13th December 2025
Share

ಶೀಘ್ರದಲ್ಲಿ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನªರು ಮತ್ತು ಉಪಮುಖ್ಯಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಕೃಷಿ/ಫಾರ್ಮರ್   ನಾಲೇಡ್ಜ್ ಬ್ಯಾಂಕ್‍ಗೆ ಚಾಲನೆ ನೀಡುವುದಾಗಿ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಅಶೋಕ್ ದಳವಾಯಿರವರು ಘೋಶಿಸಿದರು.

 ಯಾವುದೇ ವಿದ್ಯಾರ್ಹತೆ, ವಯಸ್ಸಿನ ಮಿತಿ ಇಲ್ಲದೆ, ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಗಳಲ್ಲಿರುವ ಕೃಷಿ ಸಾಧಕರ,  ಸಾಧನೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಸಾಧಕರಿಗೂ ಅವರ ಸಾಧನೆಗೆ ಸರ್ಕಾರದಿಂದ/ಸಕ್ಷಮ ಪ್ರಾಧಿಕಾರಗಳಿಂದ ವೈಜ್ಞಾನಿಕ ಸರ್ಟಿಪೀಕೇಷನ್ ನೀಡಿ ಗೌರವಿಸಲು ಸಹ ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಭಾಗವಹಿಸಿದ್ದ 17 ಜಿಲ್ಲೆಗಳ ಸುಮಾರು 27 ಕ್ಕೂ ಹೆಚ್ಚು ಸಾಧಕರು  ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು, 

ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 5 ರಂತೆ ರಚಿಸುತ್ತಿರುವ 1120 ಕೃಷಿ ಆಶ್ರಮಗಳ ಸಭೆ, ಕೃಷಿ ಸಚಿವರಾದ ಶ್ರೀ ಚಲುವರಾಯ ಸ್ವಾಮಿರವರ  ಸೂಚನೆ ಮೇರೆಗೆ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಅಶೋಕ್ ದಳವಾಯಿರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕೃಷಿ ಆಯುಕ್ತಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆವರೆಗೂ ನಡೆಯಿತು. 

ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕೃಷಿ ಆಶ್ರಮಗಳ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ, ಶಕ್ತಿಪೀಠ ಫೌಂಡೇಷನ್ ಮನವಿಗಳಲ್ಲಿರುವ ಎಲ್ಲಾ ಅಂಶಗಳ ಬಗ್ಗೆ, ಅಗತ್ಯ ಕ್ರಮಕೈಗೊಳ್ಳಲು, ಸಚಿವ ಸಂಪುಟದ ನಿರ್ಣಯ ಮಾಡಿಸಲು, ಒಂದು ವಾರದಲ್ಲಿ ಕಡತ ಸಿದ್ಧಪಡಿಸಲು, ಹಾಜರಿದ್ದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚಿಸಿದರು, ಭಾಗವಹಿಸಿದ್ಧ ಸಾಧಕರೆಲ್ಲರೂ ತಪ್ಪಾಳೆ ತಟ್ಟುವ ಮೂಲಕ ಬೆಂಬಲ ವ್ಯಕ್ತ ಪಡಿಸಿದರು.

 ಅಧಿಕೃತವಾಗಿ ಇದೊಂದು ಸರ್ಕಾರಿ ಕಾರ್ಯಕ್ರಮವಾಗಿರುವುÀದರಿಂದ  ಸಭೆಯ ನಡವಳಿಕೆ ನಂತರ ಚರ್ಚೆಯ ಪ್ರತಿಯೊಂದು ಅಂಶಗಳ ಬಗ್ಗೆ ವಿವರವಾದ ವರದಿ ಮಾಡಲಾಗುವುದು.

ಈ ಸಭೆಯಲ್ಲಿ ರಾಜ್ಯದ 17 ಜಿಲ್ಲೆಗಳ ರೈತ ಜ್ಞಾನಿಗಳು, ರೈತ ಸಂಶೋಧಕರು, ರೈತ ವಿಜ್ಞಾನಿಗಳು, ಅಧಿಕಾರಿಗಳು,  ಭಾಗವಹಿಸಿದ್ದರು. 109 ಕೃಷಿ ಆಶ್ರಮ/ಕೃಷಿ ಪ್ರವಾಸೋದ್ಯಮ/ 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಪ್ರತಿನಿಧಿಗಳ ಮನವಿ ಪತ್ರಗಳನ್ನು ಸಾಂಕೇತಿಕವಾಗಿ ಅಧ್ಯಕ್ಷರಿಗೆ ಸಲ್ಲಿಸಲಾಯಿತು.

ಚಿತ್ರದಲ್ಲಿ  ಅಧ್ಯಕ್ಷರಾದ ಅಶೋಕ್ ದಳವಾಯಿ, ಸದಸ್ಯ ಕಾರ್ಯದರ್ಶಿ ಸಿ.ಬಿ.ಬಾಲರೆಡ್ಡಿ, ಅಧಿಕಾರಿ ಅನಂತ್, ಕುಂದರನಹಳ್ಳಿ ರಮೇಶ್,  ಡಾ.ನಾಗಭೂಷಣ್, ಡಾ.ಜಗನ್ನಾಥ್, ಮಹೇಶ್ ಮಳವಳ್ಳಿ, ಮಾರುತಿರಾವ್, ಪರುಶರಾಮ್, ಶಿವಣ್ಣ,  ಇದ್ದಾರೆ.