21st November 2025
Share

TUMAKURU:SHAKTHIPEETA FOUNDATION

1948 ರಿಂದ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆರಂಭಿಸಿದ್ದರೂ, ಈಗ ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರಕ್ಕೆ ಆತ್ಮ ವಿಶ್ವಾಸ ಹೆಚ್ಚಿಸಿದೆ, ಸರ್ಕಾರ ಶೀಘ್ರವಾಗಿ ವರದಿ ಸಲ್ಲಿಸಿದ ನಂತರ ಪಕ್ಷಾತೀತವಾಗಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಬಳಿ ನಿಯೋಗ ಹೋಗಿ ಮನವಿ ಮಾಡುವುದು ಅಗತ್ಯವಾಗಿದೆ.    ಯೋಜನೆಗೆ ಶ್ರಮಿಸಿರುವ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ. ಶಿವಕುಮಾರ್‍ರವರು ಸೇರಿದಂತೆ, ರಾಜ್ಯದ ಎಲ್ಲಾ ಅವಧಿಯ ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ ಸಚಿವರುಗಳಿಗೂ, ತಜ್ಞರುಗಳಿಗೂ, ಅಧಿಕಾರಿಗಳಿಗೂ, ಅಭಿನಂದನೆ ಸಲ್ಲಿಸುತ್ತೇನೆ.

ದಿನಾಂಕ:21.11.2025 ರಂದು ತುಮಕೂರಿನ ಸಾಯಿಮಂದಿರದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ  ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್   ರವರು ಮೇಕೆ ದಾಟು  ಯೋಜನೆಯ ಬಗ್ಗೆ ನ್ಯಾಯಾಲಯದ ತೀರ್ಪುನ್ನು  ಸ್ವಾಗತಿಸಿದರು. ಜೊತೆಯಲ್ಲಿ ಕುಂದರನಹಳ್ಳಿ ರಮೇಶ್ ಇದ್ದಾರೆ.

                            ನೀರಿನ ಹೆಜ್ಜೆ  

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಬರೆದಿರುವ ‘ನೀರಿನ ಹೆಜ್ಜೆ’ ವಿವಾದ – ಒಪ್ಪಂದ- ತೀರ್ಪು, ಪುಸ್ತಕದಲ್ಲಿನ ಬರಡು ಇಳೆಗೆ ನೀರುಣಿಸುವಲಿರುವ ಎತ್ತಿನಹೊಳೆ ಯೋಜನೆಯಲ್ಲಿ  ದಿ.‘ಜಿ.ಎಸ್.ಪರಮಶಿವಯ್ಯ ಶ್ರಮ’ವನ್ನು ಉಲ್ಲೇಖ ಮಾಡಿರುವುದು ನಿಜಕ್ಕೂ ಅಭಿನಂದನೀಯ.

ಜಲಗ್ರಂಥ

  ವಿವಿಧ ತಜ್ಞರುಗಳೊಂದಿಗೆ ಸಮಾಲೋಚನೆ ನಡೆಸಿ, ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ಒದಗಿಸಲು ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ, ಕರ್ನಾಟಕ ಸಮಗ್ರ ನೀರಾವರಿ ಯೋಜನೆಗಳ ವಸ್ತು ನಿಷ್ಠ ವರದಿಯನ್ನು ಶೀಘ್ರವಾಗಿ ಹೊರತರಲಾಗುವುದು.

  ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಹಾಗೂ ಆಸಕ್ತ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯಲು ಉದ್ದೇಶಿಸಲಾಗಿದೆ.

  ಕರ್ನಾಟಕ ರಾಜ್ಯದ್ಯಾಂತ, 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ತಲಾ 5 ರಂತೆ  ರಚನೆಯಾಗುತ್ತಿರುವ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್‍ಗಳ/ಕೃಷಿ ಆಶ್ರಮಗಳ, ಪ್ರಗತಿಪರ ರೈತ ತಜ್ಞರ ಸಹಭಾಗಿತ್ವದೊಂದಿಗೆ, ರಾಜ್ಯದ ಮೂಲೆ, ಮೂಲೆಗಳಲ್ಲಿರುವ ನೀರಾವರಿ ತಜ್ಞರು, ನೀರಾವರಿ ಹೋರಾಟಗಾರರು, ನೀರಾವರಿ ಅಧ್ಯಯನ ಸಂಸ್ಥೆಗಳು, 28 ಲೋಕಸಭಾ, 14 ರಾಜ್ಯಸಭಾ, 225 ವಿಧಾನ ಸಭಾ, 75 ವಿಧಾನಪರಿಷತ್ ಮತ್ತು 2 ದೆಹಲಿ ವಿಶೇಷ ಜನಪ್ರತಿನಿಧಿಯವರು ಸೇರಿದಂತೆ 344 ಜನರ ಅಭಿಪ್ರಾಯಗಳನ್ನು ಸಹ ಪಡೆಯಲಾಗುವುದು. 

 ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ, ಮಾಜಿ ಮುಖ್ಯಮಂತ್ರಿಯವರ ಮತ್ತು ಮಾಜಿ ನೀರಾವರಿ ಸಚಿವರ ದೂರದೃಷ್ಠಿಗಳಿಗೂ ಒತ್ತು ನೀಡಲಾಗುವುದು.

 ಮಾದಾವರದಿಂದ – ತುಮಕೂರುವರೆಗೆ ಮೆಟ್ರೋ ಗೊಂದಲ ಬೇಡ 

  ಬೆಂಗಳೂರಿನ ಮಾದಾವರದಿಂದ-ತುಮಕೂರುವರೆಗೆ ಮೆಟ್ರೋ ವಿಸ್ತರಣೆ ಯೋಜನೆಗೆ ಸ್ವಾಗತಿಸುತ್ತೇನೆ, ನನ್ನ ಅವಧಿಯಲ್ಲಿ ಶ್ರಮಿಸಿದ್ದರೂ ಈ ಹಂತಕ್ಕೆ ಹೋಗಿರಲಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು ಮತ್ತು ಸರ್ಕಾರಗಳ ವಿಶೇಷ ಆಸಕ್ತಿ ಮೆಚ್ಚುವಂತದ್ದು. ಭವಿಷ್ಯದ ದೃಷ್ಟಿಯಿಂದ ವಸಂತನರಸಾಪುರದವರೆಗೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ.   ಯೋಜನೆಯ ಬಗ್ಗೆ ಬಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಸಂಸದ ಶ್ರೀ ತೇಜಸ್ವಿ ಸೂರ್ಯರವgನ್ನು ತುಮಕೂರಿಗೆ ಆಹ್ವಾನಿಸಿ, ಒಂದು ಸಂವಾದ ನಡೆಸುವುದು ಅಗತ್ಯವಾಗಿದೆ. ಕೇಂದ್ರ ಸಚಿವರಾದ ಶ್ರೀ ವಿ.ಸೊಮಣ್ಣನವರು, ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರರವರು, ತುಮಕೂರು ಗ್ರಾಮಾಂತರದ ಶಾಸಕರಾದ ಶ್ರೀ ಸುರೇಶ್ ಗೌಡರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರªರು ಶ್ರಮಿಸುವ ಭರವಸೆ ಇದೆ.

ತುಮಕೂರು ಏರ್ ಪೋರ್ಟ್ ಪ್ರಸ್ತಾವನೆ ಸಲ್ಲಿಸಿ.

ಬೆಂಗಳೂರಿನ 2 ನೇ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣವನ್ನು ತುಮಕೂರು ಜಿಲ್ಲೆಯಲ್ಲಿ ನಿರ್ಮಾಣ ಮಾಡಲು ನನ್ನ ಅವಧಿಯಲ್ಲಿ ಕಡತ ಆರಂಭಿಸಲಾಗಿತ್ತು. ಈಗ ಬೆಂಗಳೂರಿನ ಅಕ್ಕ-ಪಕ್ಕದ ಸ್ಥಳಗಳಿಗೆ, ಏರ್ ಪೋರ್ಟ್ ಆಥಾರಿಟಿ ಆಫ್ ಇಂಡಿಯಾ ನೀಡಿರುವ ಸಲಹೆಗಳನ್ನು ಪರಿಗಣಿಸಿ, ತುಮಕೂರು ಏರ್ ಪೋರ್ಟ್ ಸ್ಥಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು  ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಬಹಿರಂಗ ಮನವಿ,

ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗೆ ಜಮೀನು ಸ್ವಾಗತ

ನಾನು 1984 ರಲ್ಲಿ ಲೋಕಸಭೆಗೆ ಪಾದಾರ್ಪಣೆ ಮಾಡಿದ ಆರಂಭದಲ್ಲಿ ಲೋಕಸಭೆ ಆವರಣದಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಮಾಡಲು ಶ್ರಮಿಸಿದ್ದೆ, 5 ಭಾರಿ ಲೋಕಸಭಾ ಸದಸ್ಯನಾಗಿ ಕೊನೆಯಲ್ಲಿ, ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಲೋಕೊಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆರವರಿಗೆ, ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ದೆಹಲಿ ರೆಸಿಡೆಂಟ್ ಕಮೀಷನರ್ ರವರಿಗೆ ಮನವಿ ಸಲ್ಲಿಸಿದ್ದೆ,

  ಜಮೀನು ಮಂಜೂರು ಮಾಡಲು ಸÀಹಕರಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲರಿಗೂ ಅಭಿನಂದನೆಗಳು. 2023 ರಿಂದ ಇದೂವರೆಗೂ ನಿರಂತರವಾಗಿ ಕಡತದ ಅನುಸರಣೆ ಮಾಡಿರುವ ಕುಂದರನಹಳ್ಳಿ ರಮೇಶ್ ಕೆಲಸವೂ ಮೆಚ್ಚುವಂತದ್ದು. ಶೀಘ್ರವಾಗಿ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಲು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಬಸವರಾಜ್ ರವರು ಬಹಿರಂಗ ಮನವಿ ಮಾಡಿದ್ದಾರೆ