡೆಸಲಾಗಿದೆ.

ಶೀಘ್ರದಲ್ಲಿ ಕುಣಿಕೆನಹಳ್ಳಿ ಫಾರಂನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಂಭಂದಿಸಿದ ಅಧಿಕಾರಿಗಳ ಸಭೆ ಆಯೋಜಿಸಿ, ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ, ಅಭಿವೃದ್ಧಿಯಲ್ಲಿ ಮತ್ತು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ‘ಪರಿಕಲ್ಪನಾ ವರದಿ’ ಸಿದ್ಧಪಡಿಸಿ ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ.

1. ತುರುವೆಕೆರೆ ಕುಣಿಕೆನಹಳ್ಳಿ ಫಾರಂನಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೌ-ವ್ಯಾಲಿ ಸ್ಥಾಪಿಸಿ,À ತಾಲ್ಲೋಕಿನ 131 ಎಂಪಿ.ಸಿ.ಎಸ್‍ಗಳು, ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವ ವಿನೂತನ ಯೋಜನೆ ರೂಪಿಸಲು ಸಮಾಲೋಚನೆ ನಡೆಸಲಾಗಿದೆ.
2. ತುರುವೇಕೆರೆ ವಿಧಾನಸಭಾ ಕ್ಷೇತ್ರದ 37 ಗ್ರಾಮಪಂಚಾಯಿತಿಗಳಲ್ಲಿ, ಆಸಕ್ತ ರೈತರ ಸಹಭಾಗಿತ್ವದಲ್ಲಿ ತಲಾ 5 ಗ್ರಾಮಪಂಚಾಯಿತಿಗಳಿಗೆ ಒಂದು ಕಳೆ-ಬೆಳೆಯಂತೆ, 8 ಕಳೆ-ಬೆಳೆ ಮತ್ತು ತುರುವೇಕೆರೆ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಂದು ಬೆಳೆ ಸೇರಿದಂತೆ ಸುಮಾರು 9 ಬೆಳೆಗಳ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿ ರೈತ ಕೃಷಿಕ, ಉಧ್ಯಮಿ, ಸ್ಟಾರ್ಟ್‍ಅಫ್‍ದಾರ, ಸಂಶೋಧಕ ಮತ್ತು ಡಾಕ್ಟರೇಟ್ ಪಡೆಯುವವರಿಗೂ ಪ್ರೋತ್ಸಾಹಿಸಲು ಸಮಾಲೋಚನೆ ನಡೆಸಲಾಗಿದೆ.
3. ತುರುವೇಕೆರೆ ವಿಧಾನಸಭಾ ಕ್ಷೇತ್ರದ 37 ಗ್ರಾಮಪಂಚಾಯಿತಿಗಳ ಮತ್ತು ತುರುವೇಕೆರೆ ಪಟ್ಟಣ ಪಂಚಾಯಿತಿಯಲ್ಲಿರುವ ಒಟ್ಟು 38 ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿಗಳ ಸಹಭಾಗಿತ್ವದಲ್ಲಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 30 ಜನರಂತೆ, ಇನ್ನೋವೇಟರ್ಸ್, ಹೊಸ ಸಂಶೋಧಕರು, ಸ್ಟಾರ್ಟ್‍ಅಫ್ ಕನಸುಗಾರರು, ವಿದ್ಯಾರ್ಥಿ,ಯುವ, ಮಹಿಳಾ ಮತ್ತು ರೈತ ವಿಜ್ಞಾನಿಗಳೂ ಸೇರಿದಂತೆ ಸುಮಾರು 1140 ನಾಲೇಡ್ಜಬಲ್ ಪರ್ಸನ್, ನಾಟಿ ವೈಧ್ಯರು, ಪಾರಂಪರಿಕ ವೈದ್ಯರು ಮತ್ತು ಹಕೀಮರನ್ನು ಗುರುತಿಸಿ, ಗೌರವಿಸಿ, ಅವರ ಚಿಂತನೆಗಳಿಗೆ ಪೂರಕವಾದ, ಯೋಜನೆಗಳಿಗೆ ಪ್ರೋತ್ಸಾಹಿಸಲು ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಸಮಾಲೋಚನೆ ನಡೆಸಲಾಗಿದೆ.
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೇ, ಪ್ರಥಮವಾಗಿ ಶಾಸಕರ ನೇತೃತ್ವದಲ್ಲಿ ಕೃಷಿ ಆಶ್ರಮಗಳ ಸಭೆ ಆಯೋಜಿಸಿದ ಮತ್ತು ಭಾಗವಹಿಸಿದ್ಧ ಎಲ್ಲರಿಗೂ ಹೃತ್ಫೂರ್ವಕವಾದ ಅಭಿನಂದನೆಗಳು. ಇದೊಂದು ಮಾದರಿ ಯೋಜನೆಯಾಗಿ ರಾಜ್ಯದ ಎಲ್ಲಾ ವಿಧಾನಸಭಾ ಸದಸ್ಯರಿಗೂ ದಿಕ್ಸೂಚಿಯಾಗಲಿದೆ.
ಬಿಜೆಪಿಯ ಕೇಂದ್ರ ಸಚಿವರು, ಕಾಂಗ್ರೆಸ್ನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನತಾದಳದ ಶಾಸಕರು, ರೈತರ ಸಹಭಾಗಿತ್ವದ ಯೋಜನೆಗೆ 3 ಪಕ್ಷಗಳು ಸಹಕರಿಸುವ ಭರವಸೆ ಇದೆ.


