TUMAKURU:SHAKTHIPEETA FOUNDATION
ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಕೃಷಿ ಸಚಿವರಾದ ಶ್ರೀ ಚೆಲುವನಾರಾಯಣಸ್ವಾಮಿರವರು, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಬರೆದ ಪತ್ರಗಳು ಸೇರಿದಂತೆ, ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯವರು, ಈಗಾಗಲೇ ಕೃಷಿ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಿಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದ ಹಿನ್ನಲೆಯಲ್ಲಿ, ದಿನಾಂಕ:19.11.2025 ರಂದು ವಿಕಾಸ ಸೌಧದಲ್ಲಿ ಕೃಷಿ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯªರಾದ ಶ್ರೀ ಸೆಲ್ವಕುಮಾರ್ ರವರಿಗೆ ಶೀಘ್ರವಾಗಿ ಸಭೆ ಆಯೋಜಿಸಲು ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಇದ್ದರು. ಕೃಷಿ ಆಶ್ರಮ / 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ಪಾರ್ಮರ್ ಸಿಟಿ, ಪಾರ್ಮರ್ ಕಾರಿಡಾರ್ ಯೋಜನೆಗಳ ಕಡತ ಅನುಸರಣೆ ನಿರಂತರವಾಗಿ ಸಾಗಿದೆ.
ಮುಂದಿನವಾರ ತುಮಕೂರಿನಲ್ಲಿ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯನ್ನು ಡಾ.ನಾಗಭೂಷಣ್ ರವರು ಮತ್ತು ಡಾ.ಜಗನ್ನಾಥ್ ರವರು ಆಯೋಜಿಸಲಿದ್ದಾರೆ.
