TUMAKURU:SHAKTHIPEETA FOUNDATION
ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಕೃಷಿ ಆಯುಕ್ತಾಲಯದಲ್ಲಿ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿ ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ, ರೈತ ಶಕ್ತಿ/ರೈತ ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆ ಆಯೋಜಿಸಿದ್ದಾರೆ.

ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರಮಗಳ ಪರಿಕಲ್ಪನೆಯ ಹಲವಾರು ಯೋಜನೆಗಳು ಮತ್ತು ಶಕ್ತಿಪೀಠ ಫೌಂಡೇಷನ್ ಇದೂವರೆಗೂ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು, ತುಮಕೂರು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ,ಬಿ.ಜ್ಯೋತಿಗಣೇಶ್ ರವರು, ಮುಖ್ಯಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿರಜನೀಶ್ ರವರು ಸೇರಿದಂತೆ ಎಲ್ಲರಿಗೆ ಬರೆದ ಮನವಿಗಳು ಸಹ ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಕಚೇರಿಗೆ ಬಂದು ತಲುಪಿವೆ.
ಈ ಎಲ್ಲಾ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಿ, ಸಭೆ ನಡವಳಿಕೆಗಳನ್ನು, ಮಾನ್ಯ ಕೃಷಿ ಸಚಿವರು, ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಒಂದು ‘ಪುಸ್ತಕ’ ರೂಪದಲ್ಲಿ ಪ್ರಕಟಿಸಿ ರಾಜ್ಯದ್ಯಾಂತ ‘ರೈತ ಜ್ಞಾನಿಗಳ’ ಅಭಿಪ್ರಾಯಗಳನ್ನು ಸಂಗ್ರಹಿಸಲು ಚಿಂತನೆ ನಡೆಸಲಾಗಿದೆ.
ಕೃಷಿ ಆಶ್ರಮಗಳ ಹರಿಕಾರರಾದ ಡಾ.ನಾಗಭೂಷಣ್ ರವರು, ಡಾ.ಜಗನ್ನಾಥ್ ರವರು, ಪಟ್ಟಿ ಮಾಡಿ ಕೊಟ್ಟಿರುವ 109 ಕೃಷಿ ಆಶ್ರಮ/ಕೃಷಿ ಪ್ರವಾಸೋಧ್ಯಮಗಳ ಪಟ್ಟಿಯನ್ನು ಸಹ ಈಗಾಗಲೇ ಆಯೋಗಕ್ಕೆ ಸಲ್ಲಿಸಲಾಗಿದೆ. ಇವರಲ್ಲದೆ ಇನ್ನೂ ಆನೇಕ ಪ್ರಗತಿಪರ ರೈತರುಗಳು ಸಹ ಆನೇಕ ಸಲಹೆಗಳನ್ನು ನೀಡಿದ್ದಾರೆ. ಎಲ್ಲರಿಗೂ ಲಿಖಿತ ಸಲಹೆ ನೀಡಲು ಮುಕ್ತ ಅವಕಾಶವಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕೃಷಿ ತಜ್ಞರುಗಳು ತಮ್ಮ ಅಮೂಲ್ಯವಾದ ಜ್ಞಾನವನ್ನು ದಾನ ಮಾಡುತ್ತಿದ್ದಾರೆ. ಕೃಷಿಗೆ ಸಂಭಂದಿಸಿದ ನೀತಿ ಆಯೋಗದ ಸಲಹೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಇದೂವರೆಗೂ ಅನೇಕ ತಜ್ಞರುಗಳ ನೀಡಿರುವ ವರದಿಗಳ ಬಗ್ಗೆಯೂ ಅವಲೋಕನ ಆರಂಭವಾಗಿದೆ.
ಅಶೋಕ್ ದಳವಾಯಿರವರು ಕೇಂದ್ರ ಸರ್ಕಾರದ ‘ಡಬ್ಬಲ್ ದಿ ಫಾರ್ಮರ್ ಇನ್‍ಕಮ್’ ಬಗ್ಗೆ ವಿಶೇಷವಾದ ಅಧ್ಯಯನ ಮಾಡಿದ್ದಾರೆ. ಇದೊಂದು ರಾಜ್ಯದ ರೈತರ ಪಾಲಿಗೆ ವರದಾನವಾಗುವ ವಿಶೇಷ ಯೋಜನೆಗಳು ಜಾರಿಯಾಗಲು ಒಳ್ಳೆಯ ಅವಕಾಶ ಎಂದರೆ ತಪ್ಪಾಗಲಾರದು.
ಅಂದಿನ ಸಭೆಗೆ ಎಷ್ಟು ಜನ ಭಾಗವಹಿಸಬೇಕು, ಎಂಬ ಬಗ್ಗೆ ಡಾ.ನಾಗಭೂಷಣ್ ರವರು, ಡಾ.ಜಗನ್ನಾಥ್ ರವರು, ಗೂಗಲ್ ಸಭೆ ಆಯೋಜಿಸಿ ಆಹ್ವಾನ ನೀಡಲಿದ್ದಾರೆ. 109 ಜನ ರೈತರು ಹಾಗೂ ಆಸಕ್ತ ರಾಜ್ಯದ ಯಾವುದೇ ರೈತರು ಸಹ, ಲಿಖಿತವಾದ ತಮ್ಮ ಕನಸಿನ ವರದಿಗಳೊಂದಿಗೆ ಪತ್ರವನ್ನು ನೀಡುವುದು ಸೂಕ್ತವಾಗಿದೆ. ನನ್ನ ಪ್ರಕಾರ ಎಲ್ಲರೂ ವೈಯಕ್ತಿವಾಗಿ ಬಂದು ಅಧ್ಯಕ್ಷರಿಗೆ ಮನವಿ ಪತ್ರ ನೀಡುವುದು ಪ್ರಜಾಪ್ರಭುತ್ವದ ಮಾರ್ಗ.
ರೈತರ ಮತ್ತು ಜ್ಞಾನಿಗಳ ಲಿಖಿತ ಅಭಿಪ್ರಾಯಗಳನ್ನು ಸಹ ಪುಸ್ತಕದಲ್ಲಿ ಪ್ರಕಟಿಸುವ ಆಲೋಚನೆ ಇದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಸಲ್ಲಿಸುವ ಪ್ರಸ್ತಾವನೆಗಳನ್ನು ನುರಿತ ತಜ್ಞರಿಂದ ಸಿದ್ಧಪಡಿಸಲು ಚಿಂತನೆ ನಡೆಸಲಾಗಿದೆ. ಆಸಕ್ತರು ಸಂಪರ್ಕಿಸಲು ಬಹಿರಂಗ ಮನವಿ ಮಾಡಲಾಗಿದೆ. ಕನ್ನಡದಲ್ಲಿ ಮತ್ತು ಇಂಗ್ಲೀಷ್‍ನಲ್ಲಿ ಪುಸ್ತಕ ಬರೆಯಲು ಆಸಕ್ತಿ ಇರುವವರು ಸಂಪರ್ಕಿಸಬಹುದು. ಸೂಕ್ತ ಸಂಭಾವನೆ ನೀಡಲಾಗುವುದು. ಉಚಿತ ಸೇವೆ ಮಾಡಿದರೂ ಸ್ವಾಗತಿಸಿ ಗೌರವಿಸಲಾಗುವುದು.
