TUMAKURU:SHAKTHIPEETA FOUNDATION
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ, ಬೆಂಗಳೂರಿನಲ್ಲಿ ಸ್ವಿಪ್ಟ್ ಸಿಟಿ, ಕ್ವಿನ್ ಸಿಟಿ, ಎಐ ಸಿಟಿ, ಕ್ವಾಂಟಮ್ ಸಿಟಿ, ಸ್ಥಾಪಿಸುತ್ತಿರುವಾಗ ‘ಕೃಷಿ ಸಂಶೋಧನಾ ನಗg’À ಸ್ಥಾಪಿಸಲು ನಿಯಾಮುನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ. ಜಿ.ಪರಮೇಶ್ವರ್ ರವರು ತುಮಕೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ಕಡತಕ್ಕೆ ಚಾಲನೆ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ‘ಕೃಷಿ ಸಂಶೋಧನಾ ನಗರ/ಫಾರ್ಮರ್ ಸಿಟಿ/ಅಗ್ರಿಹಬ್’ ಸ್ಥಾಪಿಸಿ, ಹಬ್ ಅಂಡ್ ಫೋಕ್ಸ್ ಮಾದರಿಯಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ, 1120 ಕಳೆ-ಬೆಳೆ ಸಂಶೋಧನಾ ಮತ್ತು ಅಧ್ಯಯನ ಕೇಂದ್ರಗಳನ್ನು, ರೈತರ ಸಹಭಾಗಿತ್ವದಲ್ಲಿ ಸ್ಥಾಪಿಸಲು, ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳು ಶ್ರಮಿಸುತ್ತಿರುವ ಸಂದರ್ಭದಲ್ಲಿ, ಪ್ರಪಂಚದಲ್ಲಿಯೇ ಎಲ್ಲೂ ಈ ಮಾದರಿಯ ಯೋಜನೆ ಜಾರಿಯಲ್ಲಿ ಇಲ್ಲ, ಸ್ವತಃ ಕೃಷಿಕರು, ಕೃಷಿ ಪದವೀಧರರು ಆಗಿರುವ ಪರಮೇಶ್ವರ್ ರವರು ಜಿಲ್ಲೆಗೆ ಒಂದು ಬೃಹತ್ ಕೊಡುಗೆ ನೀಡಲಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರೊಂದಿಗೆ ಸಮಾಲೋಚನೆ ನಡೆಸಿದಾಗ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರ ಬಳಿ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರ ನೇತೃತ್ವದಲ್ಲಿ ಕೃಷಿ ಆಶ್ರಮಗಳ ನಿಯೋಗ ಕರೆದೊಯ್ಯಲು ಸ್ಪಂದನೆ ನೀಡಿದ್ದಾರೆ.
ಪರಮೇಶ್ವರ್ ರವರು ಮತ್ತು ಶ್ರೀ ವಿ.ಸೋಮಣ್ಣನವರು ಜೊತೆಗೂಡಿ, ಜಾಗತಿಕ ಮಟ್ಟದಲ್ಲಿ ಸುದ್ಧಿ ಮಾಡುವ ಯೋಜನೆಗೆ ಶ್ರಮಿಸುವ ಭರವಸೆ ಇದೆ. ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಅವರಿಗೆ ಸಂಪೂರ್ಣ ಸಹಕಾರ ನೀಡುವುದು ಅಗತ್ಯವಾಗಿದೆ.
-ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ.
