16th January 2026
Share

TUMAKURU:SHAKTHI PEETA FOUNDATION

ನೀರಿಗಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಮಟ್ಟದಲ್ಲಿ, ಭಾರತ ದೇಶದಲ್ಲಿ ವಿವಿಧ ರಾಜ್ಯಗಳ ಮಟ್ಟದಲ್ಲಿ, ರಾಜ್ಯದಲ್ಲಿ ವಿವಿಧ ಜಿಲ್ಲೆಗಳ ಮಟ್ಟದಲ್ಲಿ, ಜಿಲ್ಲೆಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ, ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳ ಮಟ್ಟದಲ್ಲಿ, ಗ್ರಾಮದಲ್ಲಿ ರೈತರ ಮಟ್ಟದಲ್ಲಿ, ನೀರಿಗಾಗಿ ಜಗಳ ನಡೆಯುತ್ತಿದೆ.

ಕರ್ನಾಟಕ ರಾಜ್ಯದ ವಿವಿಧ 7 ನದಿ ಪಾತ್ರಗಳ. ನೀರನ್ನು ಇಂತಿಷ್ಟು ನೀರನ್ನು ಇಂತಹ ಪ್ರದೇಶಗಳಿಗೆ ಬಳಸಬೇಕು ಎಂಬ ಬಗ್ಗೆ ಕಾನೂನು ರೂಪಿಸುವ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಲಾಯಿತು. ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ನಮ್ಮ 25 ವರ್ಷಗಳ ನಿರಂತರ ಹೋರಾಟ. ಶ್ರೀ ಹೆಚ್.ಕೆ.ಪಾಟೀಲ್ ರವರು ಜಲಸಂಪನ್ಮೂಲ ಸಚಿವರಾಗಿದ್ದಾಗ, ದಿ. ಎಸ್.ಎಂ.ಕೃಷ್ಣರವರು ಮುಖ್ಯ ಮಂತ್ರಿಯಾಗಿದ್ದರು. ಅಂದು ಅವರು ಕೈಗೊಂಡ ದೃಢ ನಿರ್ಧಾರವೇ ಇಂದಿನ ಎತ್ತಿನಹೊಳೆ ಯೋಜನೆಗೆ ಮುನ್ನುಡಿಯಾಗಿತ್ತು.

ಆ ಹೋರಾಟದ ಮಜಲುಗಳು, ಎತ್ತಿನಹೊಳೆ ಯೋಜನೆಯ ನೀರಿನ ಬಗ್ಗೆ ಅರ್ಥಗರ್ಭಿತವಾದ ಚರ್ಚೆ ನಡೆಯಿತು. ಸಭೆಯ ಅಂತಿಮ ಪಲಿತಾಂಶ ಅಂತರ ರಾಷ್ಟ್ರೀಯ ಮಟ್ಟದ ಮ್ಯೂಸಿಯಂ’ ಸ್ಥಾಪಿಸಲು ಸಚಿವರ ಸೂಚನೆ.

ನವದೆಹಲಿಯಲ್ಲಿನ ಕರ್ನಾಟಕ ಭವನದಲ್ಲಿ  ನಡೆದ ಸಭೆಯಲ್ಲಿ, ಕಾನೂನು ಮತ್ತು ಪ್ರವಾಸೋಧ್ಯಮ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ರವರು, ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ನಿವೃತ್ತ ಅಧಿಕಾರಿ ಶ್ರೀ ಆರ್. ಮುರುಳೀಧರ್ ನಾಯಕ್ ರವರು   ಕುಂದರನಹಳ್ಳಿ ರಮೇಶ್ ಇದ್ದಾರೆ.