5th December 2025
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮಾನ್ಯ ಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಸೂಚಿಸಿದ್ದಾರೆ. ಮುಖ್ಯಕಾರ್ಯದರ್ಶಿಯವರು, ಕೃಷಿ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್‍ರವರು ಮತ್ತು ಲೋಕೋಪಯೋಗಿ ಕಾರ್ಯದರ್ಶಿಯವರಾದ ಶ್ರೀ ಸತ್ಯನಾರಯಣ್ ರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ರವಾನಿಸಿದ್ದಾರೆ.

   ಕರ್ನಾಟಕ ರಾಜ್ಯ ಸರ್ಕಾgದÀ, ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು. ಫಾರ್ಮರ್ ಸಿಟಿ, ಫಾರ್ಮರ್ ಕಾರಿಡಾರ್, ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ  ಪರಿಣಿತ ತಜ್ಞರ ಸಲಹೆ ಪಡೆದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಬೆಂಬಲ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ, ಬೆಂಗಳೂರಿನಲ್ಲಿ  ಸ್ವಿಪ್ಟ್ ಸಿಟಿ, ಕ್ವಿನ್ ಸಿಟಿ, ಎಐ ಸಿಟಿ, ಕ್ವಾಂಟಮ್ ಸಿಟಿ’, ಸ್ಥಾಪಿಸುವಂತೆ, ತುಮಕೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ

1.            ಫಾರ್ಮರ್ ಸಿಟಿ

2.            ಫಾರ್ಮರ್ ಕಾರಿಡಾರ್

3.            ಕೃಷಿ ಸಂಶೋಧನಾ ನಗರ

4.            ಅಗ್ರಿಹಬ್ ಸ್ಥಾಪಿಸಿ, ಹಬ್ ಅಂಡ್ ಫೋಕ್ಸ್ ಮಾದರಿಯಲ್ಲಿ, ರಾಜ್ಯದ್ಯಾಂತ ರೈತರ ಸಹಭಾಗಿತ್ವದಲ್ಲಿ  ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 5 ರಂತೆ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್.

5.            ರಾಜ್ಯದಲ್ಲಿ ಹುಟ್ಟುವ 400 ನದಿಗಳ ಅಕ್ಕ-ಪಕ್ಕದಲ್ಲಿ ಮತ್ತು 810 ಪ್ರವಾಸಿ ಕೇಂದ್ರಗಳ ಬಳಿ ಕೃಷಿ ಆಶ್ರಮ/ಕೃಷಿ ಪ್ರವಾಸೋಧ್ಯಮ/ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪನೆಗೆ ವಿಶೇಷ ಆದ್ಯತೆ

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆದೇಶಿಸಿದ್ದಾರೆ. 

  ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರು ಮತ್ತು ಕು.ಶೋಭಾ ಕರಂದ್ಲಾಜೆಯವರನ್ನು ಬೇಟಿ ಮಾಡಿ ಸಮಾಲೋಚನೆ ಮಾಡಲಾಗಿತ್ತು. ಅವರು ರಾಜ್ಯ ಮಟ್ಟದ ಯೋಜನೆಯಾದ್ದರಿಂದ ರಾಜ್ಯ ಸರ್ಕಾರದಿಂದ- ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಬಂದಲ್ಲಿ ಪಕ್ಷಾ ತೀತವಾಗಿ ಸಹಕರಿಸುವ ಭರವಸೆ ನೀಡಿದ್ದಾರೆ.

ಈ ಎಲ್ಲಾ ಸಂದರ್ಭದಲ್ಲಿ ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹಾಜರಿದ್ದು ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಿzರು.

ರಾಜ್ಯದ ರೈತರ ಪರವಾಗಿ ಶ್ರಮಿಸಲು ದೆಹಲಿಯಲ್ಲಿ ಒಂದು ಉನ್ನತ ಮಟ್ಟದ ಅಧಿಕಾರಿಗಳ ತಂಡ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ.