TUMAKURU:SHAKTHI PEETA FOUNDATION
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ, ಬೆಂಗಳೂರಿನಲ್ಲಿ ‘ಸ್ವಿಪ್ಟ್ ಸಿಟಿ, ಕ್ವಿನ್ ಸಿಟಿ, ಎಐ ಸಿಟಿ, ಕ್ವಾಂಟಮ್ ಸಿಟಿ’, ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹವಾದರೂ, ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ಕನಿಷ್ಠ ಒಂದೊಂದು ಬೃಹತ್ ಯೋಜನೆ ಜಾರಿಗೊಳಿಸುವುದು ಸೂಕ್ತವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ‘ಫಾರ್ಮರ್ ಸಿಟಿ/ಅಗ್ರಿಹಬ್ ಸ್ಥಾಪಿಸಿ, ಹಬ್ ಅಂಡ್ ಫೋಕ್ಸ್’ ಮಾದರಿಯಲ್ಲಿ, ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಲಾ 5 ರಂತೆ ಸುಮಾರು 1120 ಕಳೆ-ಬೆಳೆ ಸಂಶೋಧನೆ, ನಾಲೇಡ್ಜ್ ಬ್ಯಾಂಕ್, ಮ್ಯೂಸಿಯಂ ಸ್ಥಾಪನೆಗೆ ರಾಜ್ಯದ ಕೃಷಿ ಆಶ್ರಮಗಳ ತಂಡ ಶ್ರಮಿಸುತ್ತಿದೆ.
1. ರೈತ ಗ್ಯಾರಂಟಿ
2. ರೈತ ಶಕ್ತಿ
3. ಕೃಷಿ ಆಶ್ರಮ
4. ಕೃಷಿ ಪಾಠಶಾಲಾ
5. 1120 ಕಳೆ-ಬೆಳೆ ಸಂಶೋಧನೆ, ನಾಲೇಡ್ಜ್ ಬ್ಯಾಂಕ್, ಮ್ಯೂಸಿಯಂ
ಪಾರ್ಮರ್ ಸಿಟಿ ಮತ್ತು ಪಾರ್ಮರ್ ಕಾರಿಡಾರ್
ಕೆಳಕಂಡ ಯೋಜನೆಗಳ ಅನುಷ್ಠಾನಕ್ಕೆ ವಿವಿಧ ಅನುಭವಿ ತಜ್ಞರ ಜೊತೆ ಸಮಾಲೋಚನೆಯೊಂದಿಗೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ವ್ಯವಹಾರ ಆರಂಭಿಸಲಾಗಿದೆ.
1. ಕೃಷಿ ಸಂಶೋದನಾ ನಗರ
2. ಅಗ್ರಿ ಲಾಜಿಸ್ಟಿಕ್ ಪಾರ್ಕ್
3. ಅಗ್ರಿ ಮಾಲ್
4. ಅಗ್ರಿ ಹಬ್
5. ಅಗ್ರಿ ಟೂರಿಸಂ ವ್ಯಾಲಿ
6. ಕೃಷಿ ವ್ಯಾಲಿ
7. ತೋಟಗಾರಿಕಾ ವ್ಯಾಲಿ
8. ಅರಣ್ಯ ವ್ಯಾಲಿ
9. ಆಯುಷ್ ವ್ಯಾಲಿ
10. ಪಶುವೈದ್ಯಕೀಯ ವ್ಯಾಲಿ
11. ರೇಷ್ಮೆ ವ್ಯಾಲಿ
12. ಮೀನುಗಾರಿಕಾ ವ್ಯಾಲಿ
13. ಸ್ಪೈಸ್ ವ್ಯಾಲಿ
14. ಫಾರ್ಮಾಕಲ್ಚರ್ ವ್ಯಾಲಿ
15. ಪ್ಲೋರಿಕಲ್ಚರ್ ವ್ಯಾಲಿ
16. ಕುಶಲ ಕರ್ಮಿಗಳ ವ್ಯಾಲಿ
17. ಜೇನು ವ್ಯಾಲಿ
18. ಕೌ ವ್ಯಾಲಿ
ಕೃಷಿ ಸಚಿವರಾದ ಶ್ರೀ ಚೆಲುವರಾಯಸ್ವಾಮಿರವರ ನಿರ್ದೇಶ£ ಪತ್ರÀ, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರ ಪತ್ರ, ಮುಖ್ಯ ಕಾರ್ಯದರ್ಶಿರವರಾದ ಶ್ರೀಮತಿ ಶಾಲಿನಿರಜನೀಶ್ ರವರ ಪತ್ರ, ಈ ಎಲ್ಲಾ ಕಡತಗಳು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರ ಕಚೇರಿ ಸೇರಿವೆ.
ರಾಜ್ಯದ ಕೃಷಿಕರ ಕನಸಿನ ವಿನೂತನ ಯೋಜನೆಗೆ ಮುನ್ನುಡಿ ಬರೆಯಲಿದ್ದಾರೆ ಎಂಬ ಆಶಾಭಾವನೆ ಇದೆ. ಆಸಕ್ತರು ತಮ್ಮ ಸಲಹೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಬಹಿರಂಗ ಮನವಿ ಮಾಡಲಾಗಿದೆ.
ರಾಜ್ಯಪಾಲರಿಗೂ ಮನವಿ ಮಾಡಲಾಗಿದೆ.

